ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ

Casting Couch: ಹನ್ನೆರಡು ವರ್ಷದಿಂದ ಇಂಡಸ್ಟ್ರೀಯಲ್ಲಿದ್ದೇನೆ. ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ. ಯಾರಾದರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬೇಕು, ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ - ನಟಿ ರಾಗಿಣಿ

ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ
ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ; ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ
TV9kannada Web Team

| Edited By: Apurva Kumar Balegere

Jun 16, 2021 | 4:23 PM

ವಿಜಯಪುರ: ನಟಿ ರಾಗಿಣಿ ದ್ವಿವೇದಿ ನಗರಕ್ಕೆ ಭೇಟಿ ನೀಡಿದ್ದು, ಡ್ರಗ್ಸ್ ಕೇಸ್ ವಿಚಾರವಾಗಿ ಮಾತನಾಡಿದ್ದಾರೆ. ಡ್ರಗ್ಸ್ ಕೇಸ್ ವಿಚಾರವಾಗಿ ಹೆಚ್ಚಿಗೆ ಮಾತಾಡೋದಿಲ್ಲ ಎಂದೇ ಮಾತಿಗಾರಂಭಿಸಿದ ನಟಿ ರಾಗಿಣಿ ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ನಾವು ತಪ್ಪು ಮಾಡಿಲ್ಲಾ ಅಂದ್ರೆ ನಾವು ಟೆನ್ಷನ್ ಮಾಡಿಕೊಳ್ಳಬಾರದು. ಆದರೆ ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಬರೀ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ. ಹೆಣ್ಮಕ್ಕಳು ಅಂದರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತದೆ. ಹೆಣ್ಮಕ್ಕಳನ್ನು ತುಂಬಾ ಈಜಿಯಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ. ಬ್ಲೇಮ್ ಮಾಡೋ ಬದಲು ಎಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ಕರೆಕ್ಟ್ ಆಗಿದ್ದರೆ ಸಾಕು ಎಂದು ನಟಿ ರಾಗಿಣಿ ಬಯಸಿದರು. ವಿಜಯಪುರ ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳಮುಖಿಯರಿಗೆ ಕೊರೊನಾ ಲಸಿಕೆ ಹಾಕುವ ಮತ್ತು ಆಹಾರದ ಕಿಟ್ ನೀಡುವ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಭಾಗಿಯಾಗಿದ್ದರು.

ನನ್ನ ಲೈಫ್‌ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ:

ಕನ್ನಡ ಫೀಲ್ಟ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ಮಾತನಾಡಿದ ನಟಿ ರಾಗಿಣಿ, ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಡಿಪೆಂಡ್ ಆಗಿರುತ್ತೆ. ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್‌ನಲ್ಲಿ ನನಗೆ ಎಕ್ಸ್​​ಪೀರಿಯನ್ಸ್ ಆಗಿಲ್ಲ. ಲೈಫ್ ನಲ್ಲಿ ಎರಡು ಥರದ ಜೀವನ ಇದೆ. ಒಂದು ಶಾರ್ಟ್ ಕಟ್, ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೀತಿವಿ, ಪ್ರತಿಯೊಂದು ಸ್ಟೆಪ್ ಬೈ ಸ್ಟೆಪ್ ಆಗುತ್ತದೆ. ಶಾರ್ಟ್ ಕಟ್ ತಗೊಂಡರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ. ಅತೀ ಶೀಘ್ರದಲ್ಲಿ ನೇಮು, ಫೇಮು, ದುಡ್ಡು ಗಳಿಸೋದನ್ನ ಬಿಟ್ಟು ನಮ್ಮ ಕೆಲಸದ ಮೇಲೆ ವಿಶ್ವಾಸವಿಟ್ಟು, ನಾವು ಏನು ಮಾಡುತ್ತೇವೆ ಅನ್ನೋದರ ಮೇಲೆ ಫೋಕಸ್ ಮಾಡಬೇಕು. ಹನ್ನೆರಡು ವರ್ಷದಿಂದ ಇಂಡಸ್ಟ್ರೀಯಲ್ಲಿದ್ದೇನೆ. ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ. ಯಾರಾದರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬೇಕು, ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದು ನಟಿ ರಾಗಿಣಿ ಹೇಳಿದರು.

ಪ್ರಶಾಂತ ಸಂಬರಗಿ ನಿಜವಾಗಿಯೂ ನನಗೆ ಪರಿಚಯವಿಲ್ಲ:

Am targeted in drugs case and i have not experienced casting couch said ragini dwivedi 2

ವಿಜಯಪುರದ ಖಾಸಗಿ ಹೊಟೇಲಿನಲ್ಲಿ ಮಂಗಳಮುಖಿಯರಿಗೆ ಕೊರೊನಾ ಲಸಿಕೆ ಹಾಕುವ  ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಭಾಗಿ

ಇನ್ನು, ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ತನ್ನ ಕುರಿತು ನೀಡಿರುವ ಹೇಳಿಕೆಗಳ ವಿಚಾರವಾಗಿ ಮಾತನಾಡಿದ ನಟಿ ರಾಗಿಣಿ, ಸಂಬರಗಿ ನಿಜವಾಗಿಯೂ ನನಗೆ ಪರಿಚಯವಿಲ್ಲ. ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ, ಅವರವರ ಓಪಿನಿಯನ್ ಮಾತನಾಡುತ್ತಾರೆ, ಅದನ್ನು ನಾನು ಕಂಟ್ರೋಲ್ ಮಾಡಲು ಆಗಲ್ಲಾ. ನಾನು ಏನು ಮಾಡುತ್ತೇನೆ, ಏನು ಮಾತಾಡುತ್ತೇನೆ ಅನ್ನೋದನ್ನು ಮಾತ್ರ ಕಂಟ್ರೋಲ್ ಮಾಡುತ್ತೇನೆ ಎಂದು ವ್ಯಾಖ್ಯಾನಿಸಿದರು.

ನನ್ನನ್ನು ಎಲ್ಲರೂ ಇಷ್ಟ ಪಡುತ್ತಾರೆ, ನನಗೆ ಫ್ಯಾನ್ಸ್ ಇದ್ದಾರೆ. ಅವರಿಗೆಲ್ಲ ಧನ್ಯವಾದ ಹೇಳುತ್ತೇನೆ. ನನ್ನನ್ನು ಇಷ್ಟಾ ಪಟ್ಟವರಿಗೂ, ಇಷ್ಟ ಪಡದವರಿಗೂ Thank u ಎಂದು ರಾಗಿಣಿ ಮಾತು ಮುಗಿಸಿದರು.

(Am targeted in drugs case and i have not experienced casting couch said ragini dwivedi)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada