Deepika Padukone: ‘ಈ ಆಸನ ಯಾವುದು ಅಂತ ನಿಮಗೆ ಗೊತ್ತಾ?’: ಫೋಟೋ ಹಂಚಿಕೊಂಡು ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ

Yoga Day: ನೆಟ್ಟಿಗರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಫೋಟೋಗೆ ಕಮೆಂಟ್​ ಮಾಡಿದ್ದಾರೆ. ಆಲಿಯಾ ಭಟ್ ಅವರು ಇದನ್ನು ‘ಪಪ್ಪಿ ಪೋಸ್​’ ಎಂದು ಕರೆದಿದ್ದಾರೆ.

Deepika Padukone: ‘ಈ ಆಸನ ಯಾವುದು ಅಂತ ನಿಮಗೆ ಗೊತ್ತಾ?’: ಫೋಟೋ ಹಂಚಿಕೊಂಡು ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on: Jun 22, 2023 | 5:23 PM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಸಖತ್​ ಬ್ಯುಸಿ ಆಗಿದ್ದಾರೆ. ಫಿಟ್ನೆಸ್​ ಬಗ್ಗೆ ಅವರಿಗೆ ಹೆಚ್ಚು ಕಾಳಜಿ. ಯೋಗ ಬಗ್ಗೆ ಕೂಡ ಅವರು ಆಸಕ್ತಿ ಹೊಂದಿದ್ದಾರೆ. ಬುಧವಾರ (ಜೂನ್​ 21) ವಿಶ್ವ ಯೋಗ ದಿನ (International Yoga Day) ಆಚರಿಸಲಾಯಿತು. ಈ ಪ್ರಯುಕ್ತ ಅನೇಕ ಸೆಲೆಬ್ರಿಟಿಗಳು ಯೋಗ (Yoga) ಮಾಡುತ್ತಿರುವ ಫೋಟೋ ಶೇರ್​ ಮಾಡಿದ್ದರು. ಅದೇ ರೀತಿ ದೀಪಿಕಾ ಪಡುಕೋಣೆ ಕೂಡ ಒಂದು ವಿಶೇಷ ಫೋಟೋ ಹಂಚಿಕೊಂಡರು. ಅದಕ್ಕೆ ಅವರು ನೀಡಿದ ಕ್ಯಾಪ್ಷನ್ ಗಮನ ಸೆಳೆಯುವಂತಿದೆ. ‘ಈ ಆಸನಕ್ಕೆ ಏನೆಂದು ಕರೆಯುತ್ತಾರೆ ಅಂತ ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತು’ ಎಂದು ದೀಪಿಕಾ ಪಶ್ನೆ ಮಾಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್​ ಆಗಿದೆ. 12 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್​ ಮಾಡಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಫೋಟೋಗೆ ಕಮೆಂಟ್​ ಮಾಡಿದ್ದಾರೆ. ಆಲಿಯಾ ಭಟ್ ಅವರು ಇದನ್ನು ‘ಪಪ್ಪಿ ಪೋಸ್​’ ಎಂದು ಕರೆದಿದ್ದಾರೆ. ‘ಮಂಚದ ಕೆಳಗೆ ಚಪ್ಪಲಿ ಕಳೆದುಹೋದಾಗ ಮಾಡುವ ಆಸನ’ ಎಂದು ಆರ್​ಜೆ ಅಭಿನವ್​ ಅವರು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆ ದೀಪಿಕಾ ಪಡುಕೋಣೆ ಮಾಡಿರುವ ಈ ಆಸನದ ಬಗ್ಗೆ ಕಮೆಂಟ್​ ಬಾಕ್ಸ್​ನಲ್ಲಿ ತರಹೇವಾರಿ ಚರ್ಚೆ ನಡೆಯುತ್ತಿದೆ.

ದೀಪಿಕಾ ಪಡುಕೋಣೆ ಪಾಲಿಗೆ 2023ರ ವರ್ಷ ತುಂಬ ಸ್ಪೆಷಲ್​ ಆಗಿದೆ. ಈ ವರ್ಷ ಆರಂಭದಲ್ಲೇ ಅವರು ‘ಪಠಾಣ್​’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಪಡೆದರು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ವಿದೇಶದಲ್ಲೂ ‘ಪಠಾಣ್​’ ರಿಲೀಸ್​ ಆಗಿ ಅಬ್ಬರಿಸಿತು. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರ ಜೋಡಿಯನ್ನು ಫ್ಯಾನ್ಸ್​ ಇಷ್ಟಪಟ್ಟರು.

ಇದನ್ನೂ ಓದಿ: Ragini Dwivedi: ನಟಿ ರಾಗಿಣಿ ದ್ವಿವೇದಿಗೆ ಯೋಗ ಬಗ್ಗೆ ಸಖತ್​ ಆಸಕ್ತಿ; ಇಲ್ಲಿದೆ ಮಸ್ತ್​ ಫೋಟೋ ಗ್ಯಾಲರಿ

ಹಲವು ಇಂಟರೆಸ್ಟಿಂಗ್​ ಸಿನಿಮಾಗಳು ದೀಪಿಕಾ ಪಡುಕೋಣೆ ಅವರ ಕೈಯಲ್ಲಿ ಇವೆ. ಪ್ರಭಾಸ್​ ಜೊತೆ ಅವರು ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಇದಲ್ಲದೇ ಹೃತಿಕ್​ ರೋಷನ್​ ಜೊತೆ ಅವರು ‘ಫೈಟರ್​’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ‘ಪಠಾಣ್​’ ಖ್ಯಾತಿಯ ಸಿದ್ಧಾರ್ಥ್​ ಆನಂದ್​. ಈ ಸಿನಿಮಾದ ಬಗ್ಗೆಯೂ ಹೈಪ್​ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ