AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Animal Movie: ‘ಅನಿಮಲ್’ ಸಿನಿಮಾದ ಡಿಲೀಟೆಡ್​ ದೃಶ್ಯ ವೈರಲ್; ಏನಿದೆ ಅದರಲ್ಲಿ?

‘ಅನಿಮಲ್’ ಸಿನಿಮಾ ಸಖತ್ ರಗಡ್ ಆಗಿ ಮೂಡಿ ಬಂದಿದೆ. ರಣಬೀರ್ ಕಪೂರ್ ಅವರು ಎರಡು ಶೇಡ್​ನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾದ ಡಿಲೀಟೆಡ್​ ದೃಶ್ಯ ವೈರಲ್ ಆಗಿದೆ.

Animal Movie: ‘ಅನಿಮಲ್’ ಸಿನಿಮಾದ ಡಿಲೀಟೆಡ್​ ದೃಶ್ಯ ವೈರಲ್; ಏನಿದೆ ಅದರಲ್ಲಿ?
ರಣಬೀರ್ ಕಪೂರ್
ರಾಜೇಶ್ ದುಗ್ಗುಮನೆ
|

Updated on:Dec 04, 2023 | 1:13 PM

Share

ರಣಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಗಿದೆ. ಈ ಚಿತ್ರ ಮೂರು ದಿನಕ್ಕೆ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ರಣಬೀರ್ ಕಪೂರ್ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾದ ಅವಧಿ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ಈ ಚಿತ್ರದ ಅವಧಿ 3 ಗಂಟೆ 21 ನಿಮಿಷ ಇದೆ. ಮೂಲಗಳ ಪ್ರಕಾರ ಸಿನಿಮಾದ ಅವಧಿ ಇನ್ನೂ ದೀರ್ಘವಾಗಿತ್ತಂತೆ. ಸಿನಿಮಾದಲ್ಲಿ ಇಲ್ಲದೇ ಇರುವ ಕೆಲ ದೃಶ್ಯಗಳು ವೈರಲ್ ಆಗುತ್ತಿವೆ.

‘ಅನಿಮಲ್’ ಸಿನಿಮಾ ಸಖತ್ ರಗಡ್ ಆಗಿದೆ. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದ ಕಥಾ ನಾಯಕ ನಂತರ ಬೇರೆಯದೇ ಅವತಾರ ತಾಳುತ್ತಾನೆ. ಈ ಸಿನಿಮಾದಲ್ಲಿ ಇಲ್ಲದೇ ಇರುವ ದೃಶ್ಯ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಣಬೀರ್ ಕಪೂರ್ ಕಂಠಪೂರ್ತಿ ಕುಡಿದಿದ್ದಾರೆ. ಈ ಸ್ಥಿತಿಯಲ್ಲೂ ಅವರು ವಿಮಾನ ಹಾರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಈ ದೃಶ್ಯವನ್ನು ಏಕೆ ಡಿಲೀಟ್ ಮಾಡಿದರು? ಸಖತ್ ಗೂಸ್​ಬಂಪ್ಸ್ ಕೋಡೋ ದೃಶ್ಯ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ನಾನು ಈ ದೃಶ್ಯಕ್ಕಾಗಿ ಸಿನಿಮಾ ನೋಡಿದೆ. ಆದರೆ, ಈ ದೃಶ್ಯ ಇರಲಿಲ್ಲ. ಈ ರೀತಿಯ ದೃಶ್ಯಗಳನ್ನೆಲ್ಲ ಇಡುತ್ತಾ ಹೋದರೆ ಬಹುಶಃ ಸಿನಿಮಾದ ಅವಧಿ ನಾಲ್ಕು ಗಂಟೆ ಆಗುತ್ತಿತ್ತೇನೋ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

‘ಅನಿಮಲ್’ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಲಿದೆ. ಈ ವರ್ಷನ್​ನಲ್ಲಿ ಡಿಲೀಟೆಡ್​ ದೃಶ್ಯಗಳು ಇರಬಹುದು ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳು ಯಥೇಚ್ಚವಾಗಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್ ದಾಖಲೆಯನ್ನೂ ಮುರಿದ ರಣಬೀರ್​; ‘ಬಾಕ್ಸ್​ ಆಫೀಸ್​ನಲ್ಲಿ ‘ಅನಿಮಲ್’ ಈಗ ಕಿಂಗ್

‘ಅನಿಮಲ್’ ಕಲೆಕ್ಷನ್ ವಿವರ..

ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಸಿನಿಮಾ 72.50 ಕೋಟಿ ರೂಪಾಯಿ ಗಳಿಸಿತು. ಶನಿವಾರ (ಡಿಸೆಂಬರ್ 2) ಈ ಚಿತ್ರ 66.27 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ (ಡಿಸೆಂಬರ್ 3) ಈ ಚಿತ್ರ 72.50 ಕೋಟಿ ರೂಪಾಯಿ ಬಾಚಿದೆ. ‘ಅನಿಮಲ್’ ಸಿನಿಮಾದ ಒಟ್ಟಾರೆ ಗಳಿಕೆ 202 ಕೋಟಿ ರೂಪಾಯಿ ಆಗಿದೆ. ಸಿನಿಮಾದ ಅವಧಿ 3 ಗಂಟೆ 21 ನಿಮಿಷ ಇದ್ದ ಹೊರತಾಗಿಯೂ ಜನರು ಚಿತ್ರವನ್ನು ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Mon, 4 December 23