AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಆನ್‌ಲೈನ್ ಶಾಪಿಂಗ್‌ನಲ್ಲಿ ಹೆಡ್‌ಫೋನ್‌ ಆರ್ಡರ್ ಮಾಡಿದ ವ್ಯಕ್ತಿ, ಆದರೆ ಡೆಲಿವರಿ ಆಗಿದ್ದೇನು ಗೊತ್ತಾ?

ಆನ್‌ಲೈನ್ ಶಾಪಿಂಗ್‌ನಲ್ಲಿ ವ್ಯಕ್ತಿಯೊಬ್ಬ ಮೋಸ ಹೋಗಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಮೆಜಾನ್‌ನಲ್ಲಿ 20 ಸಾವಿರ ರೂಪಾಯಿ ಮೌಲ್ಯದ ಸೋನಿ ಹೆಡ್‌ಫೋನ್‌ಗಳನ್ನು ಆರ್ಡರ್ ಮಾಡಿದ್ದ ವ್ಯಕ್ತಿ. ಆದರೆ ಬಂದ ಪಾರ್ಸೆಲ್ ಬೇರೆಯೇ ಆಗಿತ್ತು. ಈ ಆನ್‌ಲೈನ್ ವಂಚನೆಯ ಸಂಪೂರ್ಣ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

Video Viral: ಆನ್‌ಲೈನ್ ಶಾಪಿಂಗ್‌ನಲ್ಲಿ ಹೆಡ್‌ಫೋನ್‌ ಆರ್ಡರ್ ಮಾಡಿದ ವ್ಯಕ್ತಿ, ಆದರೆ ಡೆಲಿವರಿ ಆಗಿದ್ದೇನು ಗೊತ್ತಾ?
Viral Video
ಅಕ್ಷತಾ ವರ್ಕಾಡಿ
|

Updated on: Dec 13, 2023 | 5:43 PM

Share

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಜನರ ಜೀವನಶೈಲಿಯ ಒಂದು ಭಾಗವಾಗಿ ಬಿಟ್ಟಿದೆ. ತರಕಾರಿ, ಇತರ ದಿನಸಿ ಪದಾರ್ಥಗಳಿಂದ ಹಿಡಿದು ಟಿವಿ-ಫ್ರಿಜ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಬಟ್ಟೆಗಳು ಸಹ ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದರಿಂದ ಮನೆಯಲ್ಲೇ ಕುಳಿತು ಬೇಕಾಗಿರುವ ವಸ್ತುಗಳನ್ನು ಖರೀದಿಸಲು ಸಾಧ್ಯವಿರುವುದರಿಂದ ನೇರವಾಗಿ ಖರೀದಿಸುವದಕ್ಕಿಂತ ಆನ್‌ಲೈನ್​​​ನಲ್ಲಿ ಶಾಪಿಂಗ್‌ನಲ್ಲಿ ಮಾಡುವವರೇ ಹೆಚ್ಚು. ಆದರೆ ಕೆಲವೊಮ್ಮೆ ಮೋಸ ಹೋಗುವುದುಂಟು. ಅಂತಹದ್ದೇ ಮೋಸಕ್ಕೆ ಬಲಿಯಾದ ಘಟನೆಯೊಂದು ಇಲ್ಲಿದೆ.

ವಾಸ್ತವವಾಗಿ, ಯಶ್ ಓಜಾ ಎಂಬ ವ್ಯಕ್ತಿ ಆನ್‌ಲೈನ್ ಶಾಪಿಂಗ್ ಕಂಪನಿ ಅಮೆಜಾನ್‌ನಿಂದ ಹೆಡ್‌ಫೋನ್‌ಗಳನ್ನು ಆರ್ಡರ್ ಮಾಡಿದ್ದರು. ವೈರ್‌ಲೆಸ್ ಹಾಗೂ ಒಳ್ಳೆಯ ಗುಣಮಟ್ಟದ ಬ್ರಾಂಡ್​ ಆಗಿದ್ದರಿಂದ ಹೆಡ್‌ಫೋನ್​​ಗೆ 19,900ರೂಪಾಯಿಗಳನ್ನು ಪಾವತಿಸಿದ್ದರು. ಆದರೆ ಬಂದ ಪಾರ್ಸೆಲ್‌ನಲ್ಲಿ ಸೋನಿ ಹೆಡ್‌ಫೋನ್‌ ಬಾಕ್ಸ್ ಒಳಗಡೆ ಹೆಡ್‌ಫೋನ್‌ ಬದಲಿಗೆ ಕೋಲ್ಗೇಟ್ ಟೂತ್‌ಪೇಸ್ಟ್ ಕಂಡು ಶಾಕ್​ ಆಗಿದ್ದಾರೆ.

ಆನ್‌ಲೈನ್ ವಂಚನೆಯ ಸಂಪೂರ್ಣ ವೀಡಿಯೊವನ್ನು @Yashuish ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ವ್ಯಕ್ತಿಯು ಸಂಪೂರ್ಣವಾಗಿ ಪ್ಯಾಕ್ ಮಾಡಿದ ಪಾರ್ಸೆಲ್ ಅನ್ನು ತೆರೆಯುವುದನ್ನು ನೀವು ಕಾಣಬಹುದು. ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ,ಅಮೆಜಾನ್ ವ್ಯಕ್ತಿಗೆ ಕ್ಷಮೆಯಾಚಿಸಿದೆ. ಜೊತೆಗೆ ಮುಂದೆ ಈ ರೀತಿ ಆಗಲ್ಲ ಎಂದು ಭರವಸೆ ನೀಡಿದೆ.

ಇದನ್ನೂ ಓದಿ: 95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ

ಎರಡು ನಿಮಿಷದ 20 ಸೆಕೆಂಡ್‌ನ ಈ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಟ್ವಿಟರ್​​ ಬಳಕೆದಾರನೊಬ್ಬ ಈ ವೀಡಿಯೊವನ್ನು ‘ಸ್ಕ್ರಿಪ್ಟ್’ ಎಂದು ವಿವರಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಆನ್‌ಲೈನ್ ಶಾಪಿಂಗ್‌ನಲ್ಲಿ ಇಂತಹ ವಂಚನೆಗಳು ಆಗಾಗ್ಗೆ ನಡೆಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!