AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್’ ವಿಲನ್ ಜೊತೆ ಮಲೇಷಿಯಾನಲ್ಲಿ ರುಕ್ಮಿಣಿ ವಸಂತ್, ಏನು ವಿಶೇಷತೆ?

Rukmini Vasanth: ನಟಿ ರುಕ್ಮಿಣಿ ವಸಂತ್ ಮಲೇಷಿಯಾನಲ್ಲಿದ್ದಾರೆ. ‘ಕೆಜಿಎಫ್’ ವಿಲನ್ ಆಂಡ್ರೂಸ್ ಖ್ಯಾತಿಯ ಅವಿನಾಶ್ ಜೊತೆ ಫೋಟೊಕ್ಕೆ ಫೋಸು ನೀಡಿದ್ದಾರೆ.

‘ಕೆಜಿಎಫ್’ ವಿಲನ್ ಜೊತೆ ಮಲೇಷಿಯಾನಲ್ಲಿ ರುಕ್ಮಿಣಿ ವಸಂತ್, ಏನು ವಿಶೇಷತೆ?
ರುಕ್ಮಿಣಿ ವಸಂತ್
ಮಂಜುನಾಥ ಸಿ.
|

Updated on: Nov 28, 2023 | 5:56 PM

Share

ಸಪ್ತ ಸಾಗರದಾಚೆ ಎಲ್ಲೋ’ (Sapta Sagaradache Ello) ಸಿನಿಮಾ ಹಿಟ್ ಎನಿಸಿಕೊಂಡಿದೆ. ಸಿನಿಮಾವನ್ನು ಸಹೃದಯಿ ಪ್ರೇಕ್ಷಕರು ಮೆಚ್ಚಿ ಎದೆಗಿಳಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ತೋರಿಸಲಾಗಿರುವ ಸರಳ ಪ್ರೇಮಕತೆ, ಮಧುರವಾದ ಹಿನ್ನೆಲೆ ಸಂಗೀತ, ನಟರ ನಟನೆ ಬಹುವಾಗಿ ಗಮನ ಸೆಳೆದಿದೆ. ಸಿನಿಮಾ ನೋಡಿದವರೆಲ್ಲರೂ ನಾಯಕಿ ರುಕ್ಮಿಣಿ ವಸಂತ್​ರ ನಟನೆಯನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ರುಕ್ಮಿಣಿಗೆ ಹಲವು ಆಫರ್​ಗಳು ಒಂದರ ಹಿಂದೊಂದು ಸಿಗುತ್ತಿವೆ. ಇದೀಗ ನಟಿ ರುಕ್ಮಿಣಿ ವಸಂತ್, ಮಲೇಷಿಯಾದಲ್ಲಿದ್ದಾರೆ, ಅದೂ ‘ಕೆಜಿಎಫ್’ ವಿಲನ್ ಜೊತೆ.

‘ಕೆಜಿಎಫ್’ ಸಿನಿಮಾನಲ್ಲಿ ಆಂಡ್ರೂಸ್ ಪಾತ್ರದಲ್ಲಿ ನಟಿಸಿದ್ದ ಖಡಕ್ ವಿಲನ್ ಬಿಎಸ್ ಅವಿನಾಶ್ ಜೊತೆ ಮಲೇಷಿಯಾದ ಕೌಲಾಲಂಪುರದಲ್ಲಿನ ಮುರುಗನ್ ವಿಗ್ರಹದ ಮುಂದೆ ನಿಂತು ಫೋಟೊಕ್ಕೆ ಫೋಸು ನೀಡಿದ್ದಾರೆ. ಅಂದಹಾಗೆ ರುಕ್ಮಿಣಿ ವಸಂತ್, ಮಲೇಷಿಯಾನಲ್ಲಿ ಏನು ಮಾಡುತ್ತಿದ್ದಾರೆ, ನಟಿಯ ಜೊತೆಗೆ ‘ಕೆಜಿಎಫ್’ ವಿಲನ್ ಏನು ಮಾಡುತ್ತಿದ್ದಾರೆ? ಇತ್ಯಾದಿ ಪ್ರಶ್ನೆಗಳಿಗೆ ಚಿತ್ರಗಳನ್ನು ಹಂಚಿಕೊಂಡಿರುವ ನಟ ಬಿಎಸ್ ಅವಿನಾಶ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿ ರುಕ್ಮಿಣಿ ವಸಂತ್​ಗೆ ಯಾರ್ಯಾರು ಫೋನ್ ಮಾಡಿದ್ದರು?

ರುಕ್ಮಿಣಿ ವಸಂತ್, ಮಲೇಷಿಯಾಗೆ ಹೋಗಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ. ರುಕ್ಮಿಣಿ, ತಮಿಳಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ನಾಯಕ ಜನಪ್ರಿಯ ನಟ ವಿಜಯ್ ಸೇತುಪತಿ. ರುಕ್ಮಿಣಿ ಅವರದ್ದು ಸಿನಿಮಾದಲ್ಲಿ ನಾಯಕಿ ಪಾತ್ರ. ಸಿನಿಮಾದಲ್ಲಿ ಖಡಕ್ ವಿಲನ್ ಬಿಎಸ್ ಅವಿನಾಶ್ ಸಹ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರೀಕರಣದ ವೇಳೆ ರುಕ್ಮಿಣಿ ವಸಂತ್ ಜೊತೆಗೆ ಬಿಎಸ್ ಅವಿನಾಶ್ ಚಿತ್ರಗಳನ್ನು ತೆಗೆಸಿಕೊಂಡು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಸಮುದ್ರದಷ್ಟು ಭಾವನೆಗಳನ್ನು ಕಣ್ಣಲ್ಲಿ ವ್ಯಕ್ತಪಡಿಸುವವರು’ ಎಂದು ಹೊಗಳಿಕೆಯ ಸಾಲುಗಳನ್ನು ಸಹ ಬರೆದಿದ್ದಾರೆ.

ವಿಜಯ್ ಸೇತುಪತಿ ಅವರ 51ನೇ ಸಿನಿಮಾದ ಚಿತ್ರೀಕರಣ ಪ್ರಸ್ತುತ ಮಲೇಷಿಯಾನಲ್ಲಿ ನಡೆಯುತ್ತಿದೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಪತ್ನಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗ ಅವಿನಾಶ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಸಹ ಸರಳವಾಗಿ ಸೀರೆ ಉಟ್ಟು ಲಕ್ಷಣವಾಗಿ ಕಾಣುತ್ತಿದ್ದಾರೆ ರುಕ್ಮಿಣಿ ವಸಂತ್. ಅಂದಹಾಗೆ ವಿಜಯ್ ಸೇತುಪತಿ ಜೊತೆ ನಟಿಸುತ್ತಿರುವ ಈ ಸಿನಿಮಾ ರುಕ್ಮಿಣಿ ಅವರಿಗೆ ಮೊದಲ ಪರಭಾಷೆ ಸಿನಿಮಾ. ಎಸ್​ಎಸ್​ಇ ಬಳಿಕ ಇನ್ನೂ ಹಲವು ಅವಕಾಶಗಳು ರುಕ್ಮಿಣಿ ಅವರನ್ನು ಅರಸಿ ಬರುವುದರಲ್ಲಿ ಅನುಮಾನವಿಲ್ಲ.

ವಿಜಯ್ ಸೇತುಪತಿ ಸಿನಿಮಾ ಹೊರತುಪಡಿಸಿ ಕನ್ನಡದ ಎರಡು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಹಾಗೂ ಶ್ರೀಮುರಳಿ ನಾಯಕರಾಗಿ ನಟಿಸಿ, ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿರುವ ‘ಬಘೀರ’ ಸಿನಿಮಾದಲ್ಲಿಯೂ ಸಹ ರುಕ್ಮಿಣಿಯೇ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ