AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಕತೆಯ ಎಳೆ ಬಿಟ್ಟುಕೊಟ್ಟ ಪ್ರಶಾಂತ್ ನೀಲ್: ಆ ಸಿನಿಮಾದ ಛಾಯೆ ಇದೆ

Salaar: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಕತೆಯ ಎಳೆಯನ್ನು ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿದ್ದಾರೆ.

‘ಸಲಾರ್’ ಕತೆಯ ಎಳೆ ಬಿಟ್ಟುಕೊಟ್ಟ ಪ್ರಶಾಂತ್ ನೀಲ್: ಆ ಸಿನಿಮಾದ ಛಾಯೆ ಇದೆ
ಸಲಾರ್
ಮಂಜುನಾಥ ಸಿ.
|

Updated on: Nov 28, 2023 | 8:58 PM

Share

ಪ್ರಭಾಸ್ (Prabhas) ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿರುವ ‘ಸಲಾರ್’ (Salaar) ಸಿನಿಮಾ ಭಾರತದ ಈ ವರ್ಷದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ‘ಕೆಜಿಎಫ್’ ಸರಣಿ ಮೂಲಕ ಭಾರಿ ದೊಡ್ಡ ಬ್ಲಾಕ್ ಬಸ್ಟರ್​ಗಳನ್ನು ನೀಡಿರುವ ಪ್ರಶಾಂತ್ ನೀಲ್, ಪ್ರಭಾಸ್ ಜೊತೆ ಕೈಜೋಡಿಸಿರುವ ಕಾರಣ ನಿರೀಕ್ಷೆಗಳು ನೂರು ಪಟ್ಟಾಗಿದೆ. ‘ಸಲಾರ್’ ಸಿನಿಮಾ ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದೆ. ಇದೀಗ ಬಾಲಿವುಡ್​ನ ವೆಬ್​ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾದ ಕತೆಯ ಎಳೆ ಬಿಟ್ಟುಕೊಟ್ಟಿದ್ದಾರೆ.

‘ಪಿಂಕ್​ವಿಲ್ಲಾ’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾ ಆತ್ಮೀಯ ಗೆಳೆಯರಿಬ್ಬರು ಬದ್ಧ ವೈರಿಗಳಾಗುವ ಕತೆ ಎಂದು ಹೇಳಿದ್ದಾರೆ. ಅಲ್ಲಿಗೆ, ‘ಸಲಾರ್’ ಸಿನಿಮಾದಲ್ಲಿ ನಟಿಸಿರುವ ಪ್ರಭಾಸ್ ಹಾಗೂ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ನಡುವೆ ನಡೆಯುವ ಕತೆಯೇ ಸಿನಿಮಾದ ಪ್ರಧಾನ ಅಂಶ ಎಂಬುದು ತಿಳಿದು ಬರುತ್ತಿದೆ. ಆದರೆ ಗೆಳೆಯರು ಹೀಗೆ ವೈರಿಗಳಾಗಲು ಏನು ಕಾರಣ? ಗೆಳೆಯರ ಯುದ್ಧದಲ್ಲಿ ಅಂತಿಮವಾಗಿ ಗೆಲ್ಲುವುದು ಯಾರು? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಿದೆ.

‘ಸಲಾರ್’ ಸಿನಿಮಾ ಪ್ರಾರಂಭವಾದಾಗಿನಿಂದಲೂ ಇದು, ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಉಗ್ರಂ’ ಸಿನಿಮಾವನ್ನು ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡಿದ್ದಾರೆ. ಅದರಲ್ಲಿಯೂ ಸಹ ನಾಯಕ ಶ್ರೀಮುರಳಿ ಹಾಗೂ ತಿಲಕ್ ಗೆಳೆಯರಾಗಿರುತ್ತಾರೆ. ಆದರೆ ನಂತರ ಬದ್ಧ ವೈರಿಗಳಾಗುತ್ತಾರೆ. ಈಗ ಪ್ರಶಾಂತ್ ನೀಲ್ ಹೇಳಿರುವಂತೆ ‘ಸಲಾರ್’ ಸಿನಿಮಾದಲ್ಲಿಯೂ ಗೆಳೆಯರು ವೈರಿಗಳಾಗವ ಕತೆ ಇದೆಯಂತೆ. ಪ್ರಶಾಂತ್ ನೀಲ್ ‘ಸಲಾರ್’ನ ಒನ್​ಲೈನರ್ ಹೇಳಿದ ಬಳಿಕ ಈ ಸಿನಿಮಾ ‘ಉಗ್ರಂ’ನ ರೀಮೇಕ್ ಇರಬೇಕೆನ್ನುವ ಅನುಮಾನ ಇನ್ನಷ್ಟು ಬಲವಾಗಿದೆ.

ಇದನ್ನೂ ಓದಿ:ಟ್ರೇಲರ್​ ಬಿಡುಗಡೆಗೂ ಮೊದಲೇ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ನಲ್ಲಿ ‘ಸಲಾರ್​’ ಅಬ್ಬರ ಶುರು

ಆದರೆ ‘ಉಗ್ರಂ’ ಸಿನಿಮಾ ಒಂದೇ ಭಾಗದಲ್ಲಿ ಮುಗಿದು ಹೋಗಿತ್ತು ಆದರೆ ‘ಸಲಾರ್’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಸಲಾರ್’ ಸಿನಿಮಾ ‘ಉಗ್ರಂ’ನ ರೀಮೇಕ್ ಹೌದೇ ಅಲ್ಲವೆ ಎಂಬ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇಲ್ಲ. ಆದರೆ ‘ಸಲಾರ್’ ಸಿನಿಮಾ ಚಿತ್ರೀಕರಣದ ಹಂತದಲ್ಲಿದ್ದಾಗಲೇ ಯೂಟ್ಯೂಬ್ ಸೇರಿದಂತೆ ವಿವಿಧ ಫ್ಲ್ಯಾಟ್​ಫಾರ್ಮ್​ನಲ್ಲಿದ್ದ ‘ಉಗ್ರಂ’ ಸಿನಿಮಾವನ್ನು ತೆಗೆದು ಹಾಕಲಾಗಿದೆ. ಇದು ಸಹ ‘ಸಲಾರ್’, ‘ಉಗ್ರಂ’ನ ರೀಮೇಕ್ ಇರಬಹುದೆಂಬ ಅನುಮಾನವನ್ನು ಇನ್ನಷ್ಟು ಬಲಗೊಳಿಸಿದೆ.

‘ಸಲಾರ್’ ಸಿನಿಮಾನಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರ್ ಜೊತೆಗೆ ಜಗಪತಿ ಬಾಬು, ಕನ್ನಡಿಗ ಮಧು ಗುರು ಸ್ವಾಮಿ, ರಾಮಕೃಷ್ಣ, ಪಂಜು ಬಾಲಿವುಡ್ ನಟ ಟೀನು ಆನಂದ್ ಇನ್ನೂ ಹಲವರು ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಅವರುಗಳು ನಟಿಸಿದ್ದಾರೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾವು ಡಿಸೆಂಬರ್ 22 ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ