AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಮೇರಾದಲ್ಲಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದು ಆಡುತ್ತಿದ್ದ ಬಾಲಕನ ತೊಡೆಗೆ ಗುಂಡು ತಗುಲಿ ಗಾಯ

Misfire: ಮನೆಯ ಅಲ್ಮೇರಾದಲ್ಲಿ ಇಡಲಾಗಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದಿದ್ದ ಬಾಲಕ ಅಭಿಷೇಕ, ಅದರೊಂದಿಗೆ ಆಟವಾಡತೊಡಗಿದ್ದ. ಆಟವಾಡುವಾಗ ಆಕಸ್ಮಿಕವಾಗಿ ಆತನ ತೊಡೆಗೆ ಗುಂಡು ತಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕ ಅಭಿಷೇಕನನ್ನು ವಿಜಯಪುರ ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಅಲ್ಮೇರಾದಲ್ಲಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದು ಆಡುತ್ತಿದ್ದ ಬಾಲಕನ ತೊಡೆಗೆ ಗುಂಡು ತಗುಲಿ ಗಾಯ
ಅಲ್ಮೇರಾದಲ್ಲಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದು ಆಡುತ್ತಿದ್ದ ಬಾಲಕನ ತೊಡೆಗೆ ಗುಂಡು ತಗುಲಿ ಗಾಯ
TV9 Web
| Edited By: |

Updated on: Jun 15, 2021 | 4:04 PM

Share

ವಿಜಯಪುರ: ರಿವಾಲ್ವರ್​ನಿಂದ ಆಟವಾಡುವಾಗ ಆಕಸ್ಮಿಕವಾಗಿ ಬಾಲಕನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಮಡ್ಡಿ ಪ್ರದೇಶದಲ್ಲಿ ನಡೆದಿದೆ. ನಾಲ್ಕು ವರ್ಷದ ಅಭಿಷೇಕ ಸಿದ್ದಾಮ ಗೋಟ್ಯಾಳ ಗಾಯಗೊಂಡ ಬಾಲಕ.

ಮನೆಯ ಅಲ್ಮೇರಾದಲ್ಲಿ ಇಡಲಾಗಿದ್ದ ಲೋಡೆಡ್ ರಿವಾಲ್ವರ್ ಹೊರತೆಗೆದಿದ್ದ ಬಾಲಕ ಅಭಿಷೇಕ, ಅದರೊಂದಿಗೆ ಆಟವಾಡತೊಡಗಿದ್ದ. ಆಟವಾಡುವಾಗ ಆಕಸ್ಮಿಕವಾಗಿ ಆತನ ತೊಡೆಗೆ ಗುಂಡು ತಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕ ಅಭಿಷೇಕನನ್ನು ವಿಜಯಪುರ ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಸ್ಥಳಕ್ಕೆ ಚಡಚಣ ಠಾಣೆಯ ಸಿಪಿಐ ಚಿದಂಬರ ಮಡಿವಾಳರ ಮತ್ತು ಪಿಎಸ್​ಐ ಸತಿಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯಲ್ಲಿಂದು 51 ಜನರಿಗೆ ಕೊರೊನಾ ದೃಢ: ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇದುವರೆಗೆ 35,628 ಕ್ಕೆ ಏರಿಕೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿಂದು ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಕೊರೊನಾದಿಂದ 4,565 ಜನ‌ ಅಸುನೀಗಿದ್ದಾರೆ.

(misfire while playing in vijayapura boy injured)

Hunting: ನಾಲ್ವರು ಸ್ನೇಹಿತರು ಕಳೆದ ರಾತ್ರಿ ಬೇಟೆಗೆ ಹೋದಾಗ ಆಕಸ್ಮಿಕವಾಗಿ ಗುಂಡು ಹಾರಿ ಒಬ್ಬ ಸ್ನೇಹಿತ ಸ್ಥಳದಲ್ಲೇ ಸಾವು

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ