Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ

ಈ ವೈರಲ್ ಆಗಿರುವ ಪಾಸ್‌ಪೋರ್ಟ್‌ನಲ್ಲಿ ಬ್ರಿಟಿಷ್ ಇಂಡಿಯನ್ ಪಾಸ್‌ಪೋರ್ಟ್ ಎಂದು ಬರೆಯಲಾಗಿದೆ. ಜೊತೆಗೆ ಅದರ ಮೇಲೆ ಬ್ರಿಟಿಷ್ ಸರ್ಕಾರದ ಚಿಹ್ನೆ ಇರುವುದನ್ನು ಕಾಣಬಹುದು. ಇದು 1928 ರಲ್ಲಿ ಒಬ್ಬ ವ್ಯಕ್ತಿಗೆ ನೀಡಿದ ಪಾಸ್ಪೋರ್ಟ್ ಎಂದು ತಿಳಿದುಬಂದಿದೆ. ಇನ್ನಷ್ಟು ವಿವರ ಇಲ್ಲಿದೆ.

Viral Video: 95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ
Old Passport
Follow us
ಅಕ್ಷತಾ ವರ್ಕಾಡಿ
|

Updated on:Dec 13, 2023 | 2:39 PM

ಇಂದು ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ತಂತ್ರಜ್ಞಾನಗಳ ಬೆಳವಣೆಗೆಯಿಂದಾಗಿ ನೀವು ಕುಳಿತಲ್ಲಿಂದಲೇ ದೇಶ ವಿದೇಶದ ಎಲ್ಲಾ ಮಾಹಿತಿಯನ್ನು ಪಡೆಯುತ್ತಿದ್ದೀರಿ.  ಹಿಂದೆ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಯಾವುದೇ ಮಾರ್ಗವಿರಲಿಲ್ಲ. ಆಗಾಗ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು. ಆದರೆ ಈಗ ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಬರುವುದು ಸುಲಭವಾಗಿದೆ. ನಾವು ಯಾವುದೇ ದೇಶಕ್ಕೂ ಭೇಟಿ ನೀಡಬೇಕಾದರೆ ಪಾಸ್‌ಪೋರ್ಟ್ ತುಂಬಾ ಅಗತ್ಯ. ನೀವು ಸಾಮಾನ್ಯವಾಗಿ ಈಗಿನ  ಪಾಸ್‌ಪೋರ್ಟ್ಗಳನ್ನು ನೋಡಿರುತ್ತೀರಿ. ಆದರೆ ಇತ್ತೀಚೆಗಷ್ಟೇ ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಬಳಕೆಯಲ್ಲಿದ್ದ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಒಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ. ಸುಮಾರು 95ವರ್ಷಗಳ ಹಿಂದಿನ ಪಾಸ್‌ಪೋರ್ಟ್ ಫೋಟೋ ನೋಡಿದರೆ ನೀವು ಆಶ್ಚರ್ಯ ಪಡುವುದಂತೂ ಖಂಡಿತಾ.

1947ರ ಸ್ವಾತಂತ್ರ್ಯಕ್ಕೂ ಮುನ್ನ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಇವರ ಆಳ್ವಿಕೆಯ ಸಮಯದಲ್ಲಿ ಅಂದರೆ 1928 ರಲ್ಲಿ ಒಬ್ಬ ವ್ಯಕ್ತಿಗೆ ಬ್ರಿಟಿಷ್ ಸರ್ಕಾರ ನೀಡಿದ ಪಾಸ್ಪೋರ್ಟ್ ಪಾಸ್‌ಪೋರ್ಟ್ ಹೇಗಿತ್ತು ನೋಡಿ. ಬ್ರಿಟಿಷ್ ಸರ್ಕಾರದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಸೈಯದ್ ಮೊಹಮ್ಮದ್ ಖಲೀಲ್ ರೆಹಮಾನ್ ಶಾ ಎಂಬವರ ಪಾಸ್‌ಪೋರ್ಟ್ ಇದು. ಆ ಸಮಯದಲ್ಲಿ ಜನರು ಹೇಗೆ ಬಟ್ಟೆ ಧರಿಸುತ್ತಿದ್ದರು ಎಂಬುದನ್ನು ಸಹ ಫೋಟೋದಲ್ಲಿ ಕಾಣಬಹುದು. ಈ ಪಾಸ್‌ಪೋರ್ಟ್‌ನಲ್ಲಿ 1928 ರಿಂದ 1938 ಎಂದು ಬರೆಯಲಾಗಿದೆ. ಅದರಿಂದ ಪಾಸ್‌ಪೋರ್ಟ್‌ನ ಅವಧಿ ಹತ್ತು ವರ್ಷಗಳು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಸಖತ್​​ ಟ್ರೆಂಡ್​ ಆಗುತ್ತಿದೆ ಎಲೆಕ್ಟ್ರಿಕ್ ಜಾಕೆಟ್​​ಗಳು; ಇದರ ಬೆಲೆ ಎಷ್ಟು ಗೊತ್ತಾ?

ಈ ಪಾಸ್‌ಪೋರ್ಟ್‌ನ ಫೋಟೋ ಇನ್ಸ್ಟಾಗ್ರಾಮ್​​ನಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು vintage.passport.collector ಹೆಸರಿನ ಖಾತೆಗೆ ಅಪ್‌ಲೋಡ್ ಮಾಡಲಾಗಿದ್ದು,ಈಗಾಗಲೇ ಹಲವಾರು ಲೈಕುಗಳನ್ನು ಪಡೆದುಕೊಂಡಿದೆ. ಈ ಖಾತೆಯಲ್ಲಿ ಭಾರತದ ಹೊರತಾಗಿ ಅನೇಕ ದೇಶಗಳ ಪಾಸ್‌ಪೋರ್ಟ್‌ಗಳನ್ನು ಕಾಣಬಹುದು. ಈ ಪಾಸ್ ಪೋರ್ಟ್ ನೋಡಿ ಕೆಲವರು ‘ಗೋಲ್ಡನ್ ಎರಾ’ ಎಂದು ಕಮೆಂಟ್ ಕೂಡ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 2:23 pm, Wed, 13 December 23