ಪ್ರಭಾಸ್ ಕೆನ್ನೆಗೆ ಬಾರಿಸಿ ಓಡಿ ಹೋದ ಹುಡುಗಿ; ವೈರಲ್ ಆಯ್ತು ವಿಡಿಯೋ

ಪ್ರಭಾಸ್ ಆಗತಾನೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನ ನೋಡಿದ ಯುವತಿ ಎಗ್ಸೈಟ್ ಆಗಿದ್ದಾರೆ. ಪ್ರಭಾಸ್ ಜೊತೆ ಅವರು ಫೋಟೋ ಮತ್ತು ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ನಂತರ ಪ್ರಭಾಸ್ ಕೆನ್ನೆಗೆ ಬಾರಿಸಿ ಓಡಿ ಹೋಗಿದ್ದಾರೆ. ಇದೆಲ್ಲವನ್ನೂ ಅವರು ಮಾಡಿದ್ದು ಪ್ರಭಾಸ್ ಮೇಲಿನ ಪ್ರೀತಿಗಾಗಿ.

ಪ್ರಭಾಸ್ ಕೆನ್ನೆಗೆ ಬಾರಿಸಿ ಓಡಿ ಹೋದ ಹುಡುಗಿ; ವೈರಲ್ ಆಯ್ತು ವಿಡಿಯೋ
ಪ್ರಭಾಸ್
Follow us
ರಾಜೇಶ್ ದುಗ್ಗುಮನೆ
|

Updated on:Oct 04, 2023 | 7:47 AM

‘ಬಾಹುಬಲಿ’ (Bahubali Movie) ಸರಣಿಯ ಚಿತ್ರಗಳ ಮೂಲಕ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈಗ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’ ನಂತರ ಬಂದ ‘ಸಾಹೋ’, ‘ರಾಧೆ ಶ್ಯಾಮ್’, ಹಾಗೂ ‘ಆದಿ ಪುರುಷ್’ ಚಿತ್ರಗಳು ಕೊಂಚ ನಿರಾಸೆ ಮೂಡಿಸಿದರೂ ಪ್ರಭಾಸ್ ಕ್ರೇಜ್ ಕಡಿಮೆ ಆಗಿಲ್ಲ. ಅವರು ಕೂಡ ತಮ್ಮ ಅಭಿಮಾನಿಗಳನ್ನು ತುಂಬಾನೇ ಗೌರವಿಸುತ್ತಾರೆ. ಫೋಟೊ ಕೇಳಿ ಬಂದವರಿಗೆ ಅವರು ನೋ ಎಂದವರಲ್ಲ. ಮಹಿಳಾ ಅಭಿಮಾನಿ ಪ್ರಭಾಸ್ (Prabhas) ಅವರ ಕೆನ್ನೆಗೆ ಹೊಡೆದು ಓಡಿ ಹೋದ ವಿಡಿಯೋ ವೈರಲ್ ಆಗಿದೆ.

ಪ್ರಭಾಸ್ ಆಗತಾನೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನ ನೋಡಿದ ಯುವತಿ ಎಗ್ಸೈಟ್ ಆಗಿದ್ದಾರೆ. ಪ್ರಭಾಸ್ ಜೊತೆ ಅವರು ಫೋಟೋ ಮತ್ತು ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ನಂತರ ಪ್ರಭಾಸ್ ಕೆನ್ನೆಗೆ ಬಾರಿಸಿ ಓಡಿ ಹೋಗಿದ್ದಾರೆ. ಇದೆಲ್ಲವನ್ನೂ ಅವರು ಮಾಡಿದ್ದು ಪ್ರಭಾಸ್ ಮೇಲಿನ ಪ್ರೀತಿಗಾಗಿ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಹಾಗಂತ ಇದು ನಿನ್ನೆ ಮೊನ್ನೆ ನಡೆದ ಘಟನೆ ಅಲ್ಲ. ಈ ಘಟನೆ ನಡೆದಿದ್ದು 2019ರಲ್ಲಿ. ಪ್ರಭಾಸ್ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋಗೆ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಆ ಹುಡುಗಿ ಲಕ್ಕಿ ಎಂದು ಅನೇಕರು ಕರೆದಿದ್ದಾರೆ. ಪ್ರಭಾಸ್ ಅವರು ಎಷ್ಟು ಕೂಲ್ ಎಂದು ಅನೇಕರು ಹೊಗಳಿದ್ದಾರೆ.

ಇದನ್ನೂ ಓದಿ: ‘ಡಂಕಿ’ Vs ‘ಸಲಾರ್’ ಫೈಟ್​ಗೆ ಹೆದರಿ ಕಾಲ್ಕಿತ್ತ ಸಿನಿಮಾಗಳು; ಎದ್ದಿದೆ ದೊಡ್ಡ ಅಲೆ

‘ಆದಿಪುರುಷ್’ ಸೋತ ಬಳಿಕ ಪ್ರಭಾಸ್ ‘ಸಲಾರ್’ ಚಿತ್ರದ ಬಗ್ಗೆ ಗಮನ ಹರಿಸಿದರು. ಡಿಸೆಂಬರ್ 22ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಈ ಸಿನಿಮಾಗೆ ಇದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜಗಪತಿ ಬಾಬು, ಟೀನು ಆನಂದ್, ಈಶ್ವರಿ ರಾವ್, ಶ್ರೇಯಾ ರೆಡ್ಡಿ, ಮಧು ಗುರುಸ್ವಾಮಿ, ಜೆಮಿನಿ ಸುರೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬ್ರಸೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ‘ಸಲಾರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:39 am, Wed, 4 October 23

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ