‘ಸಲಾರ್ 2’ ಚಿತ್ರಕ್ಕೂ ಮೊದಲೇ ಬರಲಿದೆ ‘ಕೆಜಿಎಫ್ 3; ಜೂನಿಯರ್ ಎನ್ಟಿಆರ್ ಸಿನಿಮಾ ಮತ್ತಷ್ಟು ವಿಳಂಬ?
ಪ್ರಶಾಂತ್ ನೀಲ್ ಅವರಿಗೆ ‘ಕೆಜಿಎಫ್ 2’ ಚಿತ್ರದ ಬಗ್ಗೆ ವಿಶೇಷ ಪ್ರೀತಿ ಇದೆ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಲು ಈ ಸಿನಿಮಾ ಕಾರಣ. ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ ಎಂಬುದು ‘ಕೆಜಿಎಫ್ 2’ ಕ್ಲೈಮ್ಯಾಕ್ಸ್ನಲ್ಲಿ ರಿವೀಲ್ ಆಗಿತ್ತು. ಈಗ ಈ ಕುರಿತು ಹೊಸ ಸುದ್ದಿ ಹರಿದಾಡಿದೆ.
ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಮುಂದೆ ಹಲವು ಸಿನಿಮಾಗಳಿವೆ. ಸದ್ಯ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಮಧ್ಯೆ ‘ಕೆಜಿಎಫ್ 3’ (KGF 3 Movie) ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಸಲಾರ್ 2’ ಸಿನಿಮಾ ಕೆಲಸಗಳಿಗೂ ಮೊದಲೇ ‘ಕೆಜಿಎಫ್ 3’ ಚಿತ್ರದ ಕೆಲಸ ಆರಂಭ ಆಗಲಿದೆ ಎಂದು ವರದಿ ಆಗಿದೆ.
ಪ್ರಶಾಂತ್ ನೀಲ್ ಅವರಿಗೆ ‘ಕೆಜಿಎಫ್ 2’ ಚಿತ್ರದ ಬಗ್ಗೆ ವಿಶೇಷ ಪ್ರೀತಿ ಇದೆ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಲು ಈ ಸಿನಿಮಾ ಕಾರಣ. ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ ಎಂಬುದು ‘ಕೆಜಿಎಫ್ 2’ ಕ್ಲೈಮ್ಯಾಕ್ಸ್ನಲ್ಲಿ ರಿವೀಲ್ ಆಗಿತ್ತು. ಈಗ ಈ ಕುರಿತು ಹೊಸ ಸುದ್ದಿ ಹರಿದಾಡಿದೆ. ಈ ವಿಚಾರದ ಬಗ್ಗೆ ಅವರ ಕಡೆಯಿಂದಲೇ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಸಲಾರ್’ ಮೊದಲ ಗ್ಲಿಂಪ್ಸ್ನ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ‘ಸಲಾರ್: ಪಾರ್ಟ್ 1-ಸೀಸ್ಫೈರ್’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. ಈ ಮೂಲಕ ಎರಡು ಪಾರ್ಟ್ಗಳಲ್ಲಿ ಸಿನಿಮಾ ಮೂಡಿಬರಲಿದೆ ಎಂಬುದನ್ನು ತಂಡ ಖಚಿತಪಡಿಸಿದೆ. ಈಗ ಕೇಳಿ ಬರುತ್ತಿವೆ ಲೇಟೆಸ್ಟ್ ಮಾಹಿತಿ ಎಂದರೆ , ‘ಕೆಜಿಎಫ್ 3’ ಬಳಿಕವೇ ‘ಸಲಾರ್ 2’ ಸಿನಿಮಾ ಕೆಲಸಗಳು ಆರಂಭ ಆಗಲಿವೆಯಂತೆ.
‘ಕೆಜಿಎಫ್ 2’ ಚಿತ್ರದ ಕಥೆಗೂ ‘ಕೆಜಿಎಫ್ 3’ ಕಥೆಗೂ ಲಿಂಕ್ ಇದೆ. ಹೆಚ್ಚು ವಿಳಂಬ ಮಾಡಿದರೆ ಜನರಿಗೆ ಈ ಸರಣಿ ಮೇಲೆ ಆಸಕ್ತಿ ಹೊರಟು ಹೋಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯವರು ‘ಕೆಜಿಎಫ್ 3’ ಕಡೆ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: KGF 2: ಇತಿಹಾಸ ಸೃಷ್ಟಿಸಿದ ಕೆಜಿಎಫ್ 2 ಸಿನಿಮಾಕ್ಕೆ ಒಂದು ವರ್ಷ, ಕಲೆಕ್ಷನ್ ಮಾತ್ರ ದಾಖಲೆಯಲ್ಲ
ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್ಟಿಆರ್ ಜೊತೆಗೂ ಒಂದು ಸಿನಿಮಾ ಮಾಡಬೇಕಿದೆ. ಇದು ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಆದರೆ, ಜೂನಿಯರ್ ಎನ್ಟಿಆರ್ ಅವರ ಕಾಲ್ಶೀಟ್ ಸದ್ಯಕ್ಕಂತೂ ಸಿಗುವ ಚಾನ್ಸ್ ಕಡಿಮೆ. ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ‘ಸಲಾರ್’ ರಿಲೀಸ್ ಆದ ಬಳಿಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 3’ ಚಿತ್ರದ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರಂತೆ.
ಸಲಾರ್ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಈ ಮೊದಲೇ ಹೇಳಿದಂತೆ ‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್’ ಚಿತ್ರಕ್ಕೂ ಲಿಂಕ್ ಇದೆ ಎಂದು ಮೊದಲ ಗ್ಲಿಂಪ್ಸ್ ನೋಡಿದವರಿಗೆ ಅನುಮಾನ ಮೂಡಿದೆ. ಟ್ರೇಲರ್ ಅಥವಾ ಟೀಸರ್ ರಿಲೀಸ್ ಆದರೆ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 am, Tue, 15 August 23