ವಿಜಯ್, ರಣ್​ಬೀರ್, ಪ್ರಭಾಸ್ ಬಳಿಕ ಮತ್ತೊಬ್ಬ ಸ್ಟಾರ್​ ಜೊತೆ ಸಂದೀಪ್ ಸಿನಿಮಾ

Mahesh Babu: ಒಂದೇ ಸಿನಿಮಾ ಮೂಲಕ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ, ಇದೀಗ ರಣ್​ಬೀರ್ ಕಪೂರ್​ಗೆ ಸಿನಿಮಾ ನಿರ್ದೇಶಿಸಿದ್ದಾರೆ. ಪ್ರಭಾಸ್ ಜೊತೆಗಿನ ಸಿನಿಮಾ ಕೆಲವೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಅದರ ಬಳಿಕ ಮತ್ತೊಬ್ಬ ಸ್ಟಾರ್ ನಟನಿಗಾಗಿ ಸಿನಿಮಾ ಮಾಡಲಿದ್ದಾರೆ.

ವಿಜಯ್, ರಣ್​ಬೀರ್, ಪ್ರಭಾಸ್ ಬಳಿಕ ಮತ್ತೊಬ್ಬ ಸ್ಟಾರ್​ ಜೊತೆ ಸಂದೀಪ್ ಸಿನಿಮಾ
ಸಂದೀಪ್ ರೆಡ್ಡಿ ವಂಗಾ
Follow us
ಮಂಜುನಾಥ ಸಿ.
|

Updated on: Nov 28, 2023 | 4:16 PM

ಒಂದೇ ಸಿನಿಮಾದಿಂದ ಸ್ಟಾರ್ ನಿರ್ದೇಶಕನ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ತೆಲುಗಿನ ಸಂದೀಪ್ ರೆಡ್ಡಿ ವಂಗಾ (Sandeep Reddy Vanga). ಸಂದೀಪ್ ನಿರ್ದೇಶನದ ‘ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ಹಾಗೂ ಅದರದ್ದೇ ರೀಮೇಕ್ ಆದ ‘ಕಬೀರ್ ಸಿಂಗ್’ ಹೊರತುಪಡಿಸಿ ಇನ್ಯಾವುದೇ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಇದೀಗ ‘ಅನಿಮಲ್’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ ‘ಅರ್ಜುನ್ ರೆಡ್ಡಿ’ ಒಂದೇ ಸಿನಿಮಾದಿಂದಾಗಿ ದೊಡ್ಡ-ದೊಡ್ಡ ಸ್ಟಾರ್ ನಟರು ಈ ನಿರ್ದೇಶಕನ ಜೊತೆ ಕೆಲಸ ಮಾಡಲು ಸಾಲು ಗಟ್ಟಿ ನಿಂತಿದ್ದಾರೆ.

‘ಅರ್ಜುನ್ ರೆಡ್ಡಿ’ ಬಳಿಕ ಅದರದ್ದೇ ರೀಮೇಕ್ ಅನ್ನು ಬಾಲಿವುಡ್​ನ ಶಾಹಿದ್ ಕಪೂರ್​ಗಾಗಿ ಸಂದೀಪ್ ಮಾಡಿದರು. ಅದರ ಬಳಿಕ ಬಾಲಿವುಡ್​ನ ಸ್ಟಾರ್ ನಟ ರಣ್​ಬೀರ್ ಕಪೂರ್ ಜೊತೆಗೆ ‘ಅನಿಮಲ್’ ಸಿನಿಮಾ ಮಾಡಿದರು. ಈ ಸಿನಿಮಾದ ಬಳಿಕ ಪ್ರಭಾಸ್ ಜೊತೆ ಈಗಾಗಲೇ ಸಿನಿಮಾ ಘೋಷಿಸಿದ್ದಾರೆ. ಪ್ರಭಾಸ್​ಗಾಗಿ ‘ಸ್ಪಿರಿಟ್’ ಹೆಸರಿನ ಸಿನಿಮಾವನ್ನು ಸಂದೀಪ್ ನಿರ್ದೇಶಿಸುತ್ತಿತ್ತು, ಮುಂದಿನ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರುತ್ತಿದೆ.

ಇದನ್ನೂ ಓದಿ:ಗೆಳೆಯ ವಿಜಯ್ ದೇವರಕೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾ ಬಗ್ಗೆ ರಶ್ಮಿಕಾ ಮಂದಣ್ಣ ಅಭಿಪ್ರಾಯವೇನು?

ಪ್ರಭಾಸ್ ಜೊತೆಗಿನ ಸಿನಿಮಾದ ಬಳಿಕ ಮತ್ತೊಬ್ಬ ಸ್ಟಾರ್​ ಜೊತೆ ಸಿನಿಮಾ ಮಾಡಲಿದ್ದಾರೆ ಸಂದೀಪ್. ಅವರೇ ಮಹೇಶ್ ಬಾಬು. ಮಹೇಶ್ ಬಾಬುಗೆ ಈಗಾಗಲೇ ಕತೆಯೊಂದನ್ನು ಹೇಳಿ ಒಪ್ಪಿಸಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಸಿನಿಮಾದ ಹೆಸರು ‘ಡೆವಿಲ್’. ‘ಅನಿಮಲ್’ ರೀತಿಯೇ ಸಖತ್ ವೈಲೆಂಟ್ ಕತೆಯನ್ನು ‘ಡೆವಿಲ್’ ಸಿನಿಮಾ ಒಳಗೊಂಡಿದೆಯಂತೆ. ಅಸಲಿಗೆ ‘ಅನಿಮಲ್’ಗಿಂತಲೂ ಹೆಚ್ಚು ವೈಲೆಂಟ್ ಆಗಿರಲಿದೆ ‘ಡೆವಿಲ್’ ಎಂದಿದ್ದಾರೆ ಸಂದೀಪ್.

‘ಅನಿಮಲ್’ ಸಿನಿಮಾದ ಕತೆಯನ್ನು ಮೊದಲು ಮಹೇಶ್ ಬಾಬುಗೆ ಸಂದೀಪ್ ಹೇಳಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ಸಂದೀಪ್, ‘ಅನಿಮಲ್’ ಶೈಲಿಯ ಆದರೆ ಪ್ರತ್ಯೇಕ ಕತೆ ಹೊಂದಿರುವ ‘ಡೆವಿಲ್’ ಕತೆಯನ್ನು ಮಹೇಶ್ ಬಾಬುಗೆ ಹೇಳಿದ್ದೀನಿ, ಅದು ‘ಅನಿಮಲ್’ಗಿಂತಲೂ ಹೆಚ್ಚು ವೈಲೆಂಟ್ ಆಗಿರಲಿದೆ ಎಂದಿದ್ದಾರೆ. ಅಂದಹಾಗೆ ‘ಅನಿಮಲ್’ ಸಿನಿಮಾ ಡಿಸೆಂಬರ್ 1ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಎದುರು ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಅನಿಲ್ ಕಪೂರ್ ಸಹ ಸಿನಿಮಾದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ