2023ರ ಗೂಗಲ್ ಸರ್ಚ್ನಲ್ಲಿ ‘ಜವಾನ್’ ಚಿತ್ರಕ್ಕೆ ನಂ.1 ಸ್ಥಾನ; ಕನ್ನಡದ ಸಿನಿಮಾಗಳು ಇಲ್ಲವೇ?
ಈ ಪಟ್ಟಿಯಲ್ಲಿ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗೆ ನಂಬರ್ 1 ಸ್ಥಾನ ಸಿಕ್ಕಿದೆ. ‘ಗದರ್ 2’ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರಿ ಚರ್ಚೆ ಹುಟ್ಟುಹಾಕಿದ್ದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾಗೆ 3ನೇ ಸ್ಥಾನ ಸಿಕ್ಕಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಇದೆ.
ನಟ ಶಾರುಖ್ ಖಾನ್ (Shah Rukh Khan) ಅವರ ಪಾಲಿಗೆ 2023ರ ವರ್ಷ ಸಖತ್ ಲಾಭದಾಯಕವಾಗಿದೆ. ಈ ವರ್ಷ ಅವರು ನಟಿಸಿದ ಎರಡು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ‘ಜವಾನ್’, ‘ಪಠಾಣ್’ ಸಿನಿಮಾಗಳು ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿವೆ. ಗಲ್ಲಾಪೆಟ್ಟಿಗೆ ಗಳಿಕೆ ಮಾತ್ರವಲ್ಲದೇ ಗೂಗಲ್ ಹುಡುಕಾಟದಲ್ಲೂ (Most searched Movies on Google) ಶಾರುಖ್ ಖಾನ್ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ. 2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ ನಟನೆಯ ‘ಜವಾನ್’ (Jawan Movie) ಸಿನಿಮಾಗೆ ನಂಬರ್ 1 ಸ್ಥಾನ ಸಿಕ್ಕಿದೆ.
2023ರಲ್ಲಿ ಸೂಪರ್ ಹಿಟ್ ಆದ ಮತ್ತೊಂದು ಸಿನಿಮಾ ‘ಗದರ್ 2’ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರಿ ಚರ್ಚೆ ಹುಟ್ಟುಹಾಕಿದ್ದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾಗೆ 3ನೇ ಸ್ಥಾನ ಸಿಕ್ಕಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಇದೆ. 5ನೇ ಸ್ಥಾನದಲ್ಲಿ ‘ಪಠಾಣ್’, 6ನೇ ಸ್ಥಾನದಲ್ಲಿ ‘ದಿ ಕೇರಳ ಸ್ಟೋರಿ’, 7ನೇ ಸ್ಥಾನದಲ್ಲಿ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಇದೆ.
ಇದನ್ನೂ ಓದಿ: ‘ಜವಾನ್’, ‘ಪಠಾಣ್’ ಬಗ್ಗೆ ಕೆಟ್ಟದಾಗಿ ಮಾತಾಡಿದ ನೆಟ್ಟಿಗ; ಶಾರುಖ್ ಕೊಟ್ಟ ಖಡಕ್ ಉತ್ತರ ಏನು?
8ನೇ ಸ್ಥಾನದಲ್ಲಿ ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಇದೆ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ 9ನೇ ಸ್ಥಾನದಲ್ಲಿದೆ. 10ನೇ ಸ್ಥಾನದಲ್ಲಿ ‘ವಾರಿಸು’ ಸಿನಿಮಾ ಇದೆ. ಈ ‘ಟಾಪ್ 10’ ಪಟ್ಟಿಯಲ್ಲಿ ಕನ್ನಡದ ಯಾವುದೇ ಸಿನಿಮಾಗಳೂ ಕೂಡ ಸ್ಥಾನ ಪಡೆದುಕೊಂಡಿಲ್ಲ ಎಂಬುದು ಬೇಸರದ ಸಂಗತಿ. ಮುಂದಿನ ವರ್ಷವಾದರೂ ಈ ಪಟ್ಟಿಯಲ್ಲಿ ಕನ್ನಡದ ಚಿತ್ರಗಳಿಗೆ ಸ್ಥಾನ ಸಿಗಲಿ ಎಂದು ಕನ್ನಡ ಸಿನಿಪ್ರಿಯರು ಆಶಿಸುತ್ತಿದ್ದಾರೆ.
2023ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಿವಿ ಶೋಗಳು ಮತ್ತು ವೆಬ್ ಸಿರೀಸ್ಗಳು: 1. ಫರ್ಜಿ 2. ವೆನ್ಸ್ಡೇ 3. ಅಸುರ್ 4. ರಾನಾ ನಾಯ್ಡು 5. ದಿ ಲಾಸ್ಟ್ ಆಫ್ ಅಸ್ 6. ಸ್ಕ್ಯಾಮ್ 2003 7. ಬಿಗ್ ಬಾಸ್ 17 8. ಗನ್ಸ್ ಆ್ಯಂಡ್ ಗುಲಾಬ್ಸ್ 9. ಸೆ*ಕ್ಸ್/ಲೈಫ್ 10. ತಾಜಾ ಖಬರ್
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.