ಬರ್ತ್​ಡೇ ಬಾಯ್ ಪ್ರಭಾಸ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?

Prabhas Birthday: ಪ್ರಭಾಸ್ ಅವರ ನಟನೆಯ ‘ಸಾಹೋ’ ಸಿನಿಮಾ ಸೋತಿತು. ‘ರಾಧೆ ಶ್ಯಾಮ್’ ಸಿನಿಮಾ ಹೇಳ ಹೆಸರಿಲ್ಲದೆ ಹೋಯಿತು. ‘ಆದಿಪುರುಷ್’ ಸಿನಿಮಾದಿಂದ ಪ್ರಭಾಸ್ ಹೀನಾಯವಾಗಿ ಸೋತರು. ಈಗ ಪ್ರಭಾಸ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.  

ಬರ್ತ್​ಡೇ ಬಾಯ್ ಪ್ರಭಾಸ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?
ಪ್ರಭಾಸ್​
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 23, 2023 | 10:59 AM

ಪ್ರಭಾಸ್ (Prabhas) ಅವರಿಗೆ ಇಂದು (ಅಕ್ಟೋಬರ್ 22) ಜನ್ಮದಿನದ ಸಂಭ್ರಮ. ಈ ವೇಳೆ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಫೋಟೋ ಹಾಕಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅವರ ಅಭಿಮಾನಿ ಸಂಘಗಗಳಿಂದ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಪ್ರಭಾಸ್ ಅವರ ‘ಆದಿಪುರುಷ್’ ಸಿನಿಮಾ ಸೋತ ಹೊರತಾಗಿಯೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಪ್ರಭಾಸ್ ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳ ಸಾಲಿನಲ್ಲಿ ಅವರಿಗೂ ಸ್ಥಾನ ಇದೆ.

ಪ್ರಭಾಸ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪ್ರಭಾಸ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್​ ಆದರು. ಆದರೆ, ಆ ಬಳಿಕ ಅವರಿಗೆ ದೊಡ್ಡ ಗೆಲುವು ಸಿಗಲೇ ಇಲ್ಲ. ಪ್ರಭಾಸ್ ಅವರ ನಟನೆಯ ‘ಸಾಹೋ’ ಸಿನಿಮಾ ಸೋತಿತು. ‘ರಾಧೆ ಶ್ಯಾಮ್’ ಸಿನಿಮಾ ಹೇಳ ಹೆಸರಿಲ್ಲದೆ ಹೋಯಿತು. ‘ಆದಿಪುರುಷ್’ ಸಿನಿಮಾದಿಂದ ಪ್ರಭಾಸ್ ಹೀನಾಯವಾಗಿ ಸೋತರು. ಈಗ ಪ್ರಭಾಸ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

2002ರಲ್ಲಿ ರಿಲೀಸ್ ಆದ ‘ಈಶ್ವರ್’ ಸಿನಿಮಾದಿಂದ ಬಣ್ಣದ ಬದುಕು ಆರಂಭಿಸಿದರು ಪ್ರಭಾಸ್. ಅವರು ಚಿತ್ರರಂಗಕ್ಕೆ ಕಾಲಿಟ್ಟು 21 ವರ್ಷದ ಮೇಲಾಗಿದೆ. ಪ್ರಭಾಸ್ ಜನಿಸಿದ್ದು 1979ರ ಅಕ್ಟೋಬರ್ 23ರಂದು. ಅವರು ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ ಲಿಸ್ಟ್​ನಲ್ಲಿ ಮೂರು ಬಾರಿ ಸ್ಥಾನ ಪಡೆದಿದ್ದಾರೆ. ಪ್ರಭಾಸ್ ಅವರ ಆಸ್ತಿ 237 ಕೋಟಿ ರೂಪಾಯಿ ಇದೆ ಎನ್ನಲಾಗಿದೆ.

‘ಬಾಹುಬಲಿ 2’ ಬಳಿಕ ಪ್ರಭಾಸ್ ಸಂಭಾವನೆ ಹೆಚ್ಚಿಸಿಕೊಂಡರು. ‘ಆದಿಪುರುಷ್’ ಚಿತ್ರಕ್ಕೆ ಇವರು 150 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಅವರು ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ಮನೆ ಹೊಂದಿದ್ದಾರೆ. ಈ ನಿವಾಸದ ಮೌಲ್ಯ 60 ಕೋಟಿ ರೂಪಾಯಿ ಮೇಲಿದೆ ಎನ್ನಲಾಗಿದೆ. ಸ್ವಿಮ್ಮಿಂಗ್ ಪೂಲ್, ಜಿಮ್, ಥಿಯೇಟರ್ ಇದೆ ಎನ್ನಲಾಗಿದೆ.

ಹೈದರಾಬಾದ್ ಮಾತ್ರವಲ್ಲದೆ, ಮುಂಬೈನಲ್ಲೂ ಮನೆ ಹೊಂದಿದ್ದಾರೆ ಪ್ರಭಾಸ್. ಕೆಲವು ವರದಿಗಳ ಪ್ರಕಾರ ಅವರು ಇಟಲಿಯಲ್ಲಿ ಭವ್ಯ ಬಂಗಲೆ ಹೊಂದಿದ್ದಾರಂತೆ. ಪ್ರತಿ ತಿಂಗಳು ಇದರಿಂದ 40 ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರಭಾಸ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ನಿರಾಸೆ? ಸಿಗಬೇಕಿದೆ ಉತ್ತರ

ಪ್ರಭಾಸ್ ಅವರು ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ರೇಂಜ್ ರೋವರ್ ಸ್ಪೋರ್ಟ್ಸ್ ಕಾರು ಅವರ ಬಳಿ ಇದೆ. ಇದರ ಬೆಲೆ 1 ಕೋಟಿ ರೂಪಾಯಿ.  ಆಡಿ ಎ6 ಕಾರಿನ ಒಡೆಯ ಪ್ರಭಾಸ್. ಇದರ ಬೆಲೆ 60 ಲಕ್ಷ ರೂಪಾಯಿ ಇದೆ. ಎರಡು ಕೋಟಿ ರೂಪಾಯಿ ಬೆಲೆಯ ಬಿಎಂಡಬ್ಲ್ಯೂ ಎಕ್ಸ್​ 7, ಎರಡು ಕೋಟಿ ಬೆಲೆಯ ಬೆಂಜ್ ಎಸ್ ಕ್ಲಾಸ್, ಒಂದು ಕೋಟಿ ರೂಪಾಯಿಯ ಜಾಗ್ವಾರ್ ಎಕ್ಸ್​​ಜೆಎಲ್, 8 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರನ್ನು ಪ್ರಭಾಸ್ ಹೊಂದಿದ್ದಾರೆ.

ಪ್ರಭಾಸ್ ಪ್ರಾಜೆಕ್ಟ್ಸ್

ಪ್ರಭಾಸ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್  ಆಗಲಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ 2024ರಲ್ಲಿ ರಿಲೀಸ್ ಆಗಿದ್ದು, ಪ್ರಭಾಸ್ ಅವರು ಕಲ್ಕಿ ಅವತಾರ ತಾಳಿದ್ದಾರೆ. ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಇದಲ್ಲದೆ, ಇನ್ನೂ ಕೆಲವು ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:28 am, Mon, 23 October 23