Prabhas: ಭಾರತಕ್ಕೆ ವಾಪಸ್​ ಬಂದ ಪ್ರಭಾಸ್​; ‘ಸಲಾರ್​’ ಬಗ್ಗೆ ಚಿಂತೆ ಹೊಂದಿದ್ದ ಅಭಿಮಾನಿಗಳಿಗೆ ಈಗ ಖುಷಿ

Salaar Movie: ‘ಕೆಜಿಎಫ್​: ಚಾಪ್ಟರ್​ 2’ ರೀತಿಯೇ ‘ಸಲಾರ್​’ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಆದ್ದರಿಂದ ಪ್ರಭಾಸ್​ ಅವರು ಎಲ್ಲ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಬೇಕಿದೆ. ಬೇರೆ ಬೇರೆ ಭಾಷೆಯ ಮಾಧ್ಯಮಗಳಿಗೆ ಸಂದರ್ಶನ ನೀಡಬೇಕಿದೆ. ಆದಷ್ಟು ಬೇಗ ಟ್ರೇಲರ್​ ಬಿಡುಗಡೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

Prabhas: ಭಾರತಕ್ಕೆ ವಾಪಸ್​ ಬಂದ ಪ್ರಭಾಸ್​; ‘ಸಲಾರ್​’ ಬಗ್ಗೆ ಚಿಂತೆ ಹೊಂದಿದ್ದ ಅಭಿಮಾನಿಗಳಿಗೆ ಈಗ ಖುಷಿ
ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Nov 08, 2023 | 12:27 PM

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಸಲಾರ್​’ (Salaar Movie) ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಈ ಸಿನಿಮಾಗೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದು, ‘ಹೊಂಬಾಳೆ ಫಿಲ್ಮ್ಸ್​’ (Hombale Films) ಬಂಡವಾಳ ಹೂಡಿದೆ. ಡಿಸೆಂಬರ್​ 22ರಂದು ‘ಸಲಾರ್’ ಚಿತ್ರ ಬಿಡುಗಡೆ ಆಗಲಿದೆ. ಇದು ಹೈವೋಲ್ಟೇಜ್​ ಸಿನಿಮಾ. ಹಾಗಿದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಕಾರ್ಯ ಶುರುವಾಗಿಲ್ಲ. ಅತ್ತ, ಪ್ರಭಾಸ್​ ಅವರು ವಿದೇಶಕ್ಕೆ ತೆರಳಿದ್ದರು. ಇದರ ಬಗ್ಗೆ ಪ್ರಭಾಸ್​ ಅಭಿಮಾನಿಗಳಿಗೆ ಚಿಂತೆ ಆಗಿತ್ತು. ಆದರೆ ಈಗ ಪ್ರಭಾಸ್​ ಅವರು ಭಾರತಕ್ಕೆ ವಾಪಸ್​ ಬಂದಿದ್ದಾರೆ. ಆ ಮೂಲಕ ಫ್ಯಾನ್ಸ್​ ಚಿಂತೆ ಕಡಿಮೆ ಆಗಿದೆ.

‘ಆದಿಪುರುಷ್​’ ಸಿನಿಮಾದ ಸೋಲಿನ ಬಳಿಕ ಪ್ರಭಾಸ್​ ಅವರು ವಿದೇಶಕ್ಕೆ ತೆರಳಿದ್ದರು. ಯೂರೋಪ್​ನಲ್ಲಿ ಅವರು 2 ತಿಂಗಳು ಕಾಲ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಮೊಣಕಾಲಿನ ಸರ್ಜರಿ ಆಗಿದೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕಾಗಿ ಅವರು ಇಷ್ಟು ದಿನ ವಿಶ್ರಾಂತಿ ಪಡೆದಿದ್ದಾರೆ. ಈಗ ಅವರು ಭಾರತಕ್ಕೆ ವಾಪಸ್​ ಬಂದಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ಹೊರಬರುತ್ತಿರುವ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಭಾರತಕ್ಕೆ ಮರಳಿದ ಅವರಿಗೆ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮೊದಲೇ 350 ಕೋಟಿ ರೂಪಾಯಿ ಬಾಚಿಕೊಂಡ ‘ಸಲಾರ್​’ ಸಿನಿಮಾ?

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿನ ಬಳಿಕ ಪ್ರಶಾಂತ್​ ನೀಲ್​ ಅವರ ನಿರ್ದೇಶನದಲ್ಲಿ ‘ಸಲಾರ್​’ ಸಿನಿಮಾ ಮೂಡಿಬಂದಿದ್ದು, ಅಭಿಮಾನಿಗಳ ವಲಯದಲ್ಲಿ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ‘ಕೆಜಿಎಫ್​ 2’ ರೀತಿಯೇ ಇದು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಆದ್ದರಿಂದ ಪ್ರಭಾಸ್​ ಅವರು ಎಲ್ಲ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಬೇಕಿದೆ. ಬೇರೆ ಬೇರೆ ಭಾಷೆಯ ಮಾಧ್ಯಮಗಳಿಗೆ ಸಂದರ್ಶನ ನೀಡಬೇಕಿದೆ. ಆದಷ್ಟು ಬೇಗ ಟ್ರೇಲರ್​ ಬಿಡುಗಡೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಸಲಾರ್​’ ಹೀರೋಯಿನ್​ ಶ್ರುತಿ ಹಾಸನ್​ ಹೊಸ ಫೋಟೋಶೂಟ್​ ಹೇಗಿದೆ ನೋಡಿ

‘ಸಲಾರ್​’ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ಅವರು ನಟಿಸಿದ್ದಾರೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪೋಸ್ಟರ್​ಗಳು ಈಗಾಗಲೇ ಭಾರಿ ಹೈಪ್ ಸೃಷ್ಟಿ ಮಾಡಿವೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ‘ಕೆಜಿಎಫ್​ 2’ ರೀತಿಯೇ ಅಬ್ಬರಿಸಲಿದೆಯೇ ಎಂದು ತಿಳಿಯುವ ಕೌತುಕ ಎಲ್ಲರಲ್ಲೂ ಇದೆ. ‘ಕೆಜಿಎಫ್​’ ರೀತಿಯೇ ಡಾರ್ಕ್​ ಶೇಡ್​ನಲ್ಲಿ ಈ ಸಿನಿಮಾದ ಮೂಡಿಬಂದಿದೆ. ‘ಕೆಜಿಎಫ್​’ ತಂಡದಲ್ಲಿ ಕೆಲಸ ಮಾಡಿದ್ದ ಅನೇಕ ತಂತ್ರಜ್ಞರು ‘ಸಲಾರ್​’ ಟೀಮ್​ನಲ್ಲೂ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.