Bed Bugs: ನೀವೆಲ್ಲಾ ನಿದ್ದೆಗೆ ಜಾರಿದಾಗ ಎಚ್ಚರವಾಗುವ ತಿಗಣೆ; ಇದರ ನಾಶಕ್ಕೆ ಹೀಗೆ ಮಾಡಿ

ಹಗಲಿನಲ್ಲಿ ಬ್ಲಾಂಕೆಟ್‌ಗಳು, ಬೆಡ್ ಶೀಟ್‌ಗಳು, ದಿಂಬುಗಳು, ದಿಂಬಿನ ಕವರ್‌ಗಳು ಮತ್ತು ಹೆಡ್‌ಬೋರ್ಡ್‌ಗಳಲ್ಲಿ ಹೆಚ್ಚಾಗಿ ನೆಲೆಯೂರುವ ತಿಗಣೆಗಳು ರಾತ್ರಿಯಲ್ಲಿ ತೊಂದರೆ ಕೊಡಲು ಶುರುಮಾಡುತ್ತಿದೆ. ನೀವು ಇದರ ಸಮಸ್ಯೆ ಅನುಭವಿಸುತ್ತಿದ್ದೆ ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ.

Bed Bugs: ನೀವೆಲ್ಲಾ ನಿದ್ದೆಗೆ ಜಾರಿದಾಗ ಎಚ್ಚರವಾಗುವ ತಿಗಣೆ; ಇದರ ನಾಶಕ್ಕೆ ಹೀಗೆ ಮಾಡಿ
ತಿಗಣೆ ಸಮಸ್ಯೆಗೆ ಪರಿಹಾರ
Follow us
Rakesh Nayak Manchi
|

Updated on: Jun 09, 2023 | 6:30 AM

ಅವು ಬಹುತೇಕ ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಂಡುಬರುತ್ತವೆ. ಅವುಗಳನ್ನು ಸುಮ್ಮನೆ ಬಿಟ್ಟರೆ ನಿಮ್ಮ ದೇಹದಿಂದ ರಕ್ತ ಹೀರುತ್ತವೆ. ಅನೇಕ ರೀತಿಯ ಅಲರ್ಜಿಗಳು ಉಂಟಾಗಬಹುದು. ಹಗಲೆಲ್ಲಾ ಕಣ್ಣಿಗೆ ಕಾಣಿಸಿಕೊಳ್ಳದೆ ರಾತ್ರಿ ಸಮಯದಲ್ಲಿ ಕಾಟ ಕೊಡಲು ಶುರು ಮಾಡುತ್ತವೆ. ಹೌದು, ನಾವು ಹೇಳುತ್ತಿರುವುದು ತಿಗಣೆ (Bed Bugs) ಬಗ್ಗೆ. ಅವು ಚಿಕ್ಕದಾಗಿ ಕಾಣಿಸಬಹುದು ಆದರೆ ಅವುಗಳ ಕಾಟ ತಡಯಲಾಗದು. ಹಾಗಿದ್ದರೆ ಇವುಗಳು ಎಲ್ಲಿ ಅಡಗಿರುತ್ತವೆ? ತಿಗಣೆ ಸಮಸ್ಯೆಗೆ ಪರಿಹಾರವೇನು? ಇಲ್ಲಿದೆ ಮಾಹಿತಿ.

ತಿಗಣೆ ಕೇವಲ 1/4 ಇಂಚು ಉದ್ದ ಬೆಳೆಯುವ ಸಣ್ಣ ಕೀಟಗಳಾಗಿವೆ. ಅವು ಸಮತಟ್ಟಾದ ಹೊಟ್ಟೆಯನ್ನು ಹೊಂದಿರುತ್ತವೆ. ರೆಕ್ಕೆಗಳಿಲ್ಲ. ಕೆಂಪು ಕಂದು ಬಣ್ಣ. ನೀವು ಹಗಲಿನಲ್ಲಿ ಇವುಗಳನ್ನು ನೋಡುವ ಸಾಧ್ಯತೆ ಕಡಿಮೆ, ಏಕೆಂದರೆ ಅವು ರಾತ್ರಿಯಲ್ಲಿ ಮಾತ್ರ ಹೊರಬರುತ್ತವೆ. ಹಗಲು ಹೊತ್ತಿನಲ್ಲಿ ಹಾಸಿಗೆಗಳಲ್ಲಿ ನೆಲೆಯೂರುತ್ತವೆ. ಬ್ಲಾಂಕೆಟ್‌ಗಳು, ಬೆಡ್ ಶೀಟ್‌ಗಳು, ದಿಂಬುಗಳು, ದಿಂಬಿನ ಕವರ್‌ಗಳು ಮತ್ತು ಹೆಡ್‌ಬೋರ್ಡ್‌ಗಳು ಅವುಗಳ ವಾಸಸ್ಥಾನ. ಇದಲ್ಲದೆ, ಮರದ ಬಿರುಕುಗಳು ಮತ್ತು ಗೋಡೆಯ ಬಿರುಕುಗಳಲ್ಲಿ ಗುಂಪುಗಳಾಗಿ ವಾಸಿಸುತ್ತವೆ. ಈ ಕೀಟಗಳು ರಕ್ತವನ್ನು ಹೀರುತ್ತವೆ. ಮನುಷ್ಯರು ರಾತ್ರಿ ನಿದ್ದೆಗೆ ಜಾರಿದಾಗ ಅವು ಆಕ್ಟಿವ್ ಆಗಿ ದಾಳಿ ಶುರುಮಾಡುತ್ತವೆ.

ತಿಗಣೆ ಎಷ್ಟು ಕಾಲ ಬದುಕುತ್ತವೆ?

ಹೆಣ್ಣು ತಿಗಣೆ ತನ್ನ ಜೀವಿತಾವಧಿಯಲ್ಲಿ ನೂರಾರು ಮೊಟ್ಟೆಗಳನ್ನು ಇಡಬಹುದು, ಇದು ಸಾಮಾನ್ಯವಾಗಿ 10 ರಿಂದ 12 ತಿಂಗಳುಗಳವರೆಗೆ ಬದುಕುತ್ತದೆ. ಇದರ ಮೊಟ್ಟೆಯು ತುಂಬಾ ಚಿಕ್ಕದಾಗಿದೆ, ಒಂದು ಸಣ್ಣ ಧೂಳಿನ ಚುಕ್ಕೆಯಂತೆ. ಮಾನವನ ಕಣ್ಣಿಗೆ ಕಾಣಿಸುವುದಿಲ್ಲ. ತಿಗಣೆಗಳು ಮಧ್ಯರಾತ್ರಿಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಸಕ್ರಿಯವಾಗಿರುತ್ತವೆ.

ಇದನ್ನೂ ಓದಿ: ಎಲ್ಲರ ಮನೆಯಲ್ಲಿ ಕಾರುಗಳಿದ್ದರೆ ಈ ನಗರದ ಮನೆ ಮನೆಯಲ್ಲೂ ಇದೆ ವಿಮಾನ; ಕೆಲಸಕ್ಕೆ ವಿಮಾನದಲ್ಲಿ ಹೋಗುವ ನಿವಾಸಿಗಳು!

ತಿಗಣೆ ಸಮಸ್ಯೆಗೆ ಪರಿಹಾರ

ಸೂರ್ಯನ ಕಿರಣಗಳು ಕೋಣೆಯಲ್ಲಿ ಬೀಳಬೇಕು. ಇದನ್ನು ಹೋಗಲಾಡಿಸಲು ಹಾಸಿಗೆ ಮತ್ತು ಇತ್ಯಾದಿಗಳನ್ನು ಬಿಸಿಲಿನಲ್ಲಿ ಇರಿಸಿ. ಏಕೆಂದರೆ ತಿಗಣೆಗಳು ಹೆಚ್ಚು ಶಾಖವನ್ನು ಸಹಿಸುವುದಿಲ್ಲ. ಸೂರ್ಯ ಬಿಸಿಗೆ ಬಹುತೇಕ ತಿಗಣೆಗಳು ಸಾಯುತ್ತವೆ.

ತಿಗಣೆಗಳು ಇರುವ ಜಾಗವನ್ನು ವ್ಯಾಕ್ಯೂಮ್ ಕ್ಲೀನರ್​ನಿಂದ ಸ್ವಚ್ಛಗೊಳಿಸಿ. ಮಂಚಗಳು, ಸೋಫಾಗಳು, ಕುರ್ಚಿಗಳನ್ನು ವ್ಯಾಕ್ಯೂಮ್ ಕ್ಲೀನರ್​ನೊಂದಿಗೆ ಸ್ವಚ್ಛಗೊಳಿಸಿ. ಪೀಠೋಪಕರಣಗಳು ಅಥವಾ ಛಾವಣಿಗಳಲ್ಲಿ ಬಿರುಕುಗಳನ್ನು ಸೀಲ್ ಮಾಡಿ.

ಬ್ಲಾಂಕೆಟ್, ಬೆಡ್ ಕವರ್, ದಿಂಬಿನ ಕವರ್​ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಬಿಸಿ ನೀರಿನಿಂದ ತೊಳೆದರೆ ಇನ್ನೂ ಉತ್ತಮ. ವಾರಕ್ಕೊಮ್ಮೆ ಹೊದಿಕೆಗಳನ್ನು ಬದಲಾಯಿಸಿ. 60 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಹೊದಿಕೆಗಳನ್ನು ಸ್ವಚ್ಛಗೊಳಿಸಿ.

ಲ್ಯಾವೆಂಡರ್ ಎಣ್ಣೆ ತಿಗಣೆ ನಾಶಕ್ಕೆ ಸಹಕಾರಿಯಾಗಿದೆ. ಈ ಎಣ್ಣೆಯಲ್ಲಿ ಅದ್ದಿದ ಬಟ್ಟೆಯಿಂದ ಕುರ್ಚಿ ಮತ್ತು ಹಾಸಿಗೆಯನ್ನು ಒರೆಸಿದರೆ ತಿಗಣೆಗಳು ಮಾಯವಾಗುತ್ತವೆ. ಅದೇ ರೀತಿ ತಿಗಣೆ ಸಮಸ್ಯೆ ಹೆಚ್ಚಾಗಿ ಇರುವ ಜಾಗದಲ್ಲಿ ಕೆಲವು ಪುದೀನ ಎಲೆಗಳನ್ನು ಇಡಬಹುದು. ಕಾಳುಮೆಣಸು ಮತ್ತು ಯೂಕಲಿಪ್ಟಸ್ ಎಣ್ಣೆಯು ತಿಗಣೆಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ