ನಿರ್ಮಾಪಕನಿಂದ ಪಾರಾಗಲು ಮೇಕಪ್ ಮ್ಯಾನ್ ಜೊತೆ ರೂಂ ನಲ್ಲಿ ಮಲಗಿದ್ದೆ: ನಟಿ ಇಶಾ ಗುಪ್ತಾ
Esha Gupta: ನಟಿ ಇಶಾ ಗುಪ್ತಾ ತಮಗಾದ ಕೆಟ್ಟ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರ್ಮಾಪಕನಿಂದ ತಪ್ಪಿಸಿಕೊಳ್ಳಲು ಮೇಕಪ್ ಮ್ಯಾನ್ ಜೊತೆ ಮಲಗಿದ್ದಾಗಿ ಇಶಾ ಹೇಳಿಕೊಂಡಿದ್ದಾರೆ.
ಈ ವರೆಗೆ ಹಲವಾರು ನಟಿಯರು ತಾವು ಎದುರಿಸಿದ ಕಾಸ್ಟಿಂಗ್ ಕೌಚ್ (Casting Couch) ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಲೈಂಗಿಕ ದೌರ್ಜನ್ಯ ಮಾಡಿದವರ ಹೆಸರುಗಳನ್ನು ಹೇಳಿ ದೂರುಗಳನ್ನು ದಾಖಲಿಸಿದ್ದಾರೆ, ಹಲವರು ಹೆಸರು ಹೇಳದೆ ಆರೋಪಗಳನ್ನಷ್ಟೆ ಮಾಡಿದ್ದಾರೆ. ಬಾಲಿವುಡ್ನ ಹಾಟ್ ನಟಿಯರಲ್ಲಿ ಒಬ್ಬರಾದ ಇಶಾ ಗುಪ್ತಾ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
’’ನಾನು ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣ ಹೊರಾಂಗಣದಲ್ಲಿ ನಡೆಯುತ್ತಿತ್ತು. ನಿರ್ಮಾಪಕರ ಕಡೆಯವರು ಎಂದು ಹೇಳಿಕೊಂಡ ಕೆಲವರು ನನ್ನನ್ನು ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್ಗೆ ಬದಲಾಗಿ ಬೇರೆ ಹೋಟೆಲ್ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ರೂಂನಲ್ಲಿ ನಾನೊಬ್ಬಳೇ ಇರುವಂತೆ ನೋಡಿಕೊಂಡರು. ಆದರೆ ಅವರ ಉದ್ದೇಶ ಅರಿತ ನಾನು ನನ್ನ ಮೇಕಪ್ ಮ್ಯಾನ್ ಅನ್ನು ಕರೆದು ನನ್ನೊಟ್ಟಿಗೆ ರೂಂನಲ್ಲಿ ಮಲಗುವಂತೆ ಸೂಚಿಸಿದೆ. ಅಂದು ನನ್ನ ಮೇಕಪ್ ಮ್ಯಾನ್ ಸಹ ನನ್ನೊಟ್ಟಿಗೆ ಕೋಣೆಯಲ್ಲಿ ಮಲಗಿಕೊಂಡ. ನನಗೆ ಮೇಕಪ್ ಮ್ಯಾನ್ನ ಭದ್ರತೆ ಇದಿದ್ದನ್ನು ಗಮನಿಸಿ ಅವರು ತಮ್ಮ ಯೋಜನೆ ಕೈಬಿಟ್ಟರು” ಎಂದು ಇಶಾ ಗುಪ್ತಾ ಹೇಳಿಕೊಂಡಿದ್ದಾರೆ.
ಮತ್ತೊಂದು ಅನುಭವವನ್ನು ಹಂಚಿಕೊಂಡಿರುವ ಇಶಾ ಗುಪ್ತಾ, ”ನನಗೆ ಒಂದು ಸಿನಿಮಾದಿಂದ ಆಫರ್ ಬಂದಿತ್ತು. ಆ ಸಿನಿಮಾದ ಚಿತ್ರೀಕರಣ ಅದಾಗಲೇ ಅರ್ಧ ಪೂರ್ಣವಾಗಿತ್ತು. ಆದರೆ ಅದು ಲೈಂಗಿಕತೆಗೆ ಸಂಬಂಧಿಸಿದ ಸಿನಿಮಾ ಆಗಿತ್ತಲ್ಲದೆ, ನಾನು ಬಹಳ ಬೋಲ್ಡ್ ಆಗಿ ನಟಿಸಬೇಕಿತ್ತು. ಹಾಗಾಗಿ ನಾನು ಆ ಸಿನಿಮಾ ಒಪ್ಪಿಕೊಳ್ಳದೆ ನಿರಾಕರಿಸಿದೆ. ಅದಾದ ಬಳಿಕ ನನಗೆ ಹೆಚ್ಚು ಸಿನಿಮಾ ಅವಕಾಶಗಳು ಲಭಿಸಲಿಲ್ಲ’’ ಎಂದಿದ್ದಾರೆ ಇಶಾ.
ಇಶಾ ಗುಪ್ತ, ಬಾಲಿವುಡ್ನ ಸಖತ್ ಹಾಟ್ ನಟಿಯರಲ್ಲಿ ಒಬ್ಬರು. ಕಳೆದ ಒಂದು ದಶಕದಿಂದಲೂ ಇಶಾ ಗುಪ್ತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ಇಶಾ ಗುಪ್ತಾ ಬಾಲಿವುಡ್ನ ಕೆಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ‘ಫೈಲ್ ನಂ 323’ ’ಹೇರಾಪೇರಿ 3’, ’ದೇಸಿ ಮ್ಯಾಜಿಕ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ