Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಒಬ್ಬ ನಟ ನನ್ನ ಹಿಂದೆ ಬಿದ್ದಿದ್ದ: ಹನ್ಸಿಕಾ ಮೊಟ್ವಾನಿ

Casting Couch: ನಟಿ ಹನ್ಸಿಕಾ ಮೊಟ್ವಾನಿ, ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಾಗ ತಾನು ಕಾಸ್ಟಿಂಗ್ ಕೌಚ್ ಅನುಭವ ಎದುರಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ ನಟನೊಬ್ಬ ತನ್ನ ಬೆನ್ನು ಬಿದ್ದಿದ್ದ ಎಂದೂ ಸಹ ಹೇಳಿಕೊಂಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಒಬ್ಬ ನಟ ನನ್ನ ಹಿಂದೆ ಬಿದ್ದಿದ್ದ: ಹನ್ಸಿಕಾ ಮೊಟ್ವಾನಿ
ಹನ್ಸಿಕಾ ಮೊಟ್ವಾನಿ
Follow us
ಮಂಜುನಾಥ ಸಿ.
|

Updated on: May 23, 2023 | 9:51 PM

ಎರಡು ದಶಕಗಳಿಂದಲೂ ನಟನಾ ವೃತ್ತಿಯಲ್ಲಿರುವ ಹನ್ಸಿಕಾ ಮೊಟ್ವಾನಿ (Hansika Motwani) ಒಂದು ಕಾಲದಲ್ಲಿ ತೆಲುಗಿನ ಸ್ಟಾರ್ ನಟಿ. ತೆಲುಗು ಸಿನಿಮಾ ಮೂಲಕವೇ ನಾಯಕಿಯಾಗಿ ಪದಾರ್ಪಣೆ ಮಾಡಿದ ಹನ್ಸಿಕಾ. ಟಾಲಿವುಡ್​ನ ಹಲವು ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗದ ಬಗ್ಗೆ ಮಾತನಾಡಿರುವ ಹನ್ಸಿಕಾ ಮೊಟ್ವಾನಿ, ತೆಲುಗು ಚಿತ್ರರಂಗದಲ್ಲಿಯೂ ಕಾಸ್ಟಿಂಗ್ ಕೌಚ್ (casting couch) ಇದೆ ಎಂದಿದ್ದಾರೆ. ಒಬ್ಬ ನಟನಂತೂ ತಮ್ಮ ಹಿಂದೆ ಬಿದ್ದಿದ್ದ ಎಂದು ಹೇಳಿಕೊಂಡಿದ್ದಾರೆ.

ಹೃತಿಕ್ ರೋಷನ್-ಪ್ರೀತಿ ಝಿಂಟಾ ನಟಿಸಿರುವ ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ಬಾಲನಟಿಯಾಗಿದ್ದ ಹನ್ಸಿಕಾ, ಸುಮಾರು ಐದು ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು. 2004 ರಲ್ಲಿ ಬಿಡುಗಡೆ ಆದ ತೆಲುಗಿನ ದೇಶಮುದುರು ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ನೀಡಿದರು. ಅದಾದ ಬಳಿಕ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಹನ್ಸಿಕಾ ಮೊಟ್ವಾನಿ, ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿತ್ತು. ಆಗ ಯುವನಟನೊಬ್ಬ ಡೇಟಿಂಗ್​ಗಾಗಿ ನನ್ನ ಹಿಂದೆಯೇ ಬಿದ್ದುಬಿಟ್ಟಿದ್ದ. ಹಲವು ಬಾರಿ ಆತನೊಟ್ಟಿಗೆ ಹೊರಗೆ ಬರುವಂತೆ ನನ್ನನ್ನು ಕೇಳಿದ್ದ ಕೊನೆಗೆ ಆತನಿಗೆ ನಾನು ಸರಿಯಾದ ಪಾಠವನ್ನು ಕಲಿಸಿದೆ ಎಂದಿದ್ದಾರೆ ಹನ್ಸಿಕಾ ಮೊಟ್ವಾನಿ.

ಹನ್ಸಿಕಾ ಈ ಮಾತು ಹೇಳುತ್ತಿದ್ದಂತೆ ಯಾರು ಆ ನಟ ಎಂಬ ಚರ್ಚೆ ಆರಂಭವಾಗಿದೆ. ಹನ್ಸಿಕಾ ನಟನೆಗೆ ಕಾಲಿಟ್ಟಿದ್ದು ಅಲ್ಲು ಅರ್ಜುನ್ ಸಿನಿಮಾ ಮೂಲಕ. ಅಲ್ಲು ಅರ್ಜುನ್ ಬಗ್ಗೆಯೇ ಹನ್ಸಿಕಾ ಈ ಮಾತು ಹೇಳಿದರಾ ಎಂಬ ಅನುಮಾನ ಮೂಡಿದೆ. ಅಲ್ಲು ಅರ್ಜುನ್ ಸಿನಿಮಾ ಬಳಿಕ ಜೂ ಎನ್​ಟಿಆರ್ ಜೊತೆ ಹನ್ಸಿಕಾ ನಟಿಸಿದರು. ಬಳಿಕ ಫ್ರಬಾಸ್, ಸಿದ್ಧಾರ್ಥ್ ಜೊತೆ ನಟಿಸಿದರು. ಹಾಗಿದ್ದರೆ ಹನ್ಸಿಕಾಗೆ ತೊಂದರೆ ಕೊಟ್ಟಿದ್ದು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಹನ್ಸಿಕಾ ಮಾತ್ರ ತಾವು ಆ ನಟನ ಹೆಸರು ಹೇಳುವುದಿಲ್ಲ ಎಂದುಬಿಟ್ಟಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ

ಹನ್ಸಿಕಾ ಮೊಟ್ವಾನಿ ಇತ್ತೀಚೆಗಷ್ಟೆ ಉದ್ಯಮಿ ಸೋಹೆಲ್ ಕಟುರಿಯಾ ಅನ್ನು ವಿವಾಹವಾಗಿದ್ದಾರೆ. ಈ ವಿವಾಹವು ವಿವಾದಕ್ಕೆ ಕಾರಣವಾಗಿತ್ತು. ಹನ್ಸಿಕಾ ಮೊಟ್ವಾನಿ ತನ್ನ ಆಪ್ತ ಗೆಳತಿಯ ಪತಿಯನ್ನೇ ವಿವಾಹವಾಗಿದ್ದಾರೆ ಎಂದು ಹನ್ಸಿಕಾ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಮಾತನಾಡಿದ್ದ ಸೋಹೆಲ್ ಕಟುರಿಯಾ, ನಾನು ವಿವಾಹವಾಗಿರುವ ಸುದ್ದಿ ಬಹಿರಂಗವಾಗಿದೆ ಅದೂ ಕೆಟ್ಟ ರೀತಿಯಲ್ಲಿ. ನನ್ನ ಹಿಂದಿನ ಮದುವೆ ಮುರಿಯಲು ಹನ್ಸಿಕಾ ಕಾರಣ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಅದು ಸುಳ್ಳು ಎಂದಿದ್ದರು.

ಹನ್ಸಿಕಾ ಮೊಟ್ವಾನಿ ಹಾಗೂ ಸೋಹೆಲ್ ಕಟುರಿಯಾ ವಿವಾಹವು ಡಿಸ್ನಿ-ಹಾಟ್​ಸ್ಟಾರ್​ನಲ್ಲಿ ಲವ್ ಶಾದಿ ಡ್ರಾಮಾ ಹೆಸರಿನಲ್ಲಿ ಪ್ರಸಾರವಾಯಿತು. ಈ ಬಗ್ಗೆಯೂ ನೆಟ್ಟಿಗರು ಹಲವು ಟೀಕೆಗಳನ್ನು ಮಾಡಿದರು. ಅದರಲ್ಲಿಯೂ ಮದುವೆಯಲ್ಲಿ ಹನ್ಸಿಕಾರ ತಾಯಿ ನಡೆದುಕೊಂಡ ರೀತಿಯ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಮದುವೆಯ ಬಳಿಕ ನಟನೆಯನ್ನು ಹನ್ಸಿಕಾ ಮುಂದುವರೆಸಿದ್ದು ಮ್ಯಾನ್ ಹೆಸರಿನ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಈ ಮಹಿಳಾ ಪ್ರಧಾನ ಸಿನಿಮಾವನ್ನು ಮದ್ರಾಸ್ ಟಾಕೀಸ್ ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ