‘ಅನಿಮಲ್’ ಸಿನಿಮಾಗಾಗಿ ಅರ್ಧದಷ್ಟು ಸಂಭಾವನೆ ಕಡಿತ ಮಾಡಿಕೊಂಡ ರಣಬೀರ್; ಒಟ್ಟೂ ಪಡೆದಿದ್ದೆಷ್ಟು?

‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ, ಚಿತ್ರಕ್ಕೆ ‘ಅರ್ಜುನ್ ರೆಡ್ಡಿ’ ಚಿತ್ರದ ಶೇಡ್ ಇದೆ. ‘ಅನಿಮಲ್​’ಗಾಗಿ ರಣಬೀರ್ ಅವರು 30-35 ಕೋಟಿ ರೂಪಾಯಿ ಪಡೆದಿದ್ದಾರೆ.

‘ಅನಿಮಲ್’ ಸಿನಿಮಾಗಾಗಿ ಅರ್ಧದಷ್ಟು ಸಂಭಾವನೆ ಕಡಿತ ಮಾಡಿಕೊಂಡ ರಣಬೀರ್; ಒಟ್ಟೂ ಪಡೆದಿದ್ದೆಷ್ಟು?
ರಣಬೀರ್ ಕಪೂರ್
Follow us
|

Updated on: Oct 02, 2023 | 7:46 AM

ನಟ ರಣಬೀರ್ ಕಪೂರ್ (Ranbir Kapoor) ಅವರು ‘ಅನಿಮಲ್’ ಸಿನಿಮಾ ಮೂಲಕ ಮಿಂಚಲು ರೆಡಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈಗ ಅವರ ಸಂಭಾವನೆ ವಿಚಾರ ಚರ್ಚೆಗೆ ಬಂದಿದೆ. ಅವರು ಈ ಚಿತ್ರಕ್ಕಾಗಿ ಪಡೆದಿದ್ದೆಷ್ಟು ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ರಣಬೀರ್ ಕಪೂರ್ ಅವರು ಸ್ಟಾರ್ ಹೀರೋ ಆಗಿ ಬೆಳೆದು ನಿಂತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಸಿಕ್ಕ ಎಲ್ಲಾ ಕಥೆಗಳನ್ನು ಒಪ್ಪಿ ನಟಿಸುವುದಿಲ್ಲ. ಅಳೆದು, ತೂಗಿ ಅವರು ಸಿನಿಮಾ ಮಾಡುತ್ತಾರೆ. ಅವರಿಗೆ ‘ಅನಿಮಲ್’ ಚಿತ್ರದ ಕಥೆ ಇಷ್ಟವಾಗಿದೆ. ಹೀಗಾಗಿ, ಈ ಚಿತ್ರಕ್ಕಾಗಿ ಅವರು ದೊಡ್ಡ ಕಾಲ್​ಶೀಟ್ ನೀಡಿದ್ದರು. ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ, ಚಿತ್ರಕ್ಕೆ ‘ಅರ್ಜುನ್ ರೆಡ್ಡಿ’ ಚಿತ್ರದ ಶೇಡ್ ಇದೆ. ‘ಅನಿಮಲ್​’ಗಾಗಿ ರಣಬೀರ್ ಅವರು 30-35 ಕೋಟಿ ರೂಪಾಯಿ ಪಡೆದಿದ್ದಾರೆ.

ರಣಬೀರ್ ಕಪೂರ್ ಅವರು ಪ್ರತಿ ಚಿತ್ರಕ್ಕೆ ಪಡೆಯೋದು 70 ಕೋಟಿ ರೂಪಾಯಿ. ಆದರೆ, ‘ಅನಿಮಲ್’ ಚಿತ್ರಕ್ಕಾಗಿ ಸಂಭಾವನೆಯನ್ನು ಅರ್ಧದಷ್ಟು ಇಳಿಸಿಕೊಂಡಿದ್ದಾರೆ. ಉಳಿದ 35 ಕೋಟಿ ರೂಪಾಯಿ ಹಣವನ್ನು ನಿರ್ಮಾಣಕ್ಕೆ ಬಳಕೆ ಮಾಡುವಂತೆ ಕೋರಿದ್ದಾರೆ. ಸಿನಿಮಾ ಗೆದ್ದರೆ ಅದರಲ್ಲಿ ಬಂದ ಲಾಭದಲ್ಲಿ ಪಾಲು ಪಡೆಯಲಿದ್ದಾರೆ. ಈ ರೀತಿಯ ಲೆಕ್ಕಾಚಾರವನ್ನು ಅವರು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಆಗಮನಕ್ಕೆ ಹೊಸ ದಿನಾಂಕ ನಿಗದಿ: ಡಿ.1ಕ್ಕೆ ಬರಲಿದೆ ರಶ್ಮಿಕಾ-ರಣಬೀರ್​ ಜೋಡಿಯ ಚಿತ್ರ

‘ಅನಿಮಲ್’ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. ರಣಬೀರ್ ತಂದೆಯಾಗಿ ಅನಿಲ್ ಕಪೂರ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸಾಹಸ ದೃಶ್ಯಗಳು ಇರಲಿವೆ ಅನ್ನೋದು ಅಭಿಮಾನಿಗಳ ನಿರೀಕ್ಷೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ