ಪ್ರಭಾಸ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ನಿರಾಸೆ? ಸಿಗಬೇಕಿದೆ ಉತ್ತರ

Prabhas Birthday: ನಟ ಪ್ರಭಾಸ್ ಹುಟ್ಟುಹಬ್ಬದ ದಿನ ಅವರ ಸಿನಿಮಾಗಳ ಕುರಿತ ಅಪ್​ಡೇಟ್​ಗಳು, ಅವರ ಹೊಸ ಸಿನಿಮಾಗಳ ಟೀಸರ್, ಟ್ರೈಲರ್​ಗಳು ಬಿಡುಗಡೆ ಆಗಲಿವೆ ಎಂಬ ನಿರೀಕ್ಷೆಯನ್ನು ಅಭಿಮಾನಿಗಳು ಇರಿಸಿಕೊಂಡಿದ್ದರು. ಆದರೆ ಅದೆಲ್ಲ ಸುಳ್ಳಾಗುವ ಸಾಧ್ಯತೆ ಇದೆ.

ಪ್ರಭಾಸ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ನಿರಾಸೆ? ಸಿಗಬೇಕಿದೆ ಉತ್ತರ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 22, 2023 | 8:32 PM

ಸೋಮವಾರ (ಅಕ್ಟೋಬರ್ 23) ಪ್ರಭಾಸ್ (Prabhas) ಜನ್ಮದಿನ. ಈ ವಿಶೇಷ ದಿನವನ್ನು ಆಚರಿಸಲು ಫ್ಯಾನ್ಸ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಬರ್ತ್ಡೇ ದಿನ ಸಾಮಾನ್ಯವಾಗಿ ಸಿನಿಮಾ ತಂಡಗಳಿಂದ ಹೊಸ ಹೊಸ ಅಪ್ಡೇಟ್ ಸಿಗುತ್ತದೆ. ಪ್ರಭಾಸ್ ಅವರ ಕೆಲವು ಸಿನಿಮಾಗಳು ಈಗಾಗಲೇ ಅನೌನ್ಸ್ ಆಗಿವೆ. ಇನ್ನೂ ಕೆಲವು ಸಿನಿಮಾಗಳು ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ಎಲ್ಲಾ ಸಿನಿಮಾಗಳ ಬಗ್ಗೆ ಇಂದು ಮಾಹಿತಿ ಸಿಗುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ಅಭಿಮಾನಿಗಳಿಗೆ ನಿರಾಸೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಡಿಸೆಂಬರ್ 22ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಬರ್ತ್ಡೇ ಪ್ರಯುಕ್ತ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು. ಆದರೆ, ಚಿತ್ರತಂಡದಿಂದ ಆ ರೀತಿಯ ಯಾವುದೇ ಮಾಹಿತಿಯನ್ನು ತಂಡದವರು ನೀಡಿಲ್ಲ. ಇಂದು ಟ್ರೇಲರ್ ರಿಲೀಸ್ ಆಗುವುದು ಕೂಡ ಅನುಮಾನವೇ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲೀಸ್ಗೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಇಷ್ಟು ಬೇಗ ಟ್ರೇಲರ್ ರಿಲೀಸ್ ಮಾಡಿದರೆ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಲಾಭ ಆಗುವುದಿಲ್ಲ.

ಇದನ್ನೂ ಓದಿ:ಪ್ರಭಾಸ್ ಜೊತೆ ಲೋಕೇಶ್ ಕನಗರಾಜ್ ಸಿನಿಮಾ ಖಾತ್ರಿ: ಇದು ಎಲ್​ಸಿಯು ಭಾಗವಾ?

ಇನ್ನು, ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ಈಗಾಗಲೇ ರಿಲೀಸ್ ಆಗಿದೆ. ಹೀಗಾಗಿ, ಈ ಚಿತ್ರದಿಂದ ಇಂದು ಯಾವುದೇ ಮಾಹಿತಿ ಸಿಗೋದು ಕೂಡ ಅನುಮಾನವೇ. ‘ಸಲಾರ್’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾಗಳಿಂದ ಪೋಸ್ಟರ್ ನಿರೀಕ್ಷೆ ಮಾಡಬಹುದು ಅಷ್ಟೇ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು.

ಮಾರುತಿ ಅವರು ‘ರಾಜಾ ಡಿಲಕ್ಸ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಪ್ರಭಾಸ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಘೋಷಣೆ ಆಗಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿದೆ. ಬರ್ತ್ಡೇ ದಿನ ಪ್ರಭಾಸ್ ಅಭಿಮಾನಿಗಳಿಗೆ ಯಾವುದೇ ಸರ್ಪ್ರೈಸ್ ಸಿಗೋ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ