ಭಾರತದ ವೀಕ್ಷಕರು ನೆಟ್​ಫ್ಲಿಕ್ಸ್​ನಲ್ಲಿ ಅತಿ ಹೆಚ್ಚು ನೋಡಿದ ಸಿನಿಮಾ ಯಾವುದು? ಇದರಲ್ಲೂ ಶಾರುಖ್​ ಮೇಲುಗೈ

ಒಟಿಟಿಯಲ್ಲಿ ತಮ್ಮ ಸಿನಿಮಾಗೆ ಜನರು ಈ ಪರಿ ಪ್ರೀತಿ ತೋರಿಸಿರುವುದಕ್ಕೆ ಶಾರುಖ್​ ಖಾನ್​ ಅವರಿಗೆ ಖುಷಿ ಆಗಿದೆ. ಅದಕ್ಕಾಗಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಇದು ಬರೀ ಸಿನಿಮಾ ಅಲ್ಲ. ಕಥೆ ಹೇಳುವುದರ ಸೆಲೆಬ್ರೇಷನ್​, ಸಿನಿಮಾದ ಶಕ್ತಿ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ ಎಂದು ವರದಿ ಆಗಿದೆ.

ಭಾರತದ ವೀಕ್ಷಕರು ನೆಟ್​ಫ್ಲಿಕ್ಸ್​ನಲ್ಲಿ ಅತಿ ಹೆಚ್ಚು ನೋಡಿದ ಸಿನಿಮಾ ಯಾವುದು? ಇದರಲ್ಲೂ ಶಾರುಖ್​ ಮೇಲುಗೈ
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on:Nov 22, 2023 | 10:32 AM

ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ 2023ರ ವರ್ಷ ಸಖತ್​ ಸ್ಪೆಷಲ್​. ಈ ವರ್ಷ ಅವರ ಎರಡು ಸಿನಿಮಾಗಳು ಬ್ಲಾಕ್​ ಬಸ್ಟರ್​ ಆಗಿವೆ. ವರ್ಷದ ಆರಂಭದಲ್ಲಿಯೇ ‘ಪಠಾಣ್​’ ಸಿನಿಮಾ ಅಬ್ಬರಿಸಿತು. ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾದ ಜವಾನ್​’ ಸಿನಿಮಾ (Jawan Movie) ಕೂಡ ಕಮ್ಮಿಯೇನಲ್ಲ. ಆ ಚಿತ್ರವೂ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರಿಕೊಂಡಿತು. ವಿಶೇಷ ಏನೆಂದರೆ ಶಾರುಖ್​ ಖಾನ್​ ಅವರು ಕೇವಲ ಚಿತ್ರಮಂದಿರ, ಮಲ್ಟಿಪ್ಲೆಕ್ಸ್​ ಮಾತ್ರವಲ್ಲದೇ ಒಟಿಟಿಯಲ್ಲೂ ತಾವೇ ಕಿಂಗ್​ ಎಂಬುದನ್ನು ಈಗ ಸಾಬೀತು ಮಾಡಿದ್ದಾರೆ. ನೆಟ್​ಫ್ಲಿಕ್ಸ್​ (Netflix) ಒಟಿಟಿಯಲ್ಲಿ ಅವರ ‘ಜವಾನ್​’ ಸಿನಿಮಾ ಅತಿ ಹೆಚ್ಚು ವೀಕ್ಷಣೆ ಕಂಡಿದೆ.

ಚಿತ್ರಮಂದಿರದಲ್ಲಿ ‘ಜವಾನ್​’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಿತ್ತು. ಬಳಿಕ ಶಾರುಖ್​ ಖಾನ್​ ಅವರ ಬರ್ತ್​ಡೇ ಪ್ರಯುಕ್ತ ನವೆಂಬರ್​ 2ರಂದು ಈ ಸಿನಿಮಾ ಒಟಿಟಿಗೆ ಕಾಲಿಟ್ಟಿತು. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿ ಎರಡು ವಾರ ಕಳೆಯುವುದರೊಳಗೆ ಈ ಸಿನಿಮಾ ದಾಖಲೆ ಬರೆದಿದೆ. ಎರಡು ವಾರದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್​’ ಪಾತ್ರವಾಗಿದೆ. ಈ ಸುದ್ದಿಯನ್ನು ಸ್ವತಃ ನೆಟ್​ಫ್ಲಿಕ್ಸ್​ ಸಂಸ್ಥೆಯೇ ಹಂಚಿಕೊಂಡಿದೆ. ಶಾರುಖ್​ ಖಾನ್​ ಅವರ ಹವಾ ಹೇಗಿದೆ ಎಂಬುದಕ್ಕೆ ಇದೇ ಸಾಕ್ಷಿ.

ಇದನ್ನೂ ಓದಿ: ದಾಖಲೆ ಬರೆದ ಡಂಕಿ; ಸಿನಿಮಾ ಟೀಸರ್: ಮತ್ತೊಂದು ಬ್ಲಾಕ್​ ಬಸ್ಟರ್​ಗೆ ಶಾರುಖ್ ಖಾನ್ ರೆಡಿ

ಒಟಿಟಿಯಲ್ಲಿ ತಮ್ಮ ಸಿನಿಮಾಗೆ ಜನರು ಈ ಪರಿ ಪ್ರೀತಿ ತೋರಿಸಿರುವುದಕ್ಕೆ ಶಾರುಖ್​ ಖಾನ್​ ಅವರಿಗೆ ಖುಷಿ ಆಗಿದೆ. ಅದಕ್ಕಾಗಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಇದು ಬರೀ ಸಿನಿಮಾ ಅಲ್ಲ. ಕಥೆ ಹೇಳುವುದರ ಸೆಲೆಬ್ರೇಷನ್​, ಸಿನಿಮಾದ ಶಕ್ತಿ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ ಎಂದು ವರದಿ ಆಗಿದೆ. ಹಿಂದಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್​ ಆದ ‘ಜವಾನ್​’ ಸಿನಿಮಾಗೆ ಕಾಲಿವುಡ್​ ನಿರ್ದೇಶಕ ಅಟ್ಲಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಶಾರುಖ್​ ಖಾನ್​ ಜೊತೆ ನಯನತರಾ, ವಿಜಯ್​ ಸೇತುಪತಿ, ಪ್ರಿಯಾಮಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳ ಯಶಸ್ಸಿನಿಂದ ಶಾರುಖ್​ ಖಾನ್ ಅವರ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ಟೀಸರ್​ನಿಂದ ಕುತೂಹಲ ಮೂಡಿಸಲಾಗಿದೆ. ಹಾಡುಗಳ ಮೂಲಕವೂ ಗಮನ ಸೆಳೆಯುವ ಪ್ರಯತ್ನದಲ್ಲಿ ಚಿತ್ರತಂಡ ನಿರತವಾಗಿದೆ. ಈ ಚಿತ್ರಕ್ಕೆ ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಮಾತ್ರವಲ್ಲದೇ ವಿಕ್ಕಿ ಕೌಶಲ್​, ತಾಪ್ಸೀ ಪನ್ನು ಮುಂತಾದವರು ಸಹ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:31 am, Wed, 22 November 23