AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಹೊಸ ಪೋಸ್ಟರ್​ನಲ್ಲಿ ‘ಕೆಜಿಎಫ್ 2’ ಕನೆಕ್ಷನ್​; ನಿಮಗೂ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ..

‘ಈ ಸಿನಿಮಾ ಥಿಯೇಟರ್‌ಗೆ ಬರಲು 100 ದಿನ ಬಾಕಿ’ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ‘ಕೆಜಿಎಫ್ 2’ ಚಿತ್ರದ ಕನೆಕ್ಷನ್ ಮತ್ತೊಮ್ಮೆ ನೆನಪಿಗೆ ಬಂದಿದೆ.

‘ಸಲಾರ್’ ಹೊಸ ಪೋಸ್ಟರ್​ನಲ್ಲಿ ‘ಕೆಜಿಎಫ್ 2’ ಕನೆಕ್ಷನ್​; ನಿಮಗೂ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ..
ಸಲಾರ್-ಕೆಜಿಎಫ್ 2
Follow us
ರಾಜೇಶ್ ದುಗ್ಗುಮನೆ
|

Updated on: Jun 21, 2023 | 7:15 AM

‘ಬಾಹುಬಲಿ 2’ (Bahubali 2) ನಂತರ ಪ್ರಭಾಸ್ ನಟಿಸಿದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿವೆ. ‘ಸಾಹೋ’ ಮತ್ತು ‘ರಾಧೆ ಶ್ಯಾಮ್’ ಚಿತ್ರಗಳು ಈಗಾಗಲೇ ಅಭಿಮಾನಿಗಳನ್ನು ನಿರಾಸೆಗೊಳಿಸಿವೆ. ಇತ್ತೀಚೆಗೆ ಬಿಡುಗಡೆಯಾದ ‘ಆದಿಪುರುಷ್’ ಚಿತ್ರ (Adipurush Movie) ಟೀಕೆಗಳನ್ನು ಎದುರಿಸುತ್ತಿದೆ. ನಿರ್ದೇಶಕ ಓಂ ರಾವತ್ ಮಾಡಿದ ತಪ್ಪಿನಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ಕಾರಣಕ್ಕೆ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಅನೇಕರು ‘ಕೆಜಿಎಫ್ 2’ ಚಿತ್ರಕ್ಕೆ ಇರುವ ಕನೆಕ್ಷನ್ ಪತ್ತೆ ಹಚ್ಚಿದ್ದಾರೆ.

‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಫುಲ್ ಮಾಸ್ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲೂ ಸಿನಿಮಾದ ಸೆಟ್‌ನ ಫೋಟೋಗಳು, ಚಿತ್ರದ ಪೋಸ್ಟರ್​​ಗಳು ಹೈಪ್ ಸೃಷ್ಟಿ ಮಾಡಿದ್ದವು. ಈಗ ನಿರ್ಮಾಪಕರು ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಸೆಪ್ಟೆಂಬರ್ 28ರಂದು ‘ಸಲಾರ್’ ತೆರೆಗೆ ಬರಲಿದೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ‘ಈ ಸಿನಿಮಾ ಥಿಯೇಟರ್‌ಗೆ ಬರಲು 100 ದಿನ ಬಾಕಿ’ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ‘ಕೆಜಿಎಫ್ 2’ ಚಿತ್ರದ ಕನೆಕ್ಷನ್ ಮತ್ತೊಮ್ಮೆ ನೆನಪಿಗೆ ಬಂದಿದೆ.

ಇದನ್ನೂ ಓದಿ: ಪೊಲೀಸ್ ಭದ್ರತೆ ಪಡೆದು ಹನುಮಂತ ದೇವರೇ ಅಲ್ಲ; ಎಂದ ಆದಿಪುರುಷ್ ಸಂಭಾಷಣೆಕಾರ

‘ಸಲಾರ್’ ಟೀಂ ಬಿಡುಗಡೆ ಮಾಡಿದ ಇತ್ತೀಚಿನ ಪೋಸ್ಟರ್‌ನಲ್ಲಿ ಕೆಲವು ಬಾಕ್ಸ್‌ಗಳು ಕಂಡುಬಂದಿದೆ. ಸ್ಕ್ರೀನ್​ನ ಬ್ರೈಟ್​ನೆಸ್ ಹೆಚ್ಚು ಮಾಡಿದರೆ ‘Days to..’ ಎಂದು ಬರೆದ ಸಾಲುಗಳ ಕೆಳ ಭಾಗದಲ್ಲಿ ಈ ಪೆಟ್ಟಿಗೆಗಳು ಗೋಚರಿಸುತ್ತವೆ. ‘ಕೆಜಿಎಫ್ 2’ ರಾಕಿ ಭಾಯ್ ಸಾಗರಕ್ಕೆ ಎಸೆದ ಚಿನ್ನದ ಪೆಟ್ಟಿಗೆಗಳು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ‘ಸಲಾರ್’ ಹಾಗೂ ‘ಕೆಜಿಎಫ್’ ಚಿತ್ರಗಳು ಪ್ರಶಾಂತ್ ನೀಲ್ ಯೂನಿವರ್ಸ್​​ನ ಅಡಿಯಲ್ಲಿ ಬರುತ್ತವೆ ಎಂಬುದು ಕೆಲವರ ಊಹೆ. ಈ ಕಾರಣಕ್ಕೆ ಎರಡೂ ಚಿತ್ರಕ್ಕೂ ಲಿಂಕ್ ಕೊಡಲಾಗಿದೆ. ಸಿನಿಮಾ ರಿಲೀಸ್ ಆದ ಬಳಿಕವೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ