‘ಡಂಕಿ’ Vs ‘ಸಲಾರ್’ ಫೈಟ್​ಗೆ ಹೆದರಿ ಕಾಲ್ಕಿತ್ತ ಸಿನಿಮಾಗಳು; ಎದ್ದಿದೆ ದೊಡ್ಡ ಅಲೆ

ಡಿಸೆಂಬರ್ 15ರಂದು ‘ಯೋಧ’ ಸಿನಿಮಾ ರಿಲೀಸ್ ಆಗಬೇಕಿತ್ತು. ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್ 1ರಂದು ‘ಅನಿಮಲ್’ ರಿಲೀಸ್ ಆಗಲಿದೆ. ಡಿಸೆಂಬರ್ 22ರಂದು ದೊಡ್ಡಬಜೆಟ್​ನ ಎರಡು ಚಿತ್ರಗಳು ರಿಲೀಸ್ ಆಗುತ್ತಿವೆ.

‘ಡಂಕಿ’ Vs ‘ಸಲಾರ್’ ಫೈಟ್​ಗೆ ಹೆದರಿ ಕಾಲ್ಕಿತ್ತ ಸಿನಿಮಾಗಳು; ಎದ್ದಿದೆ ದೊಡ್ಡ ಅಲೆ
ಪ್ರಭಾಸ್, ಕರಣ್, ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on: Sep 30, 2023 | 2:27 PM

ಈ ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ. ಸಲಾರ್’ (Salaar Movie) ಹಾಗೂ ‘ಡಂಕಿ’ ಸಿನಿಮಾ (Dunki Movie) ಮಧ್ಯೆ ಫೈಟ್ ನಡೆಯುತ್ತಿದೆ. ಎರಡೂ ಸಿನಿಮಾಗಳನ್ನು ನೋಡಲು ಸಿನಿಪ್ರಿಯರು ಕಾದಿದ್ದಾರೆ. ಇವರ ಮಧ್ಯೆ ಸಿಲುಕಿದರೆ ಸಿನಿಮಾ ಕಲೆಕ್ಷನ್​ಗೆ ದೊಡ್ಡ ಹೊಡೆತ ಉಂಟಾಗಲಿದೆ ಅನ್ನೋದು ಹಲವು ನಿರ್ಮಾಪಕರಿಗೆ ಅರ್ಥವಾಗಿದೆ. ಹೀಗಾಗಿ ಹಲವು ಸಿನಿಮಾಗಳು ರಿಲೀಸ್ ದಿನಾಂಕವನ್ನು 2024ಕ್ಕೆ ಮುಂದೂಡಿಕೊಂಡಿವೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ಡಿಸೆಂಬರ್ 22ರಂದು ‘ಡಂಕಿ’ ರಿಲೀಸ್ ಆಗುವ ಬಗ್ಗೆ ಈ ಮೊದಲೇ ಘೋಷಣೆ ಆಗಿತ್ತು. ಈಗ ರೇಸ್​​ನಲ್ಲಿ ‘ಸಲಾರ್’ ಕೂಡ ಸೇರಿಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ತೆಲುಗು ಮಾತ್ರವಲ್ಲದೆ, ಹಿಂದಿ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಫೈಟ್ ಏರ್ಪಡುತ್ತಿದೆ.

ಡಿಸೆಂಬರ್ 15ರಂದು ‘ಯೋಧ’ ಸಿನಿಮಾ ರಿಲೀಸ್ ಆಗಬೇಕಿತ್ತು. ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಡಿಸೆಂಬರ್ 1ರಂದು ‘ಅನಿಮಲ್’ ರಿಲೀಸ್ ಆಗಲಿದೆ. ಡಿಸೆಂಬರ್ 22ರಂದು ದೊಡ್ಡಬಜೆಟ್​ನ ಎರಡು ಚಿತ್ರಗಳು ರಿಲೀಸ್ ಆಗುತ್ತಿವೆ. ಇವರ ಮಧ್ಯೆ ಸ್ಪರ್ಧಿಸಿದರೆ ಕೈ ಸುಟ್ಟುಕೊಳ್ಳೋದು ಖಚಿತ ಅನ್ನೋದು ಕರಣ್ ಜೋಹರ್​ಗೆ ಗೊತ್ತಾಗಿದೆ. ಹೀಗಾಗಿ ಅವರು ರಿಲೀಸ್ ದಿನಾಂಕವನ್ನು 2024ಕ್ಕೆ ಮುಂದೂಡಿಕೊಂಡಿದ್ದಾರೆ.

ಇದನ್ನೂ ಓದಿ: ಗೇ ಎಂಬ ಕಾರಣಕ್ಕೆ ಕರಣ್ ಜೋಹರ್ ಮದುವೆ ಆಗಿಲ್ವಾ? ಅಸಲಿ ಕಾರಣ ತಿಳಿಸಿದ ನಿರ್ಮಾಪಕ

ಕರಣ್ ಜೋಹರ್ ಹಾಗೂ ಶಾರುಖ್ ಖಾನ್ ಮಧ್ಯೆ ಬಹಳ ಹಳೆಯ ಗೆಳೆತನ ಇದೆ. ಇನ್ನು, ಪ್ರಭಾಸ್ ನಟನೆಯ ‘ಬಾಹುಬಲಿ’ ಚಿತ್ರವನ್ನು ಹಿಂದಿಯಲ್ಲಿ ರಿಲೀಸ್ ಮಾಡಿ ಲಾಭ ಕಂಡಿದ್ದರು. ಶಾರುಖ್ ಖಾನ್ ಹಾಗೂ ಪ್ರಭಾಸ್ ಮೇಲಿನ ಗೌರವದಿಂದಲೂ ಅವರು ‘ಯೋಧ’ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ತೆಲುಗು, ತಮಿಳಿನಲ್ಲೂ ಕೆಲವು ಸಿನಿಮಾಗಳು ರಿಲೀಸ್ ದಿನಾಂಕ ಮುಂದಕ್ಕೆ ಹಾಕಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ