ಪ್ರಭಾಸ್ ಜೊತೆ ಲೋಕೇಶ್ ಕನಗರಾಜ್ ಸಿನಿಮಾ ಖಾತ್ರಿ: ಇದು ಎಲ್​ಸಿಯು ಭಾಗವಾ?

Prabhas-Lokesh: ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್, ಪ್ರಭಾಸ್ ಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವಾಗ? ಏನು ಕತೆ?

ಪ್ರಭಾಸ್ ಜೊತೆ ಲೋಕೇಶ್ ಕನಗರಾಜ್ ಸಿನಿಮಾ ಖಾತ್ರಿ: ಇದು ಎಲ್​ಸಿಯು ಭಾಗವಾ?
Follow us
ಮಂಜುನಾಥ ಸಿ.
|

Updated on: Oct 08, 2023 | 5:29 PM

ಲೋಕೇಶ್ ಕನಗರಾಜ್ (Lokesh Kanagaraj), ತಮ್ಮದೇ ಆದ ಎಲ್​ಸಿಯು (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಒಂದನ್ನು ಸೃಷ್ಟಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳು, ಕತೆಗಳು ಒಂದಕ್ಕೊಂದು ಸಂಬಂಧ ಇರುವಂತೆ ನೋಡಿಕೊಳ್ಳುತ್ತಾರೆ. ‘ಖೈದಿ’ ಗೂ ‘ವಿಕ್ರಂ’ ಸಿನಿಮಾದ ಕತೆಗೂ ಲಿಂಕ್ ಇದೆ. ಅಂತೆಯೇ ‘ವಿಕ್ರಂ’ ಸಿನಿಮಾಕ್ಕೂ ಇದೀಗ ತೆರೆಗೆ ಬರಲಿರುವ ‘ಲಿಯೋ’ ಸಿನಿಮಾಕ್ಕೂ ಸಂಬಂಧ ಇರಲಿದೆ ಎನ್ನಲಾಗುತ್ತಿದೆ. ಇದರ ನಡುವೆ ‘ಖೈದಿ 2’, ‘ವಿಕ್ರಂ 2’ ಸಿನಿಮಾಗಳನ್ನು ಘೋಷಿಸಲಾಗಿದ್ದು ಆ ಸಿನಿಮಾಗಳು ಸಹ ಪರಸ್ಪರ ಸಂಬಂಧ ಹೊಂದಿರಲಿವೆಯಂತೆ. ಇದೀಗ ಪ್ರಭಾಸ್ ಜೊತೆಗೆ ಹೊಸ ಸಿನಿಮಾ ಮಾಡಲಿದ್ದು, ಅದೂ ಸಹ ಎಲ್​ಸಿಯು ಭಾಗವಾಗಿರಲಿದೆಯೇ ಎಂಬ ಅನುಮಾನ ಅಭಿಮಾನಿಗಳದ್ದು.

ವಿಜಯ್ ನಟನೆಯ ‘ಲಿಯೋ’ ಸಿನಿಮಾ ನಿರ್ದೇಶಿಸಿರುವ ಲೋಕೇಶ್ ಕನಗರಾಜ್, ಸಿನಿಮಾದ ಟ್ರೈಲರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದಾರೆ. ಸಿನಿಮಾವು ಅಕ್ಟೋಬರ್ 19ರಂದು ತೆರೆಗೆ ಬರುತ್ತಿದೆ. ಇವುಗಳ ನಡುವೆ ಲೋಕೇಶ್, ನಟ ಪ್ರಭಾಸ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಸ್ವತಃ ಲೋಕೇಶ್ ಕನಗರಾಜ್ ಖಾತ್ರಿಪಡಿಸಿದ್ದಾರೆ.

ಪ್ರಭಾಸ್​ಗಾಗಿ ಲೋಕೇಶ್ ಕನಗರಾಜ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಆದರೆ ಆ ಸಿನಿಮಾ ಯಾವಾಗ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಖಾತ್ರಿಪಡಿಸಿಲ್ಲ. ಆದರೆ ಪ್ರಭಾಸ್ ಜೊತೆಗೆ ಸಿನಿಮಾ ಮಾಡುವ ಯೋಜನೆಯಂತೂ ಇದೆ ಎಂದಿದ್ದಾರೆ. ಅಸಲಿಗೆ, ಲೋಕೇಶ್ ಹಾಗೂ ಪ್ರಭಾಸ್ ಇಬ್ಬರೂ ಪ್ರಸ್ತುತ ಫ್ರೀ ಆಗಿಲ್ಲ. ಹಾಗಾಗಿ ಪ್ರಭಾಸ್-ಲೋಕೇಶ್​ರ ಸಿನಿಮಾ ಬಹಳ ತಡವಾಗುವುದು ಪಕ್ಕಾ.

ಇದನ್ನೂ ಓದಿ:ಪ್ರಭಾಸ್ ಕೆನ್ನೆಗೆ ಬಾರಿಸಿ ಓಡಿ ಹೋದ ಹುಡುಗಿ; ವೈರಲ್ ಆಯ್ತು ವಿಡಿಯೋ

ಲೋಕೇಶ್ ನಿರ್ದೇಶನದ ‘ಲಿಯೋ’ ಸಿನಿಮಾ ಪ್ರಸ್ತುತ ತೆರೆಗೆ ಬರಲಿದೆ. ಆ ಸಿನಿಮಾದ ಬಳಿಕ ರಜನೀಕಾಂತ್​ರ ಹೊಸ ಸಿನಿಮಾವನ್ನು ಲೋಕೇಶ್ ನಿರ್ದೇಶನ ಮಾಡಲಿದ್ದಾರೆ. ಅದರ ಬಳಿಕ ‘ವಿಕ್ರಂ 2’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಕ್ಕೂ ಮುನ್ನಾ ‘ಖೈದಿ 2’ ಸಿನಿಮಾ ನಿರ್ದೇಶನ ಸಹ ಮಾಡಬೇಕಿದೆ. ಹಾಗಾಗಿ ಲೋಕೇಶ್ ಮುಂದಿನ ಮೂರು ವರ್ಷಗಳ ವರೆಗೆ ಬ್ಯುಸಿಯಾಗಿದ್ದಾರೆ.

ಇನ್ನು ಪ್ರಭಾಸ್ ‘ಸಲಾರ್’ ಸಿನಿಮಾವನ್ನು ಇತ್ತೀಚೆಗಷ್ಟೆ ಮುಗಿಸಿದ್ದಾರೆ. ಇದೀಗ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಮಾರುತಿ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ಹಿಂದಿಯ ನಿರ್ದೇಶಕನೊಟ್ಟಿಗೆ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಲ್ಲಿಗೆ ಬರೋಬ್ಬರಿ ಮೂರು ಸಿನಿಮಾದ ಬಳಿಕವಷ್ಟೆ ಪ್ರಭಾಸ್ ತುಸು ಫ್ರೀ ಆಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ