‘ಅವನೊಂದು ಸಿಗ್ನಲ್ ಕಳ್ಸಿದ್ದಾನೆ’: ಯಶ್ ನೀಡಿರುವ ಸಿಗ್ನಲ್ ಏನು?

Yash: ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ ‘ಲೋಡಿಂಗ್’ನಲ್ಲಿದೆ ಎಂದು ಹೇಳಿದ್ದಾರೆ ಯಶ್.

‘ಅವನೊಂದು ಸಿಗ್ನಲ್ ಕಳ್ಸಿದ್ದಾನೆ’: ಯಶ್ ನೀಡಿರುವ ಸಿಗ್ನಲ್ ಏನು?
ಯಶ್
Follow us
ಮಂಜುನಾಥ ಸಿ.
|

Updated on:Dec 03, 2023 | 7:31 PM

ಕೆಜಿಎಫ್’ (KGF) ಸಿನಿಮಾ ಸರಣಿ ಮೂಲಕ ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿ ಗ್ಲೋಬಲ್ ಮಟ್ಟದಲ್ಲಿಯೂ ಪ್ರೇಕ್ಷಕರನ್ನು ಸೆಳೆದಿರುವ ನಟ ಯಶ್ (Yash), ‘ಕೆಜಿಎಫ್’ ಹೊರತಾಗಿ ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ‘ಕೆಜಿಎಫ್’ ಅಂಥಹಾ ಐತಿಹಾಸಿಕ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಯಶ್​, ಅದಾದ ಬಳಿಕ ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಕನ್ನಡ ಮಾತ್ರವಲ್ಲದೆ ಭಾರತದ ಸಿನಿಮಾ ಪ್ರೇಕ್ಷಕರಲ್ಲಿತ್ತು. ತಮ್ಮ ಮುಂದಿನ ಸಿನಿಮಾ ಬಗ್ಗೆ ಮೌನವಾಗಿಯೇ ಇದ್ದ ಯಶ್, ಇಂದು (ಡಿಸೆಂಬರ್ 03) ತಮ್ಮ ಮುಂಬರುವ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.

ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡಿದ್ದು, ‘ಲೋಡಿಂಗ್’ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಯಾವುದೇ ಚಿತ್ರ, ವಿಡಿಯೋ ಅಥವಾ ಇನ್ಯಾವುದೇ ಕಮ್ಯಾಂಡ್ ತೆರೆದು ಕೊಳ್ಳುವ ಮುನ್ನ ಕಂಪ್ಯೂಟರ್​ನಲ್ಲಿ ಅಥವಾ ಮೊಬೈಲ್​ನಲ್ಲಿ ಲೋಡಿಂಗ್ ಎಂದು ಬರುತ್ತದೆ. ಈಗ ಲೋಡಿಂಗ್ ಎಂಬ ಪೋಸ್ಟರ್ ಹಂಚಿಕೊಂಡಿರುವ ಯಶ್, ತಮ್ಮ ಮುಂದಿನ ಸಿನಿಮಾ ಲೋಡಿಂಗ್​ನಲ್ಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಮುಂದಿನ ಸಿನಿಮಾ ಬಗ್ಗೆ ಶೀಘ್ರವೇ ಅಪ್​ಡೇಟ್: ಯಶ್

ಯಶ್​ ‘ಲೋಡಿಂಗ್’ ಪೋಸ್ಟರ್ ಹಂಚಿಕೊಂಡ ಕೇವಲ 40 ನಿಮಿಷದಲ್ಲಿ ಆ ಚಿತ್ರಕ್ಕೆ 30 ಸಾವಿರ ಲೈಕ್​ಗಳು ಫೇಸ್​ಬುಕ್​ನಲ್ಲಿ ಬಂದಿವೆ. ಎರಡು ಸಾವಿರಕ್ಕೂ ಹೆಚ್ಚು ಕಮೆಂಟ್ ಸಹ ಹಾಕಿದ್ದಾರೆ. ಯಶ್ ಹಂಚಿಕೊಂಡಿರುವ ‘ಲೋಡಿಂಗ್’ ಪೋಸ್ಟರ್ ಗಾಢ ಕೆಂಪು ಬಣ್ಣವನ್ನು ಹೊಂದಿದ್ದು, ‘ಕೆಜಿಎಫ್ 2’ ಸಿನಿಮಾದ ಕೆಲವು ಪೋಸ್ಟರ್​ಗಳಲ್ಲಿಯೂ ಇದೇ ಮಾದರಿಯ ಕಲರ್ ಕಾಂಬಿನೇಷನ್ ಬಳಸಲಾಗಿತ್ತು. ಹಾಗಾಗಿ ಕೆಲವರು ‘ಕೆಜಿಎಫ್ 3’ ಸಿನಿಮಾದ ಘೋಷಣೆಯನ್ನು ಯಶ್ ಮಾಡಬಹುದು ಎಂದು ಕಮೆಂಟ್ ಮಾಡಿದ್ದಾರೆ.

2016ರಲ್ಲಿ ಯಶ್ ನಟಿಸಿದ್ದ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ಬಿಡುಗಡೆ ಆಗಿತ್ತು. ಅದಾದ ಬಳಿಕ ಈವರೆಗೆ ಅಂದರೆ ಏಳು ವರ್ಷಗಳಲ್ಲಿ ಯಶ್​ರ ಎರಡು ಸಿನಿಮಾಗಳಷ್ಟೆ ಬಿಡುಗಡೆ ಆಗಿವೆ. ಇದೀಗ ಯಶ್ ಹೊಸ ಸಿನಿಮಾಕ್ಕೆ ತಯಾರಿ ಆರಂಭಿಸಿದ್ದು, ಈ ಸಿನಿಮಾಕ್ಕಾಗಿ ಹಾಲಿವುಡ್​ನ ಜನಪ್ರಿಯ ಆಕ್ಷನ್ ನಿರ್ದೇಶಕರನ್ನು ಕರೆತರಲಿದ್ದಾರೆ ಎನ್ನಲಾಗಿದೆ. ಶ್ರೀಲಂಕಾನಲ್ಲಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ನಡೆಸಲಿದ್ದು, ನಿರ್ದೇಶಕಿ ಒಬ್ಬರು ಯಶ್​ರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Sun, 3 December 23

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ