ಇಟಲಿಯಲ್ಲಿ ಪ್ರಭಾಸ್ ಹೊಂದಿದ್ದಾರೆ ಐಷಾರಾಮಿ ವಿಲ್ಲಾ; ಇದರಿಂದ ಬರೋ ಆದಾಯಯ ಎಷ್ಟು?

ಪ್ರಭಾಸ್ ಅವರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರಿಗೆ ಗೆಲುವು ಸಿಗುತ್ತಿಲ್ಲ. ಪ್ರಭಾಸ್ ಅವರು ಸದ್ಯ ‘ಸಲಾರ್’ ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅವರ ಜನ್ಮದಿನದ ವೇಳೆ ಇಟಲಿ ವಿಲ್ಲಾ ಬಗ್ಗೆ ಚರ್ಚೆ ಆಗುತ್ತಿದೆ.

ಇಟಲಿಯಲ್ಲಿ ಪ್ರಭಾಸ್ ಹೊಂದಿದ್ದಾರೆ ಐಷಾರಾಮಿ ವಿಲ್ಲಾ; ಇದರಿಂದ ಬರೋ ಆದಾಯಯ ಎಷ್ಟು?
ಪ್ರಭಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 23, 2023 | 3:17 PM

ಪ್ರಭಾಸ್ ಅವರಿಗೆ ಇಂದು (ಅಕ್ಟೋಬರ್ 23) ಜನ್ಮದಿನದ ಸಂಭ್ರಮ. ಅವರಿಗೆ ಅಭಿಮಾನಿಗಳು ವಿಶಸ್ ತಿಳಿಸಿದ್ದಾರೆ. ‘ಬಾಹುಬಲಿ 2’ (Bahubali 2) ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ಅವರಿಗೆ ಬಾಲಿವುಡ್​ನಿಂದಲೂ ಆಫರ್ ಬರುತ್ತಿವೆ. ಅವರು ಎಲ್ಲವನ್ನೂ ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದಾಗ್ಯೂ ಅವರ ಲೆಕ್ಕಾಚಾರ ತಪ್ಪುತ್ತಿದೆ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಪ್ರಭಾಸ್ ಅವರು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್, ಮುಂಬೈನಲ್ಲಿ ಮನೆ ಹೊಂದಿದ್ದಾರೆ. ವಿಶೇಷ ಎಂದರೆ ಅವರು ದೂರದ ಇಟಲಿಯಲ್ಲಿ ಐಷಾರಾಮಿ ವಿಲ್ಲಾದ ಒಡೆಯರಾಗಿದ್ದಾರೆ. ಪ್ರಭಾಸ್​ಗೆ ಇದರಿಂದ ಭರ್ಜರಿ ಆದಾಯ ಬರುತ್ತಿದೆ. ಈ ಮೊತ್ತ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ.

ಪ್ರಭಾಸ್ ಅವರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರಿಗೆ ಗೆಲುವು ಸಿಗುತ್ತಿಲ್ಲ. ‘ಸಾಹೋ’, ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ರಿಲೀಸ್​ ಆಗಿ ಸೋತಿವೆ. ಪ್ರಭಾಸ್ ಅವರು ಸದ್ಯ ‘ಸಲಾರ್’ ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅವರ ಜನ್ಮದಿನದ ವೇಳೆ ಇಟಲಿ ವಿಲ್ಲಾ ಬಗ್ಗೆ ಚರ್ಚೆ ಆಗುತ್ತಿದೆ.

ಸೆಲೆಬ್ರಿಟಿಗಳು ಸಮಯ ಸಿಕ್ಕಾಗ ವಿದೇಶ ಪ್ರಯಾಣ ಮಾಡುತ್ತಾರೆ. ಥೈಲೆಂಡ್ ಸೇರಿ ಅನೇಕ ಸ್ಥಳಗಳು ಸೆಲೆಬ್ರಿಟಿಗಳ ಹಾಟ್ ಫೇವರಿಟ್. ಅಲ್ಲಿ ಪದೇ ಪದೇ ಭೇಟಿ ನೀಡುತ್ತಾರೆ. ದುಬೈಗೆ ಪದೇಪದೇ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಬಾಲಿವುಡ್​ ಕಲಾವಿದರು ಅಲ್ಲಿ ಮನೆ ಖರೀದಿಸಿದ್ದಾರೆ. ಅದೇ ರೀತಿ ಪ್ರಭಾಸ್ ಕೂಡ ಇಟಲಿಯಲ್ಲಿ ವಿಲ್ಲಾ ಹೊಂದಿದ್ದಾರೆ. ಇದು ಸಾಕಷ್ಟು ಐಷಾರಾಮಿ ಆಗಿದೆ. ಈ ವಿಲ್ಲಾದಿಂದ ತಿಂಗಳಿಗೆ ಪ್ರಭಾಸ್ ಅವರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ.

ಪ್ರಭಾಸ್ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಹಣ ಹೂಡಿಕೆ ಮಾಡಿದ್ದಾರೆ. ತಮ್ಮ ಸೇವಿಂಗ್ಸ್ ಹಣದಿಂದ ಅವರು ಇಟಲಿಯಲ್ಲಿ ವಿಲ್ಲಾ ಖರೀದಿ ಮಾಡಿದ್ದರು. ಇದನ್ನು ಅವರು 2016-17ರ ಸಂದರ್ಭದಲ್ಲಿ ಖರೀದಿ ಮಾಡಿದ್ದರಂತೆ. ಶೂಟಿಂಗ್​ನಿಂದ ಬ್ರೇಕ್ ಪಡೆದ ಸಂದರ್ಭದಲ್ಲಿ ಅವರು ಇಟಲಿಗೆ ತೆರಳುತ್ತಾರೆ. ಆಗ ಅವರು ಇಲ್ಲಿ ಉಳಿದುಕೊಳ್ಳುತ್ತಾರಂತೆ.

ಹಾಗಾದರೆ ಈ ವಿಲ್ಲಾದಿಂದ ಅವರಿಗೆ ಹಣ ಬರೋದು ಹೇಗೆ? ಅದಕ್ಕೂ ಉತ್ತರ ಇದೆ. ಪ್ರಭಾಸ್ ಅವರು ಈ ವಿಲ್ಲಾನ ಬಾಡಿಗೆ ಬಿಟ್ಟಿದ್ದಾರೆ. ಅಲ್ಲಿಗೆ ಬರುವ ಪ್ರವಾಸಿಗರಿಗೆ ಈ ವಿಲ್ಲಾನ ಬಾಡಿಗೆಗೆ ನೀಡಲಾಗುತ್ತದೆ. ಇದಕ್ಕಾಗಿ ಅವರು ದೊಡ್ಡ ಮೊತ್ತದ ಚಾರ್ಜ್ ಮಾಡುತ್ತಾರೆ. ತಿಂಗಳಿಗೆ ಸರಾಸರಿ 40 ಲಕ್ಷ ರೂಪಾಯಿ ಆದಾಯ ಹರಿದುಬರುತ್ತಿದೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಬರ್ತ್​ಡೇ ಬಾಯ್ ಪ್ರಭಾಸ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?

ಸದ್ಯ ಪ್ರಭಾಸ್ ಅವರು ಸಾಲು ಸಾಲು ಸೋಲು ಕಂಡಿದ್ದಾರೆ. ‘ಆದಿಪುರುಷ್’ ಸೋಲಿನ ಬಳಿಕ ರಿಲೀಸ್ ಆಗುತ್ತಿರುವುದು ‘ಸಲಾರ್’ ಚಿತ್ರ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಡಿಸೆಂಬರ್ 22ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಜೊತೆ ಈ ಚಿತ್ರ ಸ್ಪರ್ಧೆ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:43 pm, Mon, 23 October 23