AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೇಲರ್​ ಬಿಡುಗಡೆಗೂ ಮೊದಲೇ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ನಲ್ಲಿ ‘ಸಲಾರ್​’ ಅಬ್ಬರ ಶುರು

ಅಮೆರಿಕದಲ್ಲಿ ಈವರೆಗೆ 5 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಸೇಲ್​ ಆಗಿವೆ. ಅದರಿಂದ ಕೋಟ್ಯಂತರ ರೂಪಾಯಿ ಆದಾಯ ಹರಿದುಬಂದಿದೆ. ಭಾರತದಲ್ಲೂ ಆದಷ್ಟು ಬೇಗ ‘ಸಲಾರ್​’ ಚಿತ್ರದ ಟಿಕೆಟ್​ ಬುಕಿಂಗ್​ ಶುರುವಾಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಟ್ರೇಲರ್​ ಬಿಡುಗಡೆ ಆದ ಬಳಿಕ ನಿರೀಕ್ಷೆ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.

ಟ್ರೇಲರ್​ ಬಿಡುಗಡೆಗೂ ಮೊದಲೇ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ನಲ್ಲಿ ‘ಸಲಾರ್​’ ಅಬ್ಬರ ಶುರು
ಪ್ರಭಾಸ್​
TV9 Web
| Edited By: |

Updated on: Nov 22, 2023 | 7:42 AM

Share

ಡಿಸೆಂಬರ್​ 22ರಂದು ‘ಸಲಾರ್​’ ಸಿನಿಮಾ (Salaar Movie) ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಪ್ರಭಾಸ್​ (Prabhas) ಫ್ಯಾನ್ಸ್​ ಮತ್ತು ಪ್ರಶಾಂತ್​ ನೀಲ್​ ಫ್ಯಾನ್ಸ್​ ಕಾದಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಚಿತ್ರ ಅಬ್ಬರಿಸಲಿದೆ ಎಂಬುದಕ್ಕೆ ಮುನ್ಸೂಚನೆ ಸಿಕ್ಕಿದೆ. ಅಮೆರಿಕದಲ್ಲಿ ಈಗಾಗಲೇ ಈ ಚಿತ್ರದ ಮುಂಗಡ ಟಿಕೆಟ್​ ಬುಕಿಂಗ್​ ಶುರುವಾಗಿದೆ. ಅದರಿಂದ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ‘ಸಲಾರ್​’ ಟ್ರೇಲರ್​ (Salaar Trailer) ಇನ್ನೂ ಬಿಡುಗಡೆ ಆಗಲಿಲ್ಲ. ಅಷ್ಟರೊಳಗೆ ಈ ಪರಿ ಕ್ರೇಜ್​ ಸೃಷ್ಟಿ ಆಗಿರುವುದು ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ.

ಪ್ರಶಾಂತ್​ ನೀಲ್​ ಅವರ ಮೇಕಿಂಗ್​ ಮೇಲೆ ಎಲ್ಲರಿಗೂ ನಂಬಿಕೆ ಇದೆ. ಹಾಗಾಗಿ ಟ್ರೇಲರ್ ಬಿಡುಗಡೆಗೂ ಮುನ್ನವೇ ಚಿತ್ರದ ಮೇಲೆ ಭರವಸೆ ಮೂಡಿದೆ. ಡಿಸೆಂಬರ್​ 1ರಂದು ‘ಸಲಾರ್​’ ಟ್ರೇಲರ್​ ಬಿಡುಗಡೆ ಆಗಲಿದೆ. ಆ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಪ್ರಭಾಸ್​ ಅವರು ಈ ಸಿನಿಮಾದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ, ‘ಆದಿಪುರುಷ್​’, ‘ರಾಧೆ ಶ್ಯಾಮ್​’ ಸಿನಿಮಾಗಳಿಂದ ಅವರಿಗೆ ಗೆಲುವು ಸಿಕ್ಕಿಲ್ಲ. ಹಾಗಾಗಿ ಅವರೀಗ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Prabhas: ಭಾರತಕ್ಕೆ ವಾಪಸ್​ ಬಂದ ಪ್ರಭಾಸ್​; ‘ಸಲಾರ್​’ ಬಗ್ಗೆ ಚಿಂತೆ ಹೊಂದಿದ್ದ ಅಭಿಮಾನಿಗಳಿಗೆ ಈಗ ಖುಷಿ

‘ಸಲಾರ್​’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಪ್ರಭಾಸ್​ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​ ಅವರು ಕೂಡ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಅವರ ಗೆಟಪ್​ ಕೂಡ ಗಮನ ಸೆಳೆಯುವಂತಿದೆ. ಈ ಮೊದಲು ರಿಲೀಸ್ ಆದ ಟೀಸರ್​ ಸಖತ್​ ಹೈಪ್​ ಸೃಷ್ಟಿ ಮಾಡಿತ್ತು. ಟ್ರೇಲರ್​ ಬಿಡುಗಡೆಯಾದರೆ ಹೈಪ್​ ಇನ್ನಷ್ಟು ಹೆಚ್ಚಾಗಲಿದೆ. ‘ಕೆಜಿಎಫ್​ 2’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ‘ಸಲಾರ್​’ ತೆರೆಹಿಂದೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಸಲಾರ್’ ನನ್ನ ಸಿನಿಮಾ ಅಲ್ಲ, ಆ ಬಗ್ಗೆ ಬೇಸರವೂ ಇಲ್ಲ: ಶ್ರುತಿ ಹಾಸನ್

ಅಮೆರಿಕದಲ್ಲಿ ಈವರೆಗೆ 5 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಸೇಲ್​ ಆಗಿವೆ. ಅದರಿಂದ ಕೋಟ್ಯಂತರ ರೂಪಾಯಿ ಆದಾಯ ಹರಿದುಬಂದಿದೆ. ಭಾರತದಲ್ಲೂ ಆದಷ್ಟು ಬೇಗ ‘ಸಲಾರ್​’ ಚಿತ್ರದ ಟಿಕೆಟ್​ ಬುಕಿಂಗ್​ ಶುರುವಾಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಈ ಸಿನಿಮಾದ ಕಥೆಗೂ, ‘ಕೆಜಿಎಫ್​: ಚಾಪ್ಟರ್​ 2’ ಕಥೆಗೂ ಲಿಂಕ್​ ಇರಬಹುದು ಎಂದು ಕೂಡ ಕೆಲವರು ಊಹಿಸಿದ್ದಾರೆ. 2 ಪಾರ್ಟ್​ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು ಡಿಸೆಂಬರ್​ 22ರಂದು ಮೊದಲ ಪಾರ್ಟ್​ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್