Yash19: ‘ಡಿಸೆಂಬರ್ 8ಕ್ಕೆ ಟೈಟಲ್ ಅನೌನ್ಸ್ ಮಾಡ್ತೀವಿ’; ದೊಡ್ಡ ಸುದ್ದಿ ಕೊಟ್ಟ ಯಶ್

ಯಶ್ ಮುಂದಿನ ಸಿನಿಮಾ ಕುರಿತು ಹರಿದಾಡಿದ ಸುದ್ದಿಗಳು ಒಂದೆರಡಲ್ಲ. ಈಗ ಈ ಎಲ್ಲಾ ವದಂತಿಗಳಿಗೆ ತೆರೆ ಬೀಳುವ ಸಮಯ. ಈ ಎಲ್ಲಾ ಅನುಮಾನಗಳಿಗೆ, ಪ್ರಶ್ನೆಗಳಿಗೆ ಡಿಸೆಂಬರ್ 8ರಂದು ಉತ್ತರ ಸಿಗಲಿದೆ.

Yash19: ‘ಡಿಸೆಂಬರ್ 8ಕ್ಕೆ ಟೈಟಲ್ ಅನೌನ್ಸ್ ಮಾಡ್ತೀವಿ’; ದೊಡ್ಡ ಸುದ್ದಿ ಕೊಟ್ಟ ಯಶ್
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 04, 2023 | 11:12 AM

ರಾಕಿಂಗ್ ಸ್ಟಾರ್ ಯಶ್ (Yash) ಅವರ ಹೊಸ ಸಿನಿಮಾ ಘೋಷಣೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆ ಬಗ್ಗೆ ಹೊಸ ಹೊಸ ಸುದ್ದಿ ಹರಿದಾಡಿತ್ತು. ಈ ಎಲ್ಲಾ ಅನುಮಾನಗಳಿಗೆ, ಪ್ರಶ್ನೆಗಳಿಗೆ ಡಿಸೆಂಬರ್ 8ರಂದು ಉತ್ತರ ಸಿಗಲಿದೆ. ಯಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಂದು ಸಿನಿಮಾದ ಟೈಟಲ್ ರಿವೀಲ್ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಅಭಿಮಾನಿಗಳ ಎದುರು ಅವರು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದಾರೆ.

2022ರ ಏಪ್ರಿಲ್ 14ರಂದು ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಯಿತು. ಇದಾದ ಬಳಿಕ ಯಶ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎನ್ನುವ ಪ್ರಶ್ನೆ ಮೂಡಿತು. ಯಶ್ ಮುಂದಿನ ಸಿನಿಮಾ ಕುರಿತು ಹರಿದಾಡಿದ ಸುದ್ದಿಗಳು ಒಂದೆರಡಲ್ಲ. ಈಗ ಈ ಎಲ್ಲಾ ವದಂತಿಗಳಿಗೆ ತೆರೆ ಬೀಳುವ ಸಮಯ.

‘ಈಗ ಸಮಯ ಬಂದಿದೆ. ಡಿಸೆಂಬರ್ 8ರಂದು ಮುಂಜಾನೆ 9:55ಕ್ಕೆ ಟೈಟಲ್ ಅನೌನ್ಸ್ ಆಗಲಿದೆ’ ಎಂದು ಯಶ್ ಹೇಳಿದ್ದಾರೆ. ಯಶ್ ಮುಂದಿನ ಸಿನಿಮಾಗೆ ಕೆವಿಎನ್​ ಪ್ರೊಡಕ್ಷನ್ ಬಂಡವಾಳ ಹೂಡಲಿದೆ ಎಂಬುದನ್ನು ಕೂಡ ಯಶ್ ರಿವೀಲ್ ಮಾಡಿದ್ದಾರೆ. ಪೋಸ್ಟರ್​ನಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಈ ಪೋಸ್ಟರ್​ ಸಾಕಷ್ಟು ವೈರಲ್ ಆಗಿದೆ. ಯಶ್ ಅಭಿಮಾನಿಗಳು, ಸಿನಿಪ್ರಿಯರು ಇದನ್ನು ರೀಟ್ವೀಟ್ ಮಾಡುತ್ತಿದ್ದಾರೆ.

Yash

ಇದನ್ನೂ ಓದಿ: ‘ಅವನೊಂದು ಸಿಗ್ನಲ್ ಕಳ್ಸಿದ್ದಾನೆ’: ಯಶ್ ನೀಡಿರುವ ಸಿಗ್ನಲ್ ಏನು?

‘ಯಶ್ 19’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಹಾಲಿವುಡ್ ತಂತ್ರಜ್ಞರು ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾನ ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಎಲ್ಲಾ ಪ್ರಶ್ನೆಗೆ ಡಿಸೆಂಬರ್ 8ರಂದು ಉತ್ತರ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:04 am, Mon, 4 December 23