AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ದೇವರಾಜ್ ‘ಮಾಫಿಯಾ’ ಟೀಸರ್ ಬಿಡುಗಡೆ: ಇದು ರೆಡ್ ಮಾರ್ಕೆಟ್ ಕತೆ

Prajwal Devaraj: ಪ್ರಜ್ವಲ್ ದೇವರಾಜ್ ನಟನೆಯ 35ನೇ ಸಿನಿಮಾ ‘ಮಾಫಿಯಾ’ದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಪ್ರಜ್ವಲ್​ಗೆ ಸಾಕಷ್ಟು ನಿರೀಕ್ಷೆ ಈ ಸಿನಿಮಾದ ಬಗ್ಗೆ ಇದೆ.

ಪ್ರಜ್ವಲ್ ದೇವರಾಜ್ ‘ಮಾಫಿಯಾ’ ಟೀಸರ್ ಬಿಡುಗಡೆ: ಇದು ರೆಡ್ ಮಾರ್ಕೆಟ್ ಕತೆ
ಅದಿತಿ-ಪ್ರಜ್ವಲ್
ಮಂಜುನಾಥ ಸಿ.
|

Updated on: Dec 03, 2023 | 10:14 PM

Share

ಸ್ಯಾಂಡಲ್​ವುಡ್​ನಲ್ಲಿ (Sandalwood) ಈವರೆಗೆ ಹಲವು ರೌಡಿಸಂ, ಮಾಫಿಯಾ, ಅಂಡರ್ವಲ್ಡ್​ ಕತೆಗಳನ್ನು ಒಳಗೊಂಡ ಸಿನಿಮಾಗಳು ಬಂದಿವೆ. ಹಾಗಿದ್ದರೂ ಸಹ ಈ ರೀತಿಯ ಸಿನಿಮಾಗಳು ಇಂದಿಗೂ ಬರುತ್ತಲೇ ಇವೆ. ಪ್ರೇಕ್ಷಕರು ಸಹ ನೋಡುತ್ತಲೇ ಇದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಹೆಸರಿನ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಾಣ ಮಾಡಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ “ಮಾಫಿಯಾ” ಸಿನಿಮಾವನ್ನು ಲೋಹಿತ್ ಹೆಚ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟೀಸರ್ ಅನ್ನು ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಅಂದಹಾಗೆ ‘ಮಾಫಿಯಾ’ ಪ್ರಜ್ವಲ್ ದೇವರಾಜ್ ನಟನೆಯ 35ನೇ ಸಿನಿಮಾ.

‘‘ಸಿಕ್ಸರ್’ ಚಿತ್ರದಿಂದ ನನ್ನ ಸಿನಿ ಜರ್ನಿ ಸಾಗಿಬಂದಿದೆ. ಮೂವತ್ತೈದು ಸಿನಿಮಾಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನು “ಮಾಫಿಯಾ” ಚಿತ್ರದ ಬಗ್ಗೆ ಹೇಳಬೇಕಾದರೆ, ಕುಮಾರ್ ಅವರು ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಅವರ ವಯಸ್ಸು ಚಿಕ್ಕದಾಗಿದ್ದರೂ ಕೆಲಸದಲ್ಲಿ ಅಸಾಧಾರಣ. ನಾನು, ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ಪ್ರಜ್ವಲ್ ದೇವರಾಜ್.

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಹೊಸ ಚಿತ್ರಕ್ಕೆ ಚಾಲನೆ, ತೆಲುಗಿನ ಜನಪ್ರಿಯ ನಟ ಕನ್ನಡಕ್ಕೆ ಎಂಟ್ರಿ

‘ಮಾಫಿಯಾ’ ಸಿನಿಮಾದ ನಿರ್ದೇಶಕ ಲೋಹಿತ್ ಮಾತನಾಡಿ, ‘ಈವರೆಗೂ ಯಾರು ತೋರಿಸಿರದ ‘ಮಾಫಿಯಾ’ ಲೋಕವನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಬೇರೆ-ಬೇರೆ ಮಾರ್ಕೆಟ್ ಹೆಸರು ಕೇಳಿರುತ್ತಾರೆ.‌ ಆದರೆ ಇದೆ ಮೊದಲ ಬಾರಿಗೆ ರೆಡ್ ಮಾರ್ಕೆಟ್ ಅನ್ನು ನಮ್ಮ ಸಿನಿಮಾದಲ್ಲಿ ಪರಿಚಯ ಮಾಡಲಾಗಿದೆ. ಆ ರೆಡ್ ಮಾರ್ಕೆಟ್ ಏನು? ಎಲ್ಲಿದೆ ಎಂಬುದನ್ನೆಲ್ಲ ತಿಳಿಸಲು ನಮ್ಮ ಸಿನಿಮಾ ನೋಡಬೇಕು’ ಎಂದರು.

‘ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಸಿನಿಮಾವನ್ನು ನಿರ್ಮಿಸುತ್ತಿರುವುದು ಖುಷಿಯಾಗಿದೆ. ನಿರ್ದೇಶಕ ಲೋಹಿತ್ ಸೇರಿದಂತೆ ಚಿತ್ರತಂಡದ ಸಹಕಾರದಿಂದ “ಮಾಫಿಯಾ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು ನಿರ್ಮಾಪಕ ಕುಮಾರ್ ಬಿ.

ಪಟಪಟ ಎಂದು ಮಾತನಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಅದಿತಿ ಪ್ರಭುದೇವ ಹೇಳಿದರು. ನಟ ಶೈನ್ ಶೆಟ್ಟಿ, ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ , ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಛಾಯಾಗ್ರಾಹಕ ಪಾಂಡಿಕುಮಾರ್ ಸೇರಿದಂತೆ ಅನೇಕರು “ಮಾಫಿಯಾ” ಚಿತ್ರದ ಬಗ್ಗೆ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ