AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಸಿನಿಮಾದಲ್ಲಿ ಶಿವಣ್ಣ, ಪ್ರಭಾಸ್​, ಮೋಹನ್​ಲಾಲ್​, ವಿಷ್ಣು ಮಂಚು; ದೊಡ್ಡದಾಯ್ತು ‘ಕಣ್ಣಪ್ಪ’ ಪಾತ್ರವರ್ಗ

1988ರಲ್ಲಿ ಶಿವರಾಜ್‍ಕುಮಾರ್ ನಟನೆಯ ‘ಶಿವ ಮೆಚ್ಚಿದ ಕಣ್ಣಪ್ಪ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಶಿವಣ್ಣ ಅವರು ಕಣ್ಣಪ್ಪನ ಪಾತ್ರ ಮಾಡಿದ್ದರು. ಈಗ ಅದೇ ಕಣ್ಣಪ್ಪನ ಕಥೆಯನ್ನು ಇಟ್ಟುಕೊಂಡು ತೆಲುಗಿನಲ್ಲಿ ವಿಷ್ಣು ಮಂಚು ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರತಂಡಕ್ಕೆ ಶಿವರಾಜ್​ಕುಮಾರ್​ ಸೇರ್ಪಡೆ ಆಗಿದ್ದಾರೆ.

ಒಂದೇ ಸಿನಿಮಾದಲ್ಲಿ ಶಿವಣ್ಣ, ಪ್ರಭಾಸ್​, ಮೋಹನ್​ಲಾಲ್​, ವಿಷ್ಣು ಮಂಚು; ದೊಡ್ಡದಾಯ್ತು ‘ಕಣ್ಣಪ್ಪ’ ಪಾತ್ರವರ್ಗ
ಶಿವರಾಜ್​ಕುಮಾರ್​, ಪ್ರಭಾಸ್​, ಮೋಹನ್​ಲಾಲ್​, ವಿಷ್ಣು ಮಂಚು
ಮದನ್​ ಕುಮಾರ್​
|

Updated on: Oct 13, 2023 | 2:37 PM

Share

‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ (Shivarajkumar) ಅವರ ಖ್ಯಾತಿ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಈಗಂತೂ ಶಿವರಾಜ್​ಕುಮಾರ್​ ಅವರಿಗೆ ಪರಭಾಷೆಯಿಂದ ಬರುವ ಆಫರ್​ಗಳು ಹೆಚ್ಚಾಗಿದೆ. ಈ ವರ್ಷ ಬಿಡುಗಡೆ ಆದ ‘ಜೈಲರ್​’ ಸಿನಿಮಾದಲ್ಲಿ ಅವರು ರಜನಿಕಾಂತ್​ ಜೊತೆ ನಟಿಸಿದ್ದರು. ಆ ಸಿನಿಮಾದಲ್ಲಿ ಶಿವಣ್ಣ ಮಾಡಿದ ಪಾತ್ರಕ್ಕೆ ಭರ್ಜರಿ ಶಿಳ್ಳೆ, ಚಪ್ಪಾಳೆ ಸಿಕ್ಕಿತು. ಈಗ ಮತ್ತೊಂದು ಪರಭಾಷೆಯ ಸಿನಿಮಾದಲ್ಲಿ ಅವರು ನಟಿಸುವುದು ಖಚಿತವಾಗಿದೆ. ಹೌದು, ತೆಲುಗಿನ ಖ್ಯಾತ ನಟ ವಿಷ್ಣು ಮಂಚು (Vishnu Manchu) ಅಭಿನಯಿಸುತ್ತಿರುವ ‘ಕಣ್ಣಪ್ಪ’ (Kannappa) ಸಿನಿಮಾದ ಪಾತ್ರವರ್ಗಕ್ಕೆ ಶಿವರಾಜ್​ಕುಮಾರ್​ ಅವರ ಎಂಟ್ರಿ ಆಗಿದೆ. ಈ ಬಗ್ಗೆ ಕೆಲವು ದಿನಗಳಿಂದ ಗುಸುಗುಸು ಕೇಳಿಬರುತ್ತಿತ್ತು. ಆಗ ಅಧಿಕೃತವಾಗಿ ಚಿತ್ರತಂಡದಿಂದಲೇ ಮಾಹಿತಿ ಹೊರಬಿದ್ದಿದೆ.

ನಟ ವಿಷ್ಣು ಮಂಚು ಮತ್ತು ಅವರ ಫ್ಯಾನ್ಸ್​ ಪಾಲಿಗೆ ‘ಕಣ್ಣಪ್ಪ’ ಸಿನಿಮಾ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಆಗಿದೆ. ಈ ಸಿನಿಮಾ ಬಗ್ಗೆ ಈಗಾಗಲೇ ಅಭಿಮಾನಿಗಳ ವಲಯದಲ್ಲಿ ಸಖತ್​ ಕುತೂಹಲ ಮನೆಮಾಡಿದೆ. ಈ ಪರಿ ಹೈಪ್​ ಹೆಚ್ಚಲು ಕಾರಣ ಆಗಿರುವುದೇ ಈ ಸಿನಿಮಾದ ಪಾತ್ರವರ್ಗ. ಟಾಲಿವುಡ್​ ಹೀರೋ ಪ್ರಭಾಸ್​, ಮಲಯಾಳಂ ಸ್ಟಾರ್​ ನಟ ಮೋಹನ್​ಲಾಲ್​ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಜೊತೆಗೆ ಈಗ ಶಿವರಾಜ್​ಕುಮಾರ್​ ಕೂಡ ಸೇರ್ಪಡೆ ಆಗಿರುವುದರಿಂದ ‘ಕಣ್ಣಪ್ಪ’ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್​ ಆಗಿದೆ.

1988ರಲ್ಲಿ ಶಿವರಾಜ್‍ಕುಮಾರ್ ನಟನೆಯ ‘ಶಿವ ಮೆಚ್ಚಿದ ಕಣ್ಣಪ್ಪ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಶಿವಣ್ಣ ಅವರು ಕಣ್ಣಪ್ಪನ ಪಾತ್ರ ಮಾಡಿದ್ದರು. ಈಗ ಅದೇ ಕಣ್ಣಪ್ಪನ ಕಥೆಯನ್ನು ಇಟ್ಟುಕೊಂಡು ತೆಲುಗಿನಲ್ಲಿ ವಿಷ್ಣು ಮಂಚು ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರ ಪಾತ್ರ ಹೇಗಿರಲಿದೆ ಎಂಬುದು ಸದ್ಯಕ್ಕೆ ರಹಸ್ಯವಾಗಿದೆ. ಘಟಾನುಘಟಿ ಕಲಾವಿದರನ್ನು ಒಂದೇ ಸಿನಿಮಾದಲ್ಲಿ ನೋಡುವ ಅವಕಾಶ ಸಿಗಲಿರುವುದರಿಂದ ಸಿನಿಪ್ರಿಯರಿಗೆ ಈ ಪ್ರಾಜೆಕ್ಟ್​​ ಬಗ್ಗೆ ಕಾತರ ಹೆಚ್ಚಾಗಿದೆ.

ಇದನ್ನೂ ಓದಿ: ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

‘ಕಣ್ಣಪ್ಪ’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರ ಪಾತ್ರ ಹೈಲೈಟ್​ ಆಗಲಿದೆ ಎಂದು ಹೇಳಲಾಗುತ್ತಿದೆ. ‘ಸ್ಟಾರ್ ಪ್ಲಸ್‍’ ಚಾನೆಲ್​ನಲ್ಲಿ ಪ್ರಸಾರವಾದ ‘ಮಹಾಭಾರತ’ ಸೀರಿಯಲ್​ಗೆ ನಿರ್ದೇಶನ ಮಾಡಿದ್ದ ಮುಕೇಶ್‍ ಕುಮಾರ್ ಸಿಂಗ್‍ ಅವರು ಈಗ ‘ಕಣ್ಣಪ್ಪ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಮೋಹನ್‍ ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದ ಶೂಟಿಂಗ್​ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಆರಂಭ ಆಗಿದೆ. ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಸಿನಿಮಾ ಅಕ್ಟೋಬರ್​ 19ರಂದು ಬಿಡುಗಡೆ ಆಗಲಿದೆ. ಇದಲ್ಲದೇ, ಧನುಷ್ ನಟನೆಯ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರಿಗೆ ಒಂದು ಮುಖ್ಯವಾದ ಪಾತ್ರವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್