‘ಸಲಾರ್​ಗಾಗಿ ಹೊಸ ಪ್ರಪಂಚ ಸೃಷ್ಟಿಸಿದ್ದಾರೆ ಪ್ರಶಾಂತ್ ನೀಲ್’, ಗೇಮ್ ಆಫ್ ಥ್ರೋನ್ಸ್​ಗೆ ಹೋಲಿಸಿದ ನಟಿ

Salaar: ಪ್ರಭಾಸ್ ಅಭಿಮಾನಿಗಳನ್ನು 'ಆದಿಪುರುಷ್' ನಿರಾಸೆಗೊಳಿಸಿದ್ದು ಇದೀಗ ಅವರೆಲ್ಲ ನಿರೀಕ್ಷೆಗಳು ಸಲಾರ್​ ಹೆಗಲೇರಿವೆ. ಅದಕ್ಕೆ ತಕ್ಕಂತೆ ಸಲಾರ್​ನಲ್ಲಿ ನಟಿಸಿರುವ ನಟಿಯೊಬ್ಬರು ಸಿನಿಮಾ ಎಷ್ಟು ಬೃಹತ್ ಆಗಿದೆ ಎಂಬುದನ್ನು ವಿವರಿಸಿದ್ದಾರೆ.

'ಸಲಾರ್​ಗಾಗಿ ಹೊಸ ಪ್ರಪಂಚ ಸೃಷ್ಟಿಸಿದ್ದಾರೆ ಪ್ರಶಾಂತ್ ನೀಲ್', ಗೇಮ್ ಆಫ್ ಥ್ರೋನ್ಸ್​ಗೆ ಹೋಲಿಸಿದ ನಟಿ
ಸಲಾರ್
Follow us
ಮಂಜುನಾಥ ಸಿ.
|

Updated on: Jun 22, 2023 | 6:28 PM

ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ (Box Office) ಒಳ್ಳೆ ಕಲೆಕ್ಷನ್ ಮಾಡುತ್ತಿದೆಯಾದರೂ ಪ್ರಭಾಸ್ ಅಭಿಮಾನಿಗಳಿಗೆ, ಪ್ರಭಾಸ್ ಸಿನಿಮಾಕ್ಕಾಗಿ ಕಾಯುತ್ತಿದ್ದ ಸಿನಿಮಾ ಪ್ರೇಮಿಗಳಿಗಾಗಿ ತೀವ್ರ ನಿರಾಸೆಯೇ ಆಗಿದೆ. ಆದಿಪುರುಷ್​ ಸಿನಿಮಾಕ್ಕೆ ತೀವ್ರ ನೆಗೆಟಿವ್ ವಿಮರ್ಶೆಗಳು ಕೇಳಿ ಬರುತ್ತಿದೆ. ಹಾಗಾಗಿ ಪ್ರಭಾಸ್ ಅಭಿಮಾನಿಗಳೆಲ್ಲ ಈಗ ಸಲಾರ್​ನತ್ತ ದೃಷ್ಟಿ ನೆಟ್ಟಿದ್ದಾರೆ. ಪ್ರಭಾಸ್ ನಟನೆಯ ಸಲಾರ್ (Salaar) ಸಿನಿಮಾದ ಬಗ್ಗೆ ಹೆಚ್ಚಿನ ಅಪ್​ಡೇಟ್​ಗಳು ಈ ವರೆಗೆ ಹೊರಬಿದ್ದಿಲ್ಲವಾದರೂ ಇದೀಗ ಸಿನಿಮಾದಲ್ಲಿ ನಟಿಸಿರುವ ನಟಿಯೊಬ್ಬರು ಸಿನಿಮಾದ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳ ನಿರೀಕ್ಷೆ ನೂರ್ಮಡಿಯಾಗಿವೆ.

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟಿಸಿರುವ ನಟಿ ಶ್ರಿಯಾ ರೆಡ್ಡಿ ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಲಾರ್ ಸಿನಿಮಾ ಹೇಗೆ ನಿರ್ಮಾಣವಾಗುತ್ತಿದೆ, ಪ್ರಶಾಂತ್ ನೀಲ್ ಏನು ವಿಶೇಷತೆಗಳನ್ನು ಸಲಾರ್ ಸಿನಿಮಾದಲ್ಲಿ ತೋರಿಸಲಿದ್ದಾರೆ. ಮೇಕಿಂಗ್ ಹೇಗಿದೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಲಾರ್ ಸಿನಿಮಾವನ್ನು ವಿಶ್ವದ ಟಾಪ್ ವೆಬ್ ಸರಣಿ ಗೇಮ್ ಆಫ್ ಥ್ರೋನ್ಸ್​ಗೆ ಹೋಲಿಸಿದ್ದಾರೆ.

‘ಕೆಜಿಎಫ್ ಅನ್ನು ಮೀರಿಸುತ್ತದೆಯೇ ಸಲಾರ್’ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಶ್ರಿಯಾ ರೆಡ್ಡಿ, ಕೆಜಿಎಫ್​ಗಿಂತಲೂ ಭರ್ಜರಿಯಾಗಿ ಸಲಾರ್ ನಿರ್ಮಾಣವಾಗುತ್ತಿದೆ. ಕೆಜಿಎಫ್ ನೂರಡಿಯಾದರೆ ಸಲಾರ್ ಇನ್ನೂರಡಿ ಎಂಬರ್ಥದಲ್ಲಿ ಸಿನಿಮಾವನ್ನು ಹೊಗಳಿದ್ದಾರೆ. ”ಸಲಾರ್ ಮಾಮೂಲಿ ಸಿನಿಮಾ ಅಲ್ಲ. ಸಾಮಾನ್ಯ ಸಿನಿಮಾಗಳಲ್ಲಿ ನೋಡುವ ಯಾವುದೂ ಸಹ ಸಲಾರ್​ನಲ್ಲಿ ಇರುವುದಿಲ್ಲ. ಸಲಾರ್​ಗಾಗಿ ಹೊಸ ಪ್ರಪಂಚವನ್ನೇ ಪ್ರಶಾಂತ್ ನೀಲ್ ಸೃಷ್ಟಿಸಿದ್ದಾರೆ. ಪ್ರೇಕ್ಷಕ ಹಿಂದೆಂದೂ ನೋಡಿರದ ಜಗತ್ತನ್ನು ಸಲಾರ್​ನಲ್ಲಿ ನೀಲ್ ತೋರಿಸುತ್ತಿದ್ದಾರೆ” ಎಂದಿದ್ದಾರೆ.

”ಗೇಮ್ ಆಫ್ ಥ್ರೋನ್ಸ್​ನಲ್ಲಿ ಹೊಸ ಪ್ರಪಂಚವೇ ಇದೆಯಲ್ಲ ಹಾಗೆಯೇ ಸಲಾರ್​ನಲ್ಲಿ ಹೊಸ ಪ್ರಪಂಚವೇ ಇದೆ. ಅದರ ನಡುವೆ ಪ್ರಭಾಸ್ ಇದ್ದಾರೆ. ಅವರು ತೆರೆಯ ಮೇಲೆ ಬಂದರೆ ಸಾಕು ಅದ್ಭುತ ಎನಿಸುತ್ತದೆ. ಪ್ರಭಾಸ್​ ರನ್ನು ಆ ರೀತಿಯ ಪಾತ್ರದಲ್ಲಿ ಎಂದೂ ನೋಡಿರಲಾರಿರಿ ಹಾಗೆ ಇದೆ ಅವರ ಪಾತ್ರ. ಒಂದುಕಡೆ ಪ್ರಭಾಸ್ ಆದರೆ ಇನ್ನೊಂದು ಕಡೆ ಪೃಥ್ವಿರಾಜ್ ಸುಕುಮಾರ್ ಇದ್ದಾರೆ. ಇಡೀ ಕತೆಗೆ ಬೇರೆಯದೇ ಎಲಿವೇಷನ್ ಅನ್ನು ಪೃಥ್ವಿರಾಜ್ ಪಾತ್ರ ನೀಡುತ್ತದೆ. ಅವರನ್ನು ನೋಡುತ್ತಾ ಇದ್ದುಬಿಡಬಹುದು” ಎಂದಿದ್ದಾರೆ ಶ್ರಿಯಾ.

ಇದನ್ನೂ ಓದಿ:‘ಸಲಾರ್’ ಹೊಸ ಪೋಸ್ಟರ್​ನಲ್ಲಿ ‘ಕೆಜಿಎಫ್ 2’ ಕನೆಕ್ಷನ್​; ನಿಮಗೂ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ..

”ಇವರಿಬ್ಬರ ರೀತಿಯೇ ಮಾಸ್, ಮ್ಯಾಡ್, ವೈಯಲೆಂಟ್ ಆಗಿರುವ ಇನ್ನೂ ಏಳು-ಎಂಟು ಮಾತ್ರಗಳು ಸಲಾರ್ ಸಿನಿಮಾದಲ್ಲಿವೆ. ಹಾಗಿದ್ದರೆ ನೀವೇ ಯೋಚಿಸಿ ಸಲಾರ್ ಸಿನಿಮಾ ಹೇಗಿರಬಹುದು? ಎಷ್ಟು ಪವರ್​ಫುಲ್ ಆಗಿರಬಹುದು ಎಂದು. ಸಿನಿಮಾದ ಪ್ರತಿ ಸೆಕೆಂಡ್, ಪ್ರತಿ ನಿಮಿಷ ಸಹ ಥ್ರಿಲ್ಲಿಂಗ್ ಆಗಿರುತ್ತದೆ. ಆರಾಮವಾಗಿ ಕೂತು ನೋಡುವ ಸಿನಿಮಾ ಸಲಾರ್ ಅಲ್ಲ, ಸೀಟಿನ ತುದಿಯಲ್ಲಿ ಕುಳಿತು ಕಣ್ಣು ರೆಪ್ಪೆ ಆಡಿಸದೆ ನೋಡುವಂಥಹಾ ಸಿನಿಮಾ” ಎಂದಿದ್ದಾರೆ ಶ್ರಿಯಾ ರೆಡ್ಡಿ.

ಸಲಾರ್ ಸಿನಿಮಾಕ್ಕೆ ನಾಯಕಿ ಶ್ರುತಿ ಹಾಸನ್. ಸಿನಿಮಾದಲ್ಲಿ ಶ್ರಿಯಾ ರೆಡ್ಡಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರ್, ಕನ್ನಡದ ಪ್ರಮೋದ್, ಮಧು ಗುರುಸ್ವಾಮಿ, ಜಗಪತಿ ಬಾಬು ಇನ್ನೂ ಹಲವರು ಇದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಕ್ಯಾಮೆರಾ ಕೆಲಸ ಮಾಡಿರುವುದು ಭುವನ್ ಗೌಡ. ಸಲಾರ್ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ