ಮೂರು ದಿನಕ್ಕೆ ಕೇವಲ 3.25 ಕೋಟಿ ರೂಪಾಯಿ ಗಳಿಸಿದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ

The Vaccine War Box Office Collection: ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ 3 ದಿನಕ್ಕೆ ಗಳಿಸಿರುವುದು 3.25 ಕೋಟಿ ರೂಪಾಯಿ ಮಾತ್ರ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಭಾರತದ ಮೊದಲ ಬಯೋ ಸೈನ್ಸ್​ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದ್ದರೂ ಕೂಡ ಸಿನಿಪ್ರಿಯರು ಆಸಕ್ತಿ ತೋರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಲೆಕ್ಷನ್​ ಇನ್ನಷ್ಟು ತಗ್ಗುವ ಸಾಧ್ಯತೆ ಇದೆ.

ಮೂರು ದಿನಕ್ಕೆ ಕೇವಲ 3.25 ಕೋಟಿ ರೂಪಾಯಿ ಗಳಿಸಿದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ
ದಿ ವ್ಯಾಕ್ಸಿನ್​ ವಾರ್​
Follow us
ಮದನ್​ ಕುಮಾರ್​
|

Updated on: Oct 01, 2023 | 1:33 PM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಿಂದ ನಿರೀಕ್ಷಿತ ಮಟ್ಟದ ಗೆಲುವು ಕಾಣಲು ಸಾಧ್ಯವಾಗುತ್ತಿಲ್ಲ. ಸೆಪ್ಟೆಂಬರ್​ 28ರಂದು ಈ ಸಿನಿಮಾ ಬಿಡುಗಡೆ ಆಯಿತು. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ಕಲೆಕ್ಷನ್​ ಆಗುತ್ತಿಲ್ಲ. ಮೂರು ದಿನ ಕಳೆದರೂ ಈ ಸಿನಿಮಾ ಗಳಿಸಿರುವುದು ಕೇವಲ 3.25 ಕೋಟಿ ರೂಪಾಯಿ ಪಾತ್ರ. ಈದ್​ ಮಿಲಾದ್​ ಹಬ್ಬದ ರಜೆ, ವೀಕೆಂಡ್​ ಇದ್ದರೂ ಕೂಡ ದಿ ವ್ಯಾಕ್ಸಿನ್​ ವಾರ್​’ (The Vaccine War) ಸಿನಿಮಾಗೆ ಯಾವುದೇ ರೀತಿಯ ಉಪಯೋಗ ಆಗಿಲ್ಲ. ಸೋಮವಾರದ ನಂತರ ಈ ಸಿನಿಮಾದ ಕಲೆಕ್ಷನ್​ (The Vaccine War Collection) ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಕಡಿಮೆ ಬಜೆಟ್​ನಲ್ಲಿ ನಿರ್ಮಾಣ ಆಗಿರುವುದರಿಂದ ಚಿತ್ರತಂಡಕ್ಕೆ ದೊಡ್ಡ ಹೊರೆ ಆಗುವುದಿಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿ.

ಕೊವಿಡ್​ ಹರಡಿದ್ದಾಗ ಭಾರತವು ವ್ಯಾಕ್ಸಿನ್​ ಕಂಡು ಹಿಡಿದ ಕಥೆಯನ್ನು ಇಟ್ಟುಕೊಂಡು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡಲಾಗಿದೆ. ಈ ಸಿನಿಮಾಗೆ ವಿವೇಕ್​ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಅವರು ಬಂಡವಾಳ ಹೂಡಿದ್ದಾರೆ. 10ರಿಂದ 12 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್​ ಆಗಿಲ್ಲ. ಈ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳು ಈಗಾಗಲೇ ಸೇಲ್​ ಆಗಿರುವುದರಿಂದ ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ನಟಿ, ನಿರ್ಮಾಪಕಿ ಪಲ್ಲವಿ ಜೋಶಿ ಜನಪ್ರಿಯತೆ ಹೆಚ್ಚಿಸಿದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ

ನಾನಾ ಪಾಟೇಕರ್​, ಸಪ್ತಮಿ ಗೌಡ, ಪಲ್ಲವಿ ಜೋಶಿ, ಅನುಪಮ್ ಖೇರ್​, ರೈಮಾ ಸೇನ್​, ಗಿರಿಜಾ ಓಕ್​ ಮುಂತಾದವರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಮರ್ಶಕರಿಂದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ತೋರಿಸಿರುವ ವಿವರಗಳು ಏಕಪಕ್ಷೀಯವಾಗಿವೆ ಎಂಬ ಟೀಕೆ ಕೂಡ ಎದುರಾಗಿದೆ. ಈ ಎಲ್ಲ ಕಾರಣಗಳಿಂದಾಗಿ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಕಲೆಕ್ಷನ್​ ನೀರಸವಾಗಿದೆ.

ಇದನ್ನೂ ಓದಿ: ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ಮಿಂಚಿದ ನಟಿ ರೈಮಾ ಸೇನ್​

ಮೊದಲ ದಿನವಾದ ಸೆಪ್ಟೆಂಬರ್​ 28ರಂದು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗೆ 85 ಲಕ್ಷ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ 90 ಲಕ್ಷ ರೂಪಾಯಿ ಮಾತ್ರ ಸಂಗ್ರಹ ಆಯಿತು. ಮೂರನೇ ದಿನವಾದ ಶನಿವಾರ (ಸೆಪ್ಟೆಂಬರ್​ 30) ಈ ಸಿನಿಮಾಗೆ 1.5 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಒಟ್ಟು ಮೂರು ದಿನಕ್ಕೆ ಈ ಸಿನಿಮಾ ಗಳಿಸಿರುವುದು 3.25 ಕೋಟಿ ರೂಪಾಯಿ ಮಾತ್ರ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಭಾರತದ ಮೊದಲ ಬಯೋ ಸೈನ್ಸ್​ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದ್ದರೂ ಕೂಡ ಸಿನಿಪ್ರಿಯರು ‘ದಿ ವ್ಯಾಕ್ಸಿನ್​ ವಾರ್​’ ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.