ಹೆಚ್ಚಿತು ವ್ಯಾಕ್ಸಿನ್ ವಾರ್ ಚಿತ್ರದ ಭಾನುವಾರದ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ?
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮಿರ್ ಫೈಲ್ಸ್’ ಸಿನಿಮಾ ಮೂಲಕ ಫೇಮಸ್ ಆದರು. ಈಗ ಅವರು ಆಯ್ಕೆ ಮಾಡಿಕೊಂಡಿದ್ದು ಕೊವಿಡ್ ಘಟನೆಯನ್ನು. ಆ ಸಂದರ್ಭದಲ್ಲಿ ಭಾರತದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದದ್ದನ್ನು ಆಧರಿಸಿ ಈ ಸಿನಿಮಾದ ಕಥೆ ಸಿದ್ಧಗೊಂಡಿದೆ. ಭಾನುವಾರ (ಅಕ್ಟೋಬರ್ 1) 2.20 ಕೋಟಿ ರೂಪಾಯಿ ಗಳಿಸಿದೆ.
ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ (The Vaccine War Movie) ಭಾನುವಾರದ ಕಲೆಕ್ಷನ್ ಹೆಚ್ಚಿದೆ. ರಿಲೀಸ್ ಆದಾಗಿನಿಂದ ಕುಂಟುತ್ತಲೇ ಸಾಗುತ್ತಿದ್ದ ಈ ಚಿತ್ರ ಸ್ವಲ್ಪ ಚೇತರಿಕೆ ಕಂಡಿದೆ. ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ ಹಿನ್ನೆಯಲ್ಲಿ ಸರ್ಕಾರಿ ರಜೆ ಇರುವುದರಿಂದ ಒಳ್ಳೆಯ ರೀತಿಯ ಕಲೆಕ್ಷನ್ ಆಗುವ ನಿರೀಕ್ಷೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸಿದ್ದಾರೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 5.70 ಕೋಟಿ ರೂಪಾಯಿ ಆಗಿದೆ.
ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮಿರ್ ಫೈಲ್ಸ್’ ಸಿನಿಮಾ ಮೂಲಕ ಫೇಮಸ್ ಆದರು. ಈಗ ಅವರು ಆಯ್ಕೆ ಮಾಡಿಕೊಂಡಿದ್ದು ಕೊವಿಡ್ ಘಟನೆಯನ್ನು. ಆ ಸಂದರ್ಭದಲ್ಲಿ ಭಾರತದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದದ್ದನ್ನು ಆಧರಿಸಿ ಈ ಸಿನಿಮಾದ ಕಥೆ ಸಿದ್ಧಗೊಂಡಿದೆ. ಭಾನುವಾರ (ಅಕ್ಟೋಬರ್ 1) 2.20 ಕೋಟಿ ರೂಪಾಯಿ ಗಳಿಸಿದೆ. ಸಿನಿಮಾದ ಬಜೆಟ್ ಕಡಿಮೆ ಇರುವುದರಿಂದ ನಿರ್ಮಾಪಕರಿಗೆ ದೊಡ್ಡ ಹೊರೆ ಆಗುವುದಿಲ್ಲ.
‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಸಪ್ತಮಿ ಗೌಡ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಅವರು ನಿರ್ಮಾಣ ಮಾಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡವರು ವಿವೇಕ್ ಅಗ್ನೊಹೋತ್ರಿ. ಈಗ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಮೂಲಕ ಸೋಲು ಕಂಡಿದ್ದಾರೆ. ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಸೀಕ್ವೆಲ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಿಡುಗಡೆ ಆದ ಮೂರೇ ದಿನಕ್ಕೆ ಉಚಿತ ಟಿಕೆಟ್ ಆಫರ್ ಘೋಷಿಸಿದ 6;ದಿ ವ್ಯಾಕ್ಸಿನ್ ವಾರ್
‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಪ್ರೇಕ್ಷಕರು ಹಾಗೂ ನಿರ್ಮಾಪಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಒಂದು ಮುಖವನ್ನು ಮಾತ್ರ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 2 October 23