‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ಗೂ, ‘ಸಲಾರ್’ ಟೀಸರ್ ರಿಲೀಸ್​ ಸಮಯಕ್ಕೂ ಇದೆ ಕನೆಕ್ಷನ್​; ಇದು ಊಹೆಗೂ ಮೀರಿದ್ದು

Salaar Teaser: ‘ಸಲಾರ್’ ಟೀಸರ್ ರಿಲೀಸ್ ಸಮಯ ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು. ಏಕೆಂದರೆ ಈ ಟೀಸರ್ ರಿಲೀಸ್ ಆಗುತ್ತಿರುವುದು ಜುಲೈ 6ರ ಮುಂಜಾನೆ 5:12ಕ್ಕೆ.

‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ಗೂ, ‘ಸಲಾರ್’ ಟೀಸರ್ ರಿಲೀಸ್​ ಸಮಯಕ್ಕೂ ಇದೆ ಕನೆಕ್ಷನ್​; ಇದು ಊಹೆಗೂ ಮೀರಿದ್ದು
ಕೆಜಿಎಫ್ 2-ಸಲಾರ್
Follow us
ರಾಜೇಶ್ ದುಗ್ಗುಮನೆ
|

Updated on:Jul 04, 2023 | 7:08 AM

ಸಿನಿಮಾ ನಿರ್ದೇಶನದ ವಿಚಾರದಲ್ಲಿ ಪ್ರಶಾಂತ್ ನೀಲ್ (Prashanth Neel) ಅವರ ಬುದ್ಧಿವಂತಿಕೆಯನ್ನು ಎಲ್ಲರೂ ಮೆಚ್ಚಲೇಬೇಕು. ಅವರು ಸಿನಿಮಾ ಕಟ್ಟಿಕೊಡುವ ರೀತಿಗೆ ಈಗಾಗಲೇ ಎಲ್ಲರೂ ಫಿದಾ ಆಗಿದ್ದಾರೆ. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ (KGF Chapter 2) ಚಿತ್ರಗಳಲ್ಲಿ ಅವರ ಕಸುಬುದಾರಿಕೆ ಸಾಬೀತಾಗಿದೆ. ಈಗ ಅವರ ನಿರ್ದೇಶನದಲ್ಲಿ ‘ಸಲಾರ್’ ಚಿತ್ರ ಮೂಡಿಬರುತ್ತಿದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್​ ಸುಕುಮಾರನ್ ಸೇರಿ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ದಿನಾಂಕ ಇತ್ತೀಚೆಗೆ ಘೋಷಣೆ ಆಗಿತ್ತು. ಈಗ ಟೀಸರ್ ರಿಲೀಸ್​ ಸಮಯಕ್ಕೂ, ‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ಗೂ ಲಿಂಕ್ ಕೊಡುವ ಕೆಲಸ ಆಗುತ್ತಿದೆ.

ಹೈಪ್ ಇರುವ ಸಿನಿಮಾಗಳ ಟೀಸರ್​ನ ಸಾಮಾನ್ಯವಾಗಿ ಸಂಜೆ ವೇಳೆಗೆ ರಿಲೀಸ್ ಮಾಡಲಾಗುತ್ತದೆ. ಆದರೆ, ‘ಸಲಾರ್’ ಟೀಸರ್ ರಿಲೀಸ್ ಸಮಯ ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು. ಏಕೆಂದರೆ ಈ ಟೀಸರ್ ರಿಲೀಸ್ ಆಗುತ್ತಿರುವುದು ಜುಲೈ 6ರ ಮುಂಜಾನೆ 5:12ಕ್ಕೆ. ಆದರೆ, ಈ ರೀತಿ ಟೀಸರ್ ರಿಲೀಸ್ ಮಾಡುವುದಕ್ಕೂ ಒಂದು ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

‘ಕೆಜಿಎಫ್ 2’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಫೋಟೋ ವೈರಲ್ ಆಗಿದೆ. ರಾಕಿ ಮೇಲೆ ದಾಳಿ ನಡೆದಿದ್ದು, ಅವನು ನೀರಿನ ಅಡಿಯಲ್ಲಿ ಹೋಗೋದು ಮುಂಜಾನೆ ಐದು ಗಂಟೆ ಸುಮಾರಿಗೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬರುವ ಗಡಿಯಾರದಲ್ಲಿ ಐದು ಗಂಟೆ, ಐದು ನಿಮಿಷ ಆಗಿರುತ್ತದೆ. ರಾಕಿ ನೀರಿಗೆ ಬೀಳೋದು 5:12 ನಿಮಿಷಕ್ಕೆ ಎನ್ನಲಾಗಿದೆ. ಇದೇ ವೇಳೆ ‘ಸಲಾರ್’ ಸಿನಿಮಾ ಕಥೆ ಆರಂಭ ಆಗುತ್ತದೆ ಎನ್ನುವ ಊಹೆಗಳು ಹರಿದಾಡಿದೆ. ಇದೇ ಕಾರಣಕ್ಕೆ ‘ಸಲಾರ್’ ಟೀಸರ್ ಮುಂಜಾನೆ 5:12ಕ್ಕೆ ಬಿಡುಗಡೆ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ: Salaar Teaser: ಏಕಾಏಕಿ ಟೀಸರ್​ ರಿಲೀಸ್​ ದಿನಾಂಕ ಘೋಷಿಸಿದ ‘ಸಲಾರ್​’ ತಂಡ; ಜುಲೈ 6ಕ್ಕೆ ಸಿಗಲಿದೆ ಸರ್ಪ್ರೈಸ್​

ಈ ಥಿಯರಿಯನ್ನು ಅನೇಕರು ಒಪ್ಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಜುಲೈ 6ರ ಮುಂಜಾನೆಯೇ ಉತ್ತರ ಸಿಗಬೇಕಿದೆ. ‘ಸಲಾರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಇಲ್ಲಿಯವರೆಗೆ ಕೇವಲ ಸಿನಿಮಾದ ಪೋಸ್ಟರ್​ಗಳನ್ನು ಮಾತ್ರ ರಿಲೀಸ್ ಮಾಡಲಾಗಿತ್ತು. ಈಗ ಟೀಸರ್ ಮೂಲಕ ಗಮನ ಸೆಳೆಯಲು ತಂಡ ರೆಡಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:05 am, Tue, 4 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ