Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್ ಸಹಾಯದಿಂದ 7 ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡಲು ಕಲಿತ 16 ವರ್ಷದ ಬಾಲಕಿ

ಪಂಜಾಬಿನ 16 ವರ್ಷದ ಅಜ್ನೀತ್ ಕೌರ್ ಎಂಬ ಹುಡುಗಿ ಯಾವುದೇ ತರಬೇತಿ ಇಲ್ಲದೆ ಯೂಟ್ಯೂಬ್ ಸಹಾಯದ ಮೂಲಕ ಕೊರಿಯನ್ ಭಾಷೆ ಸೇರಿದಂತೆ ಒಟ್ಟು 7 ಭಾಷೆಗಳನ್ನು ಕಲಿತಿದ್ದಾಳೆ. ಇತ್ತೀಚೆಗಷ್ಟೇ ದೆಹಲಿಯ ಪಂಡಿತ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಸಿದ ವಿದೇಶಿ ಭಾಷಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಯೂಟ್ಯೂಬ್ ಸಹಾಯದಿಂದ 7 ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡಲು ಕಲಿತ 16 ವರ್ಷದ ಬಾಲಕಿ
Ajneet Kaur
Follow us
ಅಕ್ಷತಾ ವರ್ಕಾಡಿ
|

Updated on: Dec 13, 2023 | 4:36 PM

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕೆಲವೊಂದಿಷ್ಟು ಜನರು ಮೊಬೈಲ್‌ನಲ್ಲೇ ಆಟವಾಡುತ್ತಾ ದಿನಕಳೆದರೆ, ಇನ್ನೂ ಕೆಲವರು ಹೊಸ ಹೊಸ ಅಡುಗೆಗಳನ್ನು ಕಲಿತು ಪ್ರಯೋಗಿಸಿದ್ದುವುಂಟು. ಆದರೆ 16 ವರ್ಷದ ಹುಡುಗಿಯೊಬ್ಬಳು ಲಾಕ್‌ಡೌನ್‌ ಸಮಯದಲ್ಲಿ ಯೂಟ್ಯೂಬ್ ಮೂಲಕ 7 ಭಾಷೆಗಳನ್ನು ಕಲಿತಿದ್ದಾಳೆ. ಗುರುದಾಸ್‌ಪುರದ ಸಂತ ನಗರದ ನಿವಾಸಿ ಅಜ್ನೀತ್ ಕೌರ್(16) ಯೂಟ್ಯೂಬ್​​ನಿಂದಲೇ 7 ಭಾಷೆಗಳಲ್ಲಿ ಜ್ಞಾನ ಪಡೆದುಕೊಂಡಿದ್ದಾಳೆ. ಕೊರಿಯಲ್​​​ ಭಾಷೆಯನ್ನು ಕಲಿಯಲು ಪ್ರಾರಂಭಿಸಿದ ಈ ಹುಡುಗಿ ಒಂದು ಭಾಷೆಯನ್ನು ಅರ್ಥಮಾಡಿಕೊಂಡಾಗ, ಇತರ ಭಾಷೆಗಳನ್ನು ಕೂಡ ಕಲಿಯುವ ಆಸಕ್ತಿ ಹೆಚ್ಚಿತು ಎಂದು ಕೇಳಿಕೊಂಡಿದ್ದಾಳೆ. ಈ ಮೂಲಕ 7 ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಇದಲ್ಲದೇ ಇತ್ತೀಚೆಗಷ್ಟೇ ದೆಹಲಿಯ ಪಂಡಿತ್ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕೊರಿಯನ್ ಭಾಷಾ ಪರೀಕ್ಷೆ ನಡೆದಿದ್ದು, ಇದರಲ್ಲಿ ಐದು ರಾಜ್ಯಗಳ ಮಕ್ಕಳು ಭಾಗವಹಿಸಿದ್ದು, ಅದರಲ್ಲಿ ಅಜ್ನೀತ್ ಪ್ರಥಮ ಸ್ಥಾನವನ್ನು ಗಳಿಸಿದ್ದಾಳೆ.

ಮಗಳ ಸಾಧನೆಯ ಬಗ್ಗೆ ಮಾಹಿತಿ ನೀಡಿದ ತಂದೆ ಮಂದೀಪ್ ಸಿಂಗ್ ಮತ್ತು ತಾಯಿ ಮನ್‌ಪ್ರೀತ್ ಕೌರ್’ ನಮ್ಮ ಮಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ತಮ್ಮ ಮಗಳು ಯೂಟ್ಯೂಬ್‌ನಲ್ಲಿ ಕೊರಿಯನ್ ಭಾಷೆಯ ಮೂಲಕ ಇತರ ಭಾಷೆಗಳನ್ನು ಕಲಿಯುವ ಕಡೆ ಒಲವು ತೋರಿದ್ದಳು. ಅದರಂತೆ ಇಂದು ಅನೇಕ ಭಾಷೆಗಳನ್ನು ಕಲಿತು ಸುಲಲಿತವಾಗಿ ಮಾತನಾಡುವಾಗ ನಮಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ

ಕೊರಿಯನ್ ಅಥವಾ ತನಗೆ ತಿಳಿದಿರುವ ಯಾವುದೇ ಭಾಷೆಯಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡಲು ಬಯಸುವುದಾಗಿ ಅಜನೀತ್ ತನ್ನ ಬಯಕೆಯನ್ನು ಹೇಳಿದ್ದಾರೆ. ತನ್ನ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡಲು ಬಯಸುವುದಾಗಿ ಅಜನೀತ್ ಹೇಳುತ್ತಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: