3 ಗಂಟೆ ಮೀರಿತು ‘ಸಲಾರ್’ ಸಿನಿಮಾ ಅವಧಿ; ಪ್ರಶಾಂತ್ ನೀಲ್ಗೆ ನಿಗದಿ ಆಗಿದೆ ಟಾರ್ಗೆಟ್
ಸಿನಿಮಾ ಯಶಸ್ಸಿನ ಹಿಂದೆ ಸಿನಿಮಾದ ಅವಧಿಯೂ ಮುಖ್ಯವಾಗುತ್ತದೆ. ಚಿತ್ರದ ಅವಧಿ 2.30-2.50 ಗಂಟೆ ಇದ್ದರೆ ಜನರು ಇಷ್ಟಪಡುತ್ತಾರೆ. ಆದರೆ, ಸಿನಿಮಾದ ಅವಧಿ ಮೂರು ಗಂಟೆ ಮೀರಿದರೆ ಕೆಲವರಿಗೆ ಅದನ್ನು ಸಹಿಸಿಕೊಳ್ಳೋಕೆ ಆಗುವುದಿಲ್ಲ. ಈಗ ಪ್ರಶಾಂತ್ ನೀಲ್ಗೂ ‘ಸಲಾರ್’ ಸಿನಿಮಾದ ಬಗ್ಗೆ ಚಿಂತೆ ಶುರುವಾಗಿದೆ.
ಪ್ರಶಾಂತ್ ನೀಲ್ (Prashanth Neel) ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಕೆಜಿಎಫ್ 2’ ಚಿತ್ರದಲ್ಲಿ ಅವರು ತಮ್ಮ ಕಸುಬುದಾರಿಕೆಯನ್ನು ತೋರಿಸಿಕೊಟ್ಟಿದ್ದಾರೆ. ಅವರ ನಿರ್ದೇಶನದ ‘ಸಲಾರ್’ ಸಿನಿಮಾ (Salaar Movie) ರಿಲೀಸ್ಗೆ ರೆಡಿ ಇದೆ. ಸೆಪ್ಟೆಂಬರ್ 28ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ತೆಲುಗು ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳಲ್ಲೂ ಚಿತ್ರವನ್ನು ಡಬ್ ಮಾಡಲಾಗುತ್ತಿದೆ. ಈಗ ಸಿನಿಮಾದ ಅವಧಿ ಕುರಿತು ಹೊಸ ಸುದ್ದಿ ಒಂದು ಹರಿದಾಡಿದೆ. ಈ ಚಿತ್ರದ ಅವಧಿ ಮೂರು ಗಂಟೆ ಹದಿನೈದು ನಿಮಿಷ ಇದೆ ಎನ್ನಲಾಗಿದೆ. ಇದಕ್ಕೆ ಕತ್ತರಿ ಹಾಕೋದು ಪ್ರಶಾಂತ್ನೀಲ್ಗೆ ಸವಾಲಾಗಿ ಪರಿಣಮಿಸಿದೆ.
ಸಿನಿಮಾ ಯಶಸ್ಸಿನ ಹಿಂದೆ ಸಿನಿಮಾದ ಅವಧಿಯೂ ಮುಖ್ಯವಾಗುತ್ತದೆ. ಚಿತ್ರದ ಅವಧಿ 2.30-2.50 ಗಂಟೆ ಇದ್ದರೆ ಜನರು ಇಷ್ಟಪಡುತ್ತಾರೆ. ಆದರೆ, ಸಿನಿಮಾದ ಅವಧಿ ಮೂರು ಗಂಟೆ ಮೀರಿದರೆ ಕೆಲವರಿಗೆ ಅದನ್ನು ಸಹಿಸಿಕೊಳ್ಳೋಕೆ ಆಗುವುದಿಲ್ಲ. ಸಿನಿಮಾ ತುಂಬಾನೇ ದೀರ್ಘ ಎನಿಸಿಬಿಡುತ್ತದೆ. ಈಗ ಪ್ರಶಾಂತ್ ನೀಲ್ಗೂ ‘ಸಲಾರ್’ ಸಿನಿಮಾದ ಬಗ್ಗೆ ಚಿಂತೆ ಶುರುವಾಗಿದೆ.
ಸದ್ಯ ‘ಸಲಾರ್’ ಸಿನಿಮಾದ ಒಂದು ಕಾಪಿ ಸಿದ್ಧವಾಗಿದೆ. ಚಿತ್ರದ ಅವಧಿ 3.15 ಗಂಟೆ ಇದೆಯಂತೆ. ಇದನ್ನು ಎರಡು ಗಂಟೆ ಐವತ್ತು ನಿಮಿಷಕ್ಕೆ ಇಳಿಸಬೇಕು ಎಂಬುದು ಪ್ರಶಾಂತ್ ನೀಲ್ ಟಾರ್ಗೆಟ್. ಹಲವು ಎಡಿಟ್ಗಳ ಬಳಿಕವೂ ಸಿನಿಮಾದ ಅವಧಿಯನ್ನು 2.50 ಗಂಟೆಗೆ ತರೋಕೆ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.
ಇತ್ತೀಚೆಗೆ ‘ಸಲಾರ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಯಿತು. ಆದರೆ, ಅದರಲ್ಲಿ ಹೆಚ್ಚಿನ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿತ್ತು. ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ‘ಸಲಾರ್’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲ.
ಇದನ್ನೂ ಓದಿ: ‘ಸಲಾರ್ 2’ ಚಿತ್ರಕ್ಕೂ ಮೊದಲೇ ಬರಲಿದೆ ‘ಕೆಜಿಎಫ್ 3; ಜೂನಿಯರ್ ಎನ್ಟಿಆರ್ ಸಿನಿಮಾ ಮತ್ತಷ್ಟು ವಿಳಂಬ?
‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟಿಸಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ, ಕಾರ್ತಿಕ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ