‘ಸಲಾರ್’ ಟೀಸರ್ನಿಂದ ‘ಕೆಜಿಎಫ್ 2’ ಚಿತ್ರಕ್ಕೆ ಲಿಂಕ್ ಕೊಟ್ಟ ಪ್ರಶಾಂತ್ ನೀಲ್; ಇವುಗಳನ್ನು ಗಮನಿಸಿದ್ರಾ?
Salaar Movie Teaser: ‘ಕೆಜಿಎಫ್ 2’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ರಾಕಿ ಸಮುದ್ರಕ್ಕೆ ಬೀಳುತ್ತಾನೆ. ಆಗ ಸಮಯ ಮುಂಜಾನೆ 5 ಗಂಟೆ. ಈ ಕಾರಣದಿಂದಲೇ ‘ಸಲಾರ್’ ಟೀಸರ್ ಆ ಸಮಯಕ್ಕೆ ರಿಲೀಸ್ ಆಗುತ್ತಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರು.
‘ಸಲಾರ್’ ಸಿನಿಮಾ (Salaar Movie) ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದು ಪ್ರಶಾಂತ್ ನೀಲ್ ಯೂನಿವರ್ಸ್ ಎಂದು ಎಲ್ಲರೂ ಕರೆದಿದ್ದಾರೆ. ‘ಕೆಜಿಎಫ್ 2’ (KGF Chapter 2) ಚಿತ್ರಕ್ಕೂ ‘ಸಲಾರ್’ ಚಿತ್ರಕ್ಕೂ ಲಿಂಕ್ ಇದೆ ಅನ್ನೋದು ಬಹಳ ಹಿಂದಿನಿಂದ ಮೂಡಿಬರುತ್ತಿರುವ ಚರ್ಚೆ. ಈಗ ‘ಸಲಾರ್’ ಸಿನಿಮಾ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಟೀಸರ್ನಲ್ಲಿ ಲಿಂಕ್ ನೀಡಲಾಗಿದೆ. ಇದನ್ನು ಗಮನಿಸಿದ ಅನೇಕರು ಥ್ರಿಲ್ ಆಗಿದ್ದಾರೆ. ಎರಡೂ ಚಿತ್ರಗಳ ಮಧ್ಯೆ ಯಾವ ರೀತಿಯಲ್ಲಿ ಕನೆಕ್ಷನ್ ಇರಲಿದೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.
ಸಮಾನ್ಯವಾಗಿ ದೊಡ್ಡ ಬಜೆಟ್ ಚಿತ್ರದ ಟೀಸರ್ಗಳನ್ನು ಸಂಜೆ ವೇಳೆಗೆ ರಿಲೀಸ್ ಮಾಡಲಾಗುತ್ತದೆ. ಇದರಿಂದ ಯೂಟ್ಯೂಬ್ನಲ್ಲಿ ವೀಕ್ಷಣೆ ಹೆಚ್ಚಾಗುತ್ತದೆ. ಆದರೆ, ‘ಸಲಾರ್’ ಟೀಂನವರು ಮುಂಜಾನೆ 5:12ಕ್ಕೆ ಟೀಸರ್ ಅನಾವರಣ ಮಾಡಿದ್ದರು. ಇದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ‘ಕೆಜಿಎಫ್ 2’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ರಾಕಿ ಸಮುದ್ರಕ್ಕೆ ಬೀಳುತ್ತಾನೆ. ಆಗ ಸಮಯ ಮುಂಜಾನೆ 5 ಗಂಟೆ. ಈ ಕಾರಣದಿಂದಲೇ ‘ಸಲಾರ್’ ಟೀಸರ್ ಆ ಸಮಯಕ್ಕೆ ರಿಲೀಸ್ ಆಗುತ್ತಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರು. ಆದರೆ, ಆ ರೀತಿಯ ಯಾವುದೇ ಕನೆಕ್ಷನ್ ಕಂಡಿಲ್ಲ. ಆದರೆ, ‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್’ಗೂ ಲಿಂಕ್ ಇರುವ ವಿಚಾರ ಗೊತ್ತಾಗಿದೆ.
KGF CHAPTER 2 Post Credit Scene x #SalaarTeaser Scene.#Yash x #Prabhas. pic.twitter.com/e6unAHbjtb
— Manobala Vijayabalan (@ManobalaV) July 6, 2023
ಇದನ್ನೂ ಓದಿ: Salaar Teaser: ‘ಕೆಜಿಎಫ್ 2’ ಚಿತ್ರವನ್ನು ನೆನಪಿಸಿದ ‘ಸಲಾರ್’ ಟೀಸರ್; ಸಾಮ್ಯತೆಗಳೇನು?
‘ಕೆಜಿಎಫ್ 2’ ಸಿನಿಮಾದಲ್ಲಿ ಒಂದಷ್ಟು ಟ್ಯಾಂಕರ್ಗಳು ಕಂಡಿದ್ದವು. ಆ ಪೈಕಿ ಒಂದು ಟ್ಯಾಂಕರ್ ಹೆಸರು ‘ಸಿ-516’. ‘ಸಲಾರ್’ ಸಿನಿಮಾದಲ್ಲೂ ಅದೇ ನಂಬರ್ನ ಟ್ಯಾಂಕರ್ ಕಾಣಿಸಿದೆ. ಹೀಗಾಗಿ, ‘ಕೆಜಿಎಫ್ 2’ ಚಿತ್ರದ ಮುಂದುವರಿದ ಭಾಗದ ರೀತಿಯಲ್ಲಿ ‘ಸಲಾರ್’ ಸಿನಿಮಾ ಮೂಡಿಬರಲಿದೆ ಎಂದು ಅನೇಕರು ಭಾವಿಸಿದ್ದಾರೆ.
‘ಕೆಜಿಎಫ್ 2’ ಚಿತ್ರ ನಿರ್ದೇಶನ ಮಾಡಿದ್ದ ಪ್ರಶಾಂತ್ ನೀಲ್ ಅವರು ‘ಸಲಾರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರ ನಿರ್ಮಿಸುತ್ತಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ