AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗಳು..!

Anushka Sharma Pregnant: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗಳು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸದ್ಯ ಅನುಷ್ಕಾ ಶರ್ಮಾ ಗರ್ಭೀಣಿಯಾಗಿದ್ದು ಹೀಗಾಗಿಯೇ ಅವರು ಕೆಲವು ದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

2ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗಳು..!
ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ (ಪ್ರಾತಿನಿಧಿಕ ಚಿತ್ರ)
ಪೃಥ್ವಿಶಂಕರ
|

Updated on:Sep 30, 2023 | 1:53 PM

Share

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ದಂಪತಿಗಳು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸದ್ಯ ಅನುಷ್ಕಾ ಶರ್ಮಾ ಗರ್ಭೀಣಿಯಾಗಿದ್ದು ಹೀಗಾಗಿಯೇ ಅವರು ಕೆಲವು ದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ವಿರಾಟ್ ಕೊಹ್ಲಿ ಅವರೊಂದಿಗೆ ಎಲ್ಲಿಗೂ ಪ್ರಯಾಣಿಸುತ್ತಿಲ್ಲ ಹಾಗೂ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿಲ್ಲ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಅನುಷ್ಕಾ ತನ್ನ ಎರಡನೇ ಮಗುವನ್ನು ನಿರೀಕ್ಷಿಯಲ್ಲಿದ್ದಾರೆ. ಕಳೆದ ಬಾರಿಯಂತೆ, ಅವರು ಮುಂದಿನ ದಿನಗಳಲ್ಲಿ ಈ ಸಿಹಿ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳಲ್ಲಿದ್ದಾರೆ. ಹೀಗಾಗಿಯೇ ಅನುಷ್ಕಾ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಅಥವಾ ಮುಂಬೈನಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಲ್ಲದೆ ಊಹಾಪೋಹಗಳನ್ನು ತಪ್ಪಿಸುವ ಸಲುವಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ.

ಕೊಹ್ಲಿಗೆ 110 ಕೋಟಿ ರೂ. ಆದಾಯ ತಂದುಕೊಟ್ಟ ಕಂಪನಿ ವಿರುದ್ಧವೇ ಪತ್ನಿ ಅನುಷ್ಕಾ ಆರೋಪ..!

ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ  ದಂಪತಿಗಳು

ಇನ್ನೊಂದು ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಇತ್ತೀಚೆಗೆ ಮುಂಬೈನ ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಫೋಟೋಗಳನ್ನು ಎಲ್ಲಿಯೂ ಪ್ರಕಟಿಸದಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಈ ವಿಚಾರವನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

2021 ರಲ್ಲಿ ಹೆಣ್ಣು ಮಗು ಜನನ

ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿಗಳಿಗೆ 2021 ರ ಜನವರಿಯಲ್ಲಿ ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ ಈ ದಂಪತಿಗಳು ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ಆಗಲೂ ಸಹ ಮಗು ಹುಟ್ಟುವ ಮುನ್ನ ಹಾಗೂ ಹುಟ್ಟಿದ ವರ್ಷದವರೆಗೆ ಈ ದಂಪತಿಗಳು ತಮ್ಮ ಮಗಳ ಫೋಟೋವನ್ನಾಗಲಿ ಅಥವಾ ಮಗಳ ಮುಖವನ್ನಾಗಲಿ ಸಾರ್ವಜನಿಕವಾಗಿ ತೊರಿಸಿರಲಿಲ್ಲ. ಎಲ್ಲಿಯೇ ಪ್ರವಾಸಕ್ಕೆ ಹೋದರು ಅಥವಾ ಪಂದ್ಯಗಳನ್ನು ವೀಕ್ಷಿಸಲು ಹೋಗುವಾಗಲು ಅನುಷ್ಕಾ ತಮ್ಮ ಮಗಳನ್ನು ಪಾಪರಾಜಿಗಳಿಂದ ಮರೆಮಾಚುತ್ತಿದ್ದರು.

Published On - 12:08 pm, Sat, 30 September 23