Bedbug Scam: ತಿಗಣೆ ಕಾಟದಿಂದ ಮುಕ್ತಿ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷ ಲಕ್ಷ ದುಡ್ಡು ದೋಚುತ್ತಿದ್ದ ಇಬ್ಬರ ಬಂಧನ

ಕಳೆದ ಕೆಲವು ದಿನಗಳಿಂದ ಫ್ರಾನ್ಸ್​​ನಲ್ಲಿ ತಿಗಣೆ ಕಾಟ ಹೆಚ್ಚಾಗುತ್ತಿದ್ದು, ಇದನ್ನೇ ಅಸ್ತ್ರವಾಗಿ ಪಡೆದುಕೊಂಡಿದ್ದ ಇಬ್ಬರು ವಂಚಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿಗಣೆ ಕಾಟ ಒಂದೇ ದಿನದಲ್ಲಿ ಮಾಯಾವಾಗಿಬಿಡುತ್ತದೆ ಎಂದು ಲಸಿಕೆ ನೀಡಿ ಜನರನ್ನು ನಂಬಿಸಿ ಲಕ್ಷ ಲಕ್ಷ ದುಡ್ಡು ದೋಚುತ್ತಿದ್ದ ವಂಚಕರು.

Bedbug Scam: ತಿಗಣೆ ಕಾಟದಿಂದ ಮುಕ್ತಿ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷ ಲಕ್ಷ ದುಡ್ಡು ದೋಚುತ್ತಿದ್ದ ಇಬ್ಬರ ಬಂಧನ
Follow us
ಅಕ್ಷತಾ ವರ್ಕಾಡಿ
|

Updated on:Dec 12, 2023 | 11:46 AM

ತಿಗಣೆ ನೋಡಲು ಚಿಕ್ಕದಾಗಿ ಕಂಡರೂ ಕೂಡ ಅದರ ಕಾಟ ಎಷ್ಟಿದೆ ಎಂದು ಅನುಭವಿಸಿದವರಿಗೇ ಗೊತ್ತು. ಎಷ್ಟೇ ಬೇಡವೆಂದರೂ, ಮನೆಗೆ ಎಡೆಬಿಡದೇ ಆಗಮಿಸುವ ಅತಿಥಿಗಳೆಂದರೆ ಅದು ತಿಗಣೆ. ಕಳೆದ ಕೆಲವು ದಿನಗಳಿಂದ ಫ್ರಾನ್ಸ್​​ನಲ್ಲಿ ತಿಗಣೆ ಕಾಟ ಹೆಚ್ಚಾಗುತ್ತಿದ್ದು, ಇದನ್ನೇ ಅಸ್ತ್ರವಾಗಿ ಮಾಡಿ ಜನರನ್ನು ವಂಚಿಸುತ್ತಿದ್ದ ವಂಚಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿಗಣೆ ಕಚ್ಚದಂತೆ ನಿಮ್ಮನ್ನು ರಕ್ಷಿಸುವುದಾಗಿ ಲಸಿಕೆಯೊಂದನ್ನು ಜನರಿಗೆ ನೀಡಿ ನಂಬಿಸಿ ಲಕ್ಷ ಲಕ್ಷ ದುಡ್ಡು ದೋಚುತ್ತಿದ್ದ ವಂಚಕರು ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ವರದಿಗಳ ಪ್ರಕಾರ, ವಂಚಕರಿಬ್ಬರು ತಿಗಣೆ ಕಾಟದಿಂದ ಬಳಲುತ್ತಿರುವ ಮನೆಗಳಿಗೆ ಹೋಗಿ ಒಂದೇ ದಿನದಲ್ಲಿ ತಿಗಣೆಯನ್ನು ನಿಮ್ಮ ಮನೆಯಲ್ಲಿ ಓಡಿಸುವುದಾಗಿ ನಕಲಿ ನಿಯಂತ್ರಣ ಸೇವೆಗಳನ್ನು ನೀಡುತ್ತಿದ್ದರು. ಇದಲ್ಲದೇ ತಿಗಣೆ ಕಚ್ಚದಂತೆ ಲಸಿಕೆಯನ್ನು ನೀಡುವುದಾಗಿ ಜನರನ್ನು ನಂಬಿಸಿದ್ದರು.

ಇದನ್ನೂ ಓದಿ: ಜೇಬಿನಲ್ಲಿ ಲಕ್ಷ ಲಕ್ಷ ದುಡ್ಡಿಟ್ಟುಕೊಂಡಿದ್ದರೂ, ಹಸಿವಿನಿಂದ ಸಾವನ್ನಪಿದ್ದ ಭಿಕ್ಷುಕ

ತಿಗಣೆ ಕಾಟದಿಂದ ಮುಕ್ತಿ ನೀಡುವುದಾಗಿ  ಪ್ರತೀ ಮನೆಯಿಂದ 324 ಡಾಲರ್ ಅಂದರೆ ಭಾರತದ ಕರೆನ್ಸಿಯ ಪ್ರಕಾರ 27 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದರು ಎಂದು ಸಂತ್ರಸ್ತರ ದೂರಿನ ಆಧಾರದ ಮೇಲೆ ಕೇಸು ದಾಖಲಿಸಲಾಗಿತ್ತು. ಕೇಸಿನ ಆಧಾರ ಮೇಲೆ ವಂಚಕರನ್ನು ಪೊಲೀಸರು ಬಂಧಿಸಿದ್ದು,ಇಲ್ಲಿಯವೆರೆಗೆ 48ಕ್ಕಿಂತಲೂ ಹೆಚ್ಚಿನ ಮನೆಗಳಲ್ಲಿ ವಂಚಿಸಿರುವುದಾಗಿ ತಿಳಿದುಬಂದಿದೆ. ಫ್ರೆಂಚ್ ಸರ್ಕಾರವು ಮೇಲೆ ಈ ತಿಗಣೆ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದೀಗಾ ವಿವಾದಾತ್ಮಕ ರಾಜಕೀಯ ವಿಷಯವಾಗಿ ಮಾರ್ಪಟ್ಟಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:45 am, Tue, 12 December 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ