‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್ ಜೋಡಿ?
‘ಭೂಲ್ ಭುಲಯ್ಯ 3’ ಸಿನಿಮಾಗೆ ಭೂಷಣ್ ಕುಮಾರ್ ಬಂಡವಾಳ ಹೂಡಲಿದ್ದಾರೆ. ಅನೀಸ್ ಬಾಜ್ಮಿ ಅವರು ನಿರ್ದೇಶನ ಮಾಡಲಿದ್ದಾರೆ. ‘ಲವ್ ಆಜ್ ಕಲ್’ ಬಳಿಕ ಮತ್ತೊಮ್ಮೆ ಜೋಡಿಯಾಗಿ ನಟಿಸಲು ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಉತ್ಸುಕರಾಗಿದ್ದಾರೆ. 3 ತಿಂಗಳ ಕಾಲ ಈ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ.
ಬಾಲಿವುಡ್ನಲ್ಲಿ ‘ಭೂಲ್ ಭುಲಯ್ಯ’ ಮತ್ತು ‘ಭೂಲ್ ಭುಲಯ್ಯ 2’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಈ ಸಿನಿಮಾದ ಮೂರನೇ ಪಾರ್ಟ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಮೊದಲ ಪಾರ್ಟ್ನಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ‘ಭೂಲ್ ಭುಲಯ್ಯ 2’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ (Kartik Aaryan) ಹೀರೋ ಆಗಿ ಅಭಿನಯಿಸಿ ಗೆಲುವು ಪಡೆದರು. ಈಗ ಮೂರನೇ ಪಾರ್ಟ್ನಲ್ಲೂ ಕಾರ್ತಿಕ್ ಆರ್ಯನ್ ನಟಿಸಲಿದ್ದಾರೆ ಎಂಬುದು ಖಚಿತವಾಗಿದೆ. ವಿಶೇಷ ಏನೆಂದರೆ, ‘ಭೂಲ್ ಭುಲಯ್ಯ 3’ (Bhool Bhulaiyaa 3) ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಸಾರಾ ಅಲಿ ಖಾನ್ (Sara Ali Khan) ನಟಿಸುತ್ತಾರೆ ಎಂಬ ಗಾಸಿಪ್ ಕೇಳಿಬಂದಿದೆ.
ಈ ಮೊದಲು ‘ಲವ್ ಆಜ್ ಕಲ್’ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರು ಜೋಡಿಯಾಗಿ ನಟಿಸಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂಬ ಮಾತಿದೆ. ಆದರೆ ಆ ಬಳಿಕ ಅವರಿಬ್ಬರು ಬ್ರೇಕಪ್ ಮಾಡಿಕೊಂಡರು. ಈಗ ಅವರು ಮತ್ತೆ ಜೋಡಿಯಾಗಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಹಾರರ್ ಕಥಾಹಂದರದ ‘ಭೂಲ್ ಭುಲಯ್ಯ 3’ ಸಿನಿಮಾಗೆ ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭ ಆಗಲಿದೆ. 2024ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ನಿರ್ಮಾಪಕರು ಅಂದುಕೊಂಡಿದ್ದಾರೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
ಇದನ್ನೂ ಓದಿ: ಸೀರೆಯಲ್ಲೂ, ಮಾಡರ್ನ್ ಡ್ರೆಸ್ನಲ್ಲೂ ನಟಿ ಸಾರಾ ಅಲಿ ಖಾನ್ ಸೂಪರ್
‘ಭೂಲ್ ಭುಲಯ್ಯ 3’ ಸಿನಿಮಾಗೆ ಭೂಷಣ್ ಕುಮಾರ್ ಬಂಡವಾಳ ಹೂಡಲಿದ್ದಾರೆ. ಅನೀಸ್ ಬಾಜ್ಮಿ ಅವರು ನಿರ್ದೇಶನ ಮಾಡಲಿದ್ದಾರೆ. ಮತ್ತೊಮ್ಮೆ ಜೋಡಿಯಾಗಿ ನಟಿಸಲು ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಅವರು ಉತ್ಸುಕರಾಗಿದ್ದಾರೆ. ಬರೋಬ್ಬರಿ 3 ತಿಂಗಳ ಕಾಲ ಈ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.