Salaar Teaser: ಏಕಾಏಕಿ ಟೀಸರ್​ ರಿಲೀಸ್​ ದಿನಾಂಕ ಘೋಷಿಸಿದ ‘ಸಲಾರ್​’ ತಂಡ; ಜುಲೈ 6ಕ್ಕೆ ಸಿಗಲಿದೆ ಸರ್ಪ್ರೈಸ್​

Salaar Movie Teaser: ಹೊಸ ಪೋಸ್ಟರ್​ ಮೂಲಕ ‘ಸಲಾರ್​’ ಚಿತ್ರದ ಟೀಸರ್​ ರಿಲೀಸ್​ ಬಗ್ಗೆ ಮಾಹಿತಿ ನೀಡಲಾಗಿದೆ. ಟೀಸರ್​ನಲ್ಲಿ ಆ್ಯಕ್ಷನ್​ ದೃಶ್ಯಗಳ ಝಲಕ್​ ಕಾಣಿಸುವ ಸಾಧ್ಯತೆ ಇದೆ.

Salaar Teaser: ಏಕಾಏಕಿ ಟೀಸರ್​ ರಿಲೀಸ್​ ದಿನಾಂಕ ಘೋಷಿಸಿದ ‘ಸಲಾರ್​’ ತಂಡ; ಜುಲೈ 6ಕ್ಕೆ ಸಿಗಲಿದೆ ಸರ್ಪ್ರೈಸ್​
ಸಲಾರ್​ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 03, 2023 | 3:11 PM

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಮತ್ತು ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಸಲಾರ್​’ ಸಿನಿಮಾದ ಮೇಲೆ ಅಭಿಮಾನಿಗಳು ಇಟ್ಟುಕೊಂಡಿರುವ ನಿರೀಕ್ಷೆ ಅಷ್ಟಿಷ್ಟಲ್ಲ. ಈ ಚಿತ್ರದ ಅಪ್​ಡೇಟ್​ ತಿಳಿಯಲು ಕಾದಿದ್ದ ಎಲ್ಲರಿಗೂ ಏಕಾಏಕಿ ಬ್ರೇಕಿಂಗ್​ ನ್ಯೂಸ್​ ನೀಡಲಾಗಿದೆ. ಈ ಸಿನಿಮಾದ ಟೀಸರ್​ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆಯು ಹೊಸ ಪೋಸ್ಟರ್​ ಹಂಚಿಕೊಂಡಿದೆ. ಜುಲೈ 6ರಂದು ಸಲಾರ್’ ಟೀಸರ್​ (Salaar Teaser) ರಿಲೀಸ್​ ಆಗಲಿದೆ. ಅಚ್ಚರಿ ಏನೆಂದರೆ ಅಂದು ನಸುಕಿನ 5 ಗಂಟೆ 12 ನಿಮಿಷಕ್ಕೆ ಟೀಸರ್​ ಅನಾವರಣ ಆಗಲಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿನ ಬಳಿಕ ಪ್ರಶಾಂತ್​ ನೀಲ್​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಸಲಾರ್​’. ಆ ಕಾರಣದಿಂದ ಹೈಪ್​ ಹೆಚ್ಚಾಗಿದೆ. ‘ಹೊಂಬಾಳೆ ಫಿಲ್ಮ್ಸ್​’ ತಂಡ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಬಂಡವಾಳ ಸುರಿದಿದೆ. ಬಹಳ ಅದ್ದೂರಿಯಾಗಿ ಸಿನಿಮಾ ಮೂಡಿಬರುತ್ತಿದೆ. ಟೀಸರ್​ನಲ್ಲಿ ಅದರ ಝಲಕ್​ ಕಾಣಿಸುವ ಸಾಧ್ಯತೆ ಇದೆ. ಹೊಸ ಪೋಸ್ಟರ್​ನಲ್ಲಿ ಒಂದಷ್ಟು ವಿವರಗಳನ್ನು ನೀಡಲಾಗಿದೆ. ಅದನ್ನು ಗಮನಿಸಿದರೆ ಟೀಸರ್​ನಲ್ಲಿ ಆ್ಯಕ್ಷನ್​ ಹೈಲೈಟ್​ ಆಗಲಿದೆ ಎನಿಸುತ್ತಿದೆ.

ಪಾತ್ರವರ್ಗದ ಕಾರಣದಿಂದಲೂ ‘ಸಲಾರ್​’ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಶ್ರುತಿ ಹಾಸನ್​ ಅವರು ನಟಿಸಿದ್ದಾರೆ. ಮಲಯಾಳಂ ಸ್ಟಾರ್​ ಕಲಾವಿದ ಪೃಥ್ವಿರಾಜ್​ ಸುಕುಮಾರನ್​ ಅವರು ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕಥೆಗೂ ಲಿಂಕ್ ಇರಬಹುದಾ ಎಂಬ ಗುಮಾನಿ ಕೂಡ ಹಲವರಿಗೆ ಇದೆ. ಟೀಸರ್​ನಲ್ಲಿ ಈ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ.

ಅದನ್ನೂ ಓದಿ: ಶೂಟಿಂಗ್​ ಸೆಟ್​ನಲ್ಲಿ ಹೇಗಿರ್ತಾರೆ ಗೊತ್ತಾ ಪ್ರಶಾಂತ್​ ನೀಲ್​? ವಿಶೇಷ ವಿಡಿಯೋ ಹಂಚಿಕೊಂಡ ‘ಸಲಾರ್​’ ಚಿತ್ರತಂಡ

ಪ್ರಭಾಸ್​ ನಟಿಸಿದ ‘ಆದಿಪುರುಷ್​’ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಮುಂಬರುವ ಸಿನಿಮಾಗಳ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ಎಲ್ಲರ ದೃಷ್ಟಿ ಈಗ ‘ಸಲಾರ್​’ ಸಿನಿಮಾ ಮೇಲಿದೆ. ಟೀಸರ್​ ನೋಡಿದ ಬಳಿಕ ಅಭಿಮಾನಿಗಳಿಂದ ಯಾವ ರೀತಿಯ ರೆಸ್ಪಾನ್ಸ್​ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ