Salaar Teaser: ‘ಕೆಜಿಎಫ್ 2’ ಚಿತ್ರವನ್ನು ನೆನಪಿಸಿದ ‘ಸಲಾರ್’ ಟೀಸರ್; ಸಾಮ್ಯತೆಗಳೇನು?
ಪ್ರಶಾಂತ್ ನೀಲ್ ನಿರ್ದೇಶನ, ರವಿ ಬಸ್ರೂರ್ ಸಂಗೀತ ನಿರ್ದೇಶನ, ಭುವನ್ ಗೌಡ ಛಾಯಾಗ್ರಹಣ ‘ಸಲಾರ್’ನಲ್ಲೂ ಮುಂದುವರಿದಿದೆ. ಈ ಕಾರಣಕ್ಕೆ ಹಲವು ಸಾಮ್ಯತೆಗಳು ಕಾಣುತ್ತಿವೆ.
‘ಕೆಜಿಎಫ್ 2’ ಸಿನಿಮಾ ಧೂಳೆಬ್ಬಿಸಿತ್ತು. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಬಹುತೇಕ ಅದೇ ತಾಂತ್ರಿಕವರ್ಗದೊಂದಿಗೆ ‘ಸಲಾರ್’ ಸಿನಿಮಾ (Salaar Movie) ಸಿದ್ಧವಾಗುತ್ತಿದೆ. ‘ಕೆಜಿಎಫ್ 2’ ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ಚಿತ್ರಕ್ಕೂ ಬಂಡವಾಳ ಹೂಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ರವಿ ಬಸ್ರೂರ್ ಸಂಗೀತ ನಿರ್ದೇಶನ, ಭುವನ್ ಗೌಡ ಛಾಯಾಗ್ರಹಣ ಇಲ್ಲಿಯೂ ಮುಂದುವರಿದಿದೆ. ಈ ಕಾರಣಕ್ಕೆ ಹಲವು ಸಾಮ್ಯತೆಗಳು ಕಾಣುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.
THE MOST VIOLENT MEN… CALLED ONE MAN… THE MOST VIOLENT ?
Presenting our next feature #SalaarCeaseFire to the world: https://t.co/KAGJyVxqga#SalaarTeaser #Salaar #Prabhas #PrashanthNeel @PrithviOfficial @shrutihaasan @hombalefilms #VijayKiragandur @IamJagguBhai… pic.twitter.com/LAhI8CmOx0
— Hombale Films (@hombalefilms) July 5, 2023
- ‘ಕೆಜಿಎಫ್ 2’ ಚಿತ್ರದ ಸೆಟ್ಗಳು ಈಗಲೂ ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತಿದೆ. ‘ಸಲಾರ್’ ಟೀಸರ್ ನೋಡಿದ ಅನೇಕರಿಗೆ ಯಶ್ ಸಿನಿಮಾದ ಸೆಟ್ಗಳು ನೆನಪಿಗೆ ಬಂದಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಹುಟ್ಟಿದೆ.
- ಟೀನೂ ಆನಂದ್ ಅವರ ನಿರೂಪಣೆಯಲ್ಲಿ ‘ಸಲಾರ್’ ಟೀಸರ್ ಮೂಡಿ ಬಂದಿದೆ. ಇಂಗ್ಲಿಷ್ ವಿವರಣೆಯಲ್ಲಿ ಟೀಸರ್ ಮೂಡಿಬಂದಿದೆ. ‘ಕೆಜಿಎಫ್’ ಚಿತ್ರದಲ್ಲಿ ಅನಂತ್ ನಾಗ್ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ಪ್ರಕಾಶ್ ರಾಜ್ ವಿವರಣೆ ಇತ್ತು.
- ‘ಸಲಾರ್’ ಸಿನಿಮಾ ಕೂಡ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ. ‘ಕೆಜಿಎಫ್’ ಸಿನಿಮಾ ಕೂಡ ಇದೇ ಶೈಲಿಯಲ್ಲಿ ಸಿದ್ಧಗೊಂಡಿತ್ತು.
- ‘ಕೆಜಿಎಫ್ 2’ ಗಣಿಯ ಸೆಟ್ ಒಂದು ಬರುತ್ತವೆ. ಚಿತ್ರದುದ್ದಕ್ಕೂ ಇದೇ ಹೈಲೈಟ್ ಆಗಿತ್ತು. ಇದೇ ಮಾದರಿಯ ಸೆಟ್ ‘ಸಲಾರ್’ ಚಿತ್ರದಲ್ಲೂ ಇದೆ. ಇವೆರಡರ ಮಧ್ಯೆ ಹೋಲಿಕೆ ಇದೆ.
- ಮೇಕಿಂಗ್ ವಿಚಾರದಲ್ಲೂ ಪ್ರಶಾಂತ್ ನೀಲ್ ‘ಕೆಜಿಎಫ್ 2’ ತಂತ್ರವನ್ನೇ ಬಳಸಿದಂತಿದೆ. ಹೀಗಾಗಿ, ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.
- ‘ಕೆಜಿಎಫ್’ ಎರಡು ಪಾರ್ಟ್ಗಳಲ್ಲಿ ಮೂಡಿ ಬಂದಿತ್ತು. ಮೂರನೇ ಪಾರ್ಟ್ ಬರೋಕೆ ಸಿದ್ಧವಾಗಿದೆ. ‘ಸಲಾರ್’ ಚಿತ್ರ ಕೂಡ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ಮೊದಲ ಪಾರ್ಟ್ಗೆ ‘ಸಲಾರ್: ಸೀಸ್ಫೈರ್’ ಎಂದು ಶೀರ್ಷಿಕೆ ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Thu, 6 July 23