Bhairavi Vaidya: ಕ್ಯಾನ್ಸರ್ನಿಂದ ಹಿರಿಯ ಕಿರುತೆರೆ ನಟಿ ಭೈರವಿ ವೈದ್ಯ ನಿಧನ
ಭೈರವಿ ಕಳೆದ 45 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗುಜರಾತಿ, ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದರು. ಅವರ ಪಾತ್ರಗಳು ಗಮನ ಸೆಳೆದಿವೆ. ಅವರ ಪಾತ್ರಗಳನ್ನು ಅಭಿಮಾನಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.
ಹಿರಿಯ ನಟಿ ಭೈರವಿ ವೈದ್ಯ ಅವರು ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದರು. ಕಳೆದ ಆರು ತಿಂಗಳಿಂದ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಸಲ್ಮಾನ್ ಖಾನ್ (Salman Khan) ನಟನೆಯ ‘ಚೋರಿ ಚೋರಿ ಚುಪ್ಕೆ ಚುಪ್ಕೆ’, ಐಶ್ವರ್ಯಾ ರೈ ನಟನೆಯ ‘ತಾಲ್’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಭೈರವಿ ಅವರ ಮಗಳು ಜಾನಕಿ ವೈದ್ಯ ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ ಜಾನಕಿ. ಭಾವನಾತ್ಮಕವಾಗಿ ಅವರು ಬರೆದುಕೊಂಡಿದ್ದಾರೆ. ‘ನೀನು ನನ್ನ ಪಾಲಿಗೆ ಅಮ್ಮ ಜೊತೆ ಎಲ್ಲವೂ. ನೀವು ಕಲರ್ಫುಲ್, ಫಿಯರ್ಲೆಸ್. ನೀವ ಮಕ್ಕಳನ್ನು ಬೆಳೆಸುವುದರ ಜೊತೆಗೆ ಕನಸನ್ನು ಈಡೇರಿಸುವ ರೀತಿ ಮಾಡಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಭೈರವಿ ನಿಧನಕ್ಕೆ ಚಿತ್ರರಂಗದ ಅನೇಕರು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಪೋಸ್ಟ್ ಮಾಡಿದ್ದಾರೆ.
ಭೈರವಿ ಕಳೆದ 45 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗುಜರಾತಿ, ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದರು. ಅವರ ಪಾತ್ರಗಳು ಗಮನ ಸೆಳೆದಿವೆ. ಅವರ ಪಾತ್ರಗಳನ್ನು ಅಭಿಮಾನಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.
CINTAA expresses its condolences on the demise of Bhairavi Vaidya (Member since 2005) .#condolence #condolencias #restinpeace #rip #Bhairavivaidya #condolencemessage #heartfelt #cintaa pic.twitter.com/Bkdi797IvU
— CINTAA_Official (@CintaaOfficial) October 8, 2023
ಇದನ್ನೂ ಓದಿ: ಅನಿಮಲ್ ಹೊಸ ಪೋಸ್ಟರ್ ಬಿಡುಗಡೆ: ಖಡಕ್ ಲುಕ್ನಲ್ಲಿ ಅನಿಲ್ ಕಪೂರ್
ಅನಿಲ್ ಕಪೂರ್, ಐಶ್ವರ್ಯಾ ರೈ, ಅಕ್ಷಯ್ ಖನ್ನಾ ಅಭಿನಯದ ‘ತಾಲ್’ ಸಿನಿಮಾದ ಮೂಲಕ ಭೈರವಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಪಾತ್ರವನ್ನು ಪ್ರಶಂಸಿಸಲಾಯಿತು. ಸಲ್ಮಾನ್ ಖಾನ್ ಅಭಿನಯದ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಚಿತ್ರದಲ್ಲಿ ಭೈರವಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಪ್ರಸಿದ್ಧ ರಂಗಭೂಮಿ ಕಲಾವಿದೆ. ಅವರು ಹಲವು ನಾಟಕಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ