AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

72 ಮಿಲಿಯನ್ ವರ್ಷಗಳ ಹಿಂದೆ ಪೆಸಿಫಿಕ್ ಸಮುದ್ರದಲ್ಲಿ ವಾಸಿಸುತ್ತಿದ್ದ ದೈತ್ಯ ನೀಲಿ ಡ್ರ್ಯಾಗನ್ ಮೊಸಾಸಾರ್‌!

ನೀಲಿ ಡ್ರ್ಯಾಗನ್ ಮೊಸಳೆಯನ್ನು ಹೋಲುವ ತಲೆ, ಬೃಹತ್ ಪ್ಯಾಡಲ್-ಆಕಾರದ ಫ್ಲಿಪ್ಪರ್‌ಗಳು ಮತ್ತು ಆಶ್ಚರ್ಯಕರವಾಗಿ ದೊಡ್ಡ ಹಿಂಭಾಗದ ರೆಕ್ಕೆಗಳು ಹೊಂದಿರಬಹುದು ಎಂದು ಊಹಿಸಲಾಗಿದೆ. ದೊಡ್ಡ ಮುಂಭಾಗದ ರೆಕ್ಕೆಗಳು ಅದನ್ನು ತ್ವರಿತವಾಗಿ ನಡೆಸಲು ಸಹಾಯ ಮಾಡುತ್ತವೆ ಎಂದು ತಜ್ಞರು ಭಾವಿಸುತ್ತಾರೆ, ಆದರೆ ಗಾತ್ರದ ಹಿಂಭಾಗದ ರೆಕ್ಕೆಗಳು ಡೈವಿಂಗ್ ಅಥವಾ ಮೇಲ್ಮೈಗೆ ಬರಲು ಸಹಾಯ ಮಾಡಿರಬಹುದು.

72 ಮಿಲಿಯನ್ ವರ್ಷಗಳ ಹಿಂದೆ ಪೆಸಿಫಿಕ್ ಸಮುದ್ರದಲ್ಲಿ ವಾಸಿಸುತ್ತಿದ್ದ ದೈತ್ಯ ನೀಲಿ ಡ್ರ್ಯಾಗನ್ ಮೊಸಾಸಾರ್‌!
AI ರಚಿತ ಚಿತ್ರ
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on: Dec 13, 2023 | 5:22 PM

Share

72 ದಶಲಕ್ಷ ವರ್ಷಗಳ ಹಿಂದೆ ಪೆಸಿಫಿಕ್ ಸಮುದ್ರಗಳಲ್ಲಿ “ನೀಲಿ ಡ್ರ್ಯಾಗನ್” (Blue Dragon) ಎಂದು ಕರೆಯಲಾಗುವ ಬೃಹತ್ ದೈತ್ಯಾಕಾರದ ಮೊಸಾಸಾರ್‌ ನೆಲೆಕಂಡಿದ್ದವು. ಇತ್ತೀಚೆಗಷ್ಟೇ ಸಂಶೋಧಕರು ಬಯಲಿಗೆಳೆದ ಈ ದೈತ್ಯ ಸಮುದ್ರ ಸರೀಸೃಪವನ್ನು ವಕಯಾಮ ಸೊರ್ಯು ಎಂದು ಕರೆಯಲಾಗಿದ್ದು, ಇದು ವಿಜ್ಞಾನಿಗಳನ್ನು ಬೆರಗುಗೊಳಿಸಿದೆ.

ಜರ್ನಲ್ ಆಫ್ ಸಿಸ್ಟಮ್ಯಾಟಿಕ್ ಪ್ಯಾಲಿಯಂಟಾಲಜಿಯಲ್ಲಿ ಪ್ರಕಟವಾದ ಈ ನಂಬಲಾಗದ ಆವಿಷ್ಕಾರವು ಡೈನೋಸಾರ್ ಯುಗದಿಂದ ನಿರ್ಣಾಮವಾದ ಸಮುದ್ರ ಜೀವಿಯಾದ ಮೊಸಾಸಾರ್‌ನ ಸಂಪೂರ್ಣ ಪಳೆಯುಳಿಕೆಯನ್ನು ಒಳಗೊಂಡಿದೆ. ಜಪಾನ್‌ನ ವಕಯಾಮಾ ಪ್ರಾಂತ್ಯದಲ್ಲಿ ಅದರ ಪಳೆಯುಳಿಕೆ ಕಂಡುಬಂದ ಸ್ಥಳದಿಂದ ದೈತ್ಯಾಕಾರದ ಹೆಸರು ಬಂದಿದೆ.

ನೀಲಿ ಡ್ರ್ಯಾಗನ್ ಮೊಸಳೆಯನ್ನು ಹೋಲುವ ತಲೆ, ಬೃಹತ್ ಪ್ಯಾಡಲ್-ಆಕಾರದ ಫ್ಲಿಪ್ಪರ್‌ಗಳು ಮತ್ತು ಆಶ್ಚರ್ಯಕರವಾಗಿ ದೊಡ್ಡ ಹಿಂಭಾಗದ ರೆಕ್ಕೆಗಳು ಹೊಂದಿರಬಹುದು ಎಂದು ಊಹಿಸಲಾಗಿದೆ. ದೊಡ್ಡ ಮುಂಭಾಗದ ರೆಕ್ಕೆಗಳು ಅದನ್ನು ತ್ವರಿತವಾಗಿ ನಡೆಸಲು ಸಹಾಯ ಮಾಡುತ್ತವೆ ಎಂದು ತಜ್ಞರು ಭಾವಿಸುತ್ತಾರೆ, ಆದರೆ ಗಾತ್ರದ ಹಿಂಭಾಗದ ರೆಕ್ಕೆಗಳು ಡೈವಿಂಗ್ ಅಥವಾ ಮೇಲ್ಮೈಗೆ ಬರಲು ಸಹಾಯ ಮಾಡಿರಬಹುದು.

ಇದನ್ನೂ ಓದಿ: ನಿಮ್ಮ ಮಾನಸಿಕ ಆರೋಗ್ಯಕ್ಕೂ ಜೀವನಶೈಲಿಗೂ ಏನು ಸಂಬಂಧ?

ಸಿನ್ಸಿನಾಟಿ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕರಾದ ಟಕುಯಾ ಕೊನಿಶಿ ಅವರು ಈ ಆವಿಷ್ಕಾರದ ಪ್ರಾಮುಖ್ಯತೆಯನ್ನು ತೋರಿಸಿದರು, ಇದು ಜಪಾನ್ ಅಥವಾ ವಾಯುವ್ಯ ಪೆಸಿಫಿಕ್‌ನಲ್ಲಿ ಇದುವರೆಗೆ ಕಂಡುಬಂದಿರುವ ಅತ್ಯಂತ ಸಂಪೂರ್ಣ ಮೊಸಸಾರ್ ಅಸ್ಥಿಪಂಜರವಾಗಿದೆ ಎಂದು ಹೇಳಿದ್ದಾರೆ.

ವಾಕಯಾಮಾ ಸೊರ್ಯುವಿನ ಬಾಲವು ಇತರ ಮೊಸಾಸಾರ್‌ಗಳಂತೆ ಬೇಟೆಯಾಡಲು ಪ್ರಬಲ ಸಾಧನವಾಗಿದೆ, ಇದು ತ್ವರಿತ ವೇಗವರ್ಧನೆಯನ್ನು ಒದಗಿಸುತ್ತದೆ. ಸುಮಾರು ಬೈನಾಕ್ಯುಲರ್ ದೃಷ್ಟಿ ಮತ್ತು ದೊಡ್ಡ ಬಿಳಿ ಶಾರ್ಕ್‌ನಂತಹ ಡಾರ್ಸಲ್ ಫಿನ್‌ನೊಂದಿಗೆ, ಈ ಪ್ರಾಚೀನ ಸಮುದ್ರ ದೈತ್ಯ, ಐದು ಅಡಿಗಳಿಗಿಂತ ಹೆಚ್ಚು ಉದ್ದವಿತ್ತು, ಮಾರಣಾಂತಿಕ ಬೇಟೆಗಳನ್ನಾಡುತ್ತಿತ್ತು ಎಂದು ನಂಬಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ಎಸ್​ಪಿ
ನಯನಾ ಎಸ್​ಪಿ

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?