ಟಿ-ಸೀರಿಸ್​ ಪಾಲಾಯ್ತು ‘ರಾನಿ’ ಆಡಿಯೋ ಹಕ್ಕು; ಕಿರಣ್​ ರಾಜ್​ ನಟನೆಯ ಚಿತ್ರದ ಬಗ್ಗೆ ಇಲ್ಲಿದೆ ಅಪ್​ಡೇಟ್​

ಗುರುತೇಜ್ ಶೆಟ್ಟಿ ಅವರು ‘ರಾನಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ 85 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಒಂದು ಹಾಡಿನ ಶೂಟಿಂಗ್​ ಬಾಕಿ ಇದೆ. ಇದು ಮಾಸ್​ ಸಿನಿಮಾ ಆಗಿದ್ದರೂ ಕೂಡ ಕಿರಣ್ ರಾಜ್ ಅವರನ್ನು ಇಷ್ಟಪಡುವ ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಬರೆದಿರುವುದಾಗಿ ಹೇಳಿದ್ದಾರೆ ನಿರ್ದೇಶಕರು.

ಟಿ-ಸೀರಿಸ್​ ಪಾಲಾಯ್ತು ‘ರಾನಿ’ ಆಡಿಯೋ ಹಕ್ಕು; ಕಿರಣ್​ ರಾಜ್​ ನಟನೆಯ ಚಿತ್ರದ ಬಗ್ಗೆ ಇಲ್ಲಿದೆ ಅಪ್​ಡೇಟ್​
‘ರಾನಿ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Aug 15, 2023 | 1:55 PM

ಕಿರುತೆರೆ ಮೂಲಕ ಭಾರಿ ಜನಪ್ರಿಯತೆ ಪಡೆದ ನಟ ಕಿರಣ್​ ರಾಜ್​ (Kiran Raj) ಅವರು ಈಗ ಪೂರ್ಣಪ್ರಮಾಣದಲ್ಲಿ ಹಿರಿತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ನಟಿಸುತ್ತಿರುವ ‘ರಾನಿ’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಈ ಮೊದಲು ಬಿಡುಗಡೆ ಆದ ‘ರಾನಿ’ (Ronny Kannada Movie) ಚಿತ್ರದ ಟೀಸರ್​ ಸಖತ್​ ಸದ್ದು ಮಾಡಿತ್ತು. ಮಾಸ್​ ಅವತಾರದಲ್ಲಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದರು. ಈಗ ಈ ಚಿತ್ರತಂಡದಿಂದ ಇನ್ನೊಂದು ಅಪ್​ಡೇಟ್​ ಸಿಕ್ಕಿದೆ. ಈ ಸಿನಿಮಾದ ಹಾಡುಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಪ್ರತಿಷ್ಠಿತ ಟಿ-ಸೀರಿಸ್​ (T-Series) ಕಂಪನಿಯು ‘ರಾನಿ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಹಾಡುಗಳ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ.

ಮಣಿಕಾಂತ್ ಕದ್ರಿ ಅವರು ‘ರಾನಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳು ಇವೆ. ಅವುಗಳಿಗೆ ‘ಕಾಂತಾರ’ ಸಿನಿಮಾ ಖ್ಯಾತಿಯ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಜನಪ್ರಿಯ ಗಾಯಕ ಕುನಾಲ್ ಗಾಂಜಾವಾಲ ಜೊತೆ ಹಂಸಿಕಾ ಐಯ್ಯರ್, ಶ್ವೇತಾ ಮೋಹನ್ ಅವರಂತಹ ಪ್ರತಿಭಾವಂತ ಗಾಯಕರು ಈ ಸಿನಿಮಾದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ರಾನಿ’ ಹಾಡುಗಳ ಬಗ್ಗೆ ನಿರೀಕ್ಷೆ ಮೂಡುವಂತಾಗಿದೆ.

ಇದನ್ನೂ ಓದಿ: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ

ಗುರುತೇಜ್ ಶೆಟ್ಟಿ ಅವರು ‘ರಾನಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ 85 ದಿನಗಳ ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಒಂದು ಹಾಡಿನ ಶೂಟಿಂಗ್​ ಬಾಕಿ ಇದೆ. ಇದು ಮಾಸ್​ ಸಿನಿಮಾ ಆಗಿದ್ದರೂ ಕೂಡ ಕಿರಣ್ ರಾಜ್ ಅವರನ್ನು ಇಷ್ಟಪಡುವ ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಬರೆದಿರುವುದಾಗಿ ಹೇಳಿದ್ದಾರೆ ನಿರ್ದೇಶಕರು.

ಇದನ್ನೂ ಓದಿ:  ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ಈಗ ‘ಶೇರ್​’; ಸೆಟ್ಟೇರಿತು ಹೊಸ ಸಿನಿಮಾ

ಈ ಸಿನಿಮಾದಲ್ಲಿ ಮೂವರು ನಾಯಕಿಯರು ಇದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ರವಿಶಂಕರ್, ಉಗ್ರಂ ರವಿ, ಉಗ್ರಂ ಮಂಜು, ಗಿರೀಶ್ ಹೆಗಡೆ, ಮೈಕೋ ನಾಗರಾಜ್, ಬಿ. ಸುರೇಶ, ಲಕ್ಷ್ಮೀ ಸಿದ್ದಯ್ಯ, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಅನಿಲ್ ಯಾದವ್, ಶ್ರೀಧರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ರಾಘವೇಂದ್ರ ಬೇಡ ಕೋಲಾರ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಉಮೇಶ್ ಅವರು ಸಂಕಲನ ಮಾಡುತ್ತಿದ್ದಾರೆ. ಸತೀಶ್ ಅವರ ಕಲಾ ನಿರ್ದೇಶನ, ಧನಂಜಯ್ ಅವರ ಕೊರಿಯೋಗ್ರಫಿ, ವಿನೋದ್ ಅವರ ಸಾಹಸ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಡಿಸೆಂಬರ್ ವೇಳೆಗೆ ‘ರಾನಿ’ ರಿಲೀಸ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗೆ ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ನೆರವಿನ ಹಸ್ತದಿಂದ ಬಂತು ಹೊಸ ಮೆರುಗು

‘ಸ್ಟಾರ್ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ‘ರಾನಿ’ ಸಿನಿಮಾ ತಯಾರಾಗುತ್ತಿದೆ. ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಾಯಕ ನಟ ಕಿರಣ್ ರಾಜ್ ಅವರು ತುಂಬ ಕಾಳಜಿ ವಹಿಸಿ ಈ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ದಿನದಿಂದಲೂ ಅವರು ಸಖತ್​ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ರಾನಿ’ ಹಾಡುಗಳು ಟಿ-ಸೀರಿಸ್​ ಪಾಲಾಗಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ