ಕೊಹ್ಲಿಗೆ 110 ಕೋಟಿ ರೂ. ಆದಾಯ ತಂದುಕೊಟ್ಟ ಕಂಪನಿ ವಿರುದ್ಧವೇ ಪತ್ನಿ ಅನುಷ್ಕಾ ಆರೋಪ..!
Anushka Sharma: ಅನುಮತಿಯಿಲ್ಲದೆ ಸೀಸನ್ ಸೇಲ್ಗೆ ಅನುಷ್ಕಾ ಫೋಟೋ ಬಳಸಿಕೊಂಡ ಆರೋಪ ಪೂಮಾ ಇಂಡಿಯಾ ಮೇಲಿದೆ. ಆದರೆ ಇದು ಕಂಪನಿಯ ಮಾರ್ಕೆಟಿಂಗ್ ತಂತ್ರವೂ ಆಗಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ (Virat Kohli and Anushka Sharma) ಖ್ಯಾತ ಸ್ಪೋರ್ಟ್ಸ್ ಬ್ರಾಂಡ್ ಕಂಪನಿ ವಿರುದ್ಧ ಹೊಸ ಆರೋಪ ಹೊರಿಸಿದ್ದಾರೆ. ವಾಸ್ತವವಾಗಿ ವಿರಾಟ್ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಸ್ಪೋರ್ಟ್ಸ್ ಬ್ರಾಂಡ್ ಪೂಮಾ (Puma India) ವಿರುದ್ಧ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಅನುಮತಿ ಇಲ್ಲದೇ ಪೂಮಾ ತನ್ನ ಕಂಪನಿಯ ಪ್ರಚಾರಕ್ಕಾಗಿ ನನ್ನ ಫೋಟೋವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಕಂಪನಿಯ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅನುಷ್ಕಾ, ಕಂಪನಿಯು ನನ್ನ ಫೋಟೋಗಳನ್ನು ಶೀಘ್ರದಲ್ಲೇ ತೆಗೆದುಹಾಕಬೇಕು ಎಂದಿದ್ದಾರೆ. ಆದರೆ ಅನುಷ್ಕಾ ಶರ್ಮಾ ದೂಷಿಸುತ್ತಿರುವ ಪೂಮಾ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಅವರ ಪತಿ ವಿರಾಟ್ ಕೊಹ್ಲಿ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಅಂದಹಾಗೆ, ವಿರಾಟ್ ಕೊಹ್ಲಿ ಕೂಡ ತನ್ನ ಮಡದಿಗೆ ಈ ವಿಚಾರದಲ್ಲಿ ಸಾಥ್ ನೀಡಿದ್ದು, ಕೂಡಲೇ ಈ ವಿಷಯವನ್ನು ಪರಿಹರಿಸುವಂತೆ ಪೂಮಾ ಇಂಡಿಯಾವನ್ನು ಕೇಳಿಕೊಂಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಬಾಂಗ್ಲಾದೇಶದಲ್ಲಿದ್ದು, ಡಿಸೆಂಬರ್ 22 ರಿಂದ ಆರಂಭವಾಗಲಿರುವ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅನುಷ್ಕಾ ಶರ್ಮಾ ಆರೋಪ ಮಾಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಪೂಮಾ ಇಂಡಿಯಾ ಈಸಮಸ್ಯೆಯನ್ನು ಪರಿಹರಿಸಬೇಕು ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಅನುಷ್ಕಾ ಶರ್ಮಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೂಮಾ ಇಂಡಿಯಾವನ್ನು ಟ್ಯಾಗ್ ಮಾಡಿ, ‘ಅನುಮತಿ ಇಲ್ಲದೆ ಯಾವುದೇ ಬ್ರ್ಯಾಂಡ್ ಪ್ರಚಾರಕ್ಕಾಗಿ ನೀವು ನನ್ನ ಫೋಟೋಗಳನ್ನು ಬಳಸಲು ಸಾಧ್ಯವಿಲ್ಲ, ಏಕೆಂದರೆ ನಾನು ನಿಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಅಲ್ಲ. ದಯವಿಟ್ಟು ಕೂಡಲೇ ನನ್ನ ಫೋಟೋಗಳನ್ನು ನಿಮ್ಮ ಪ್ರಚಾರದಿಂದ ತೆಗೆದುಹಾಕಿ ಎಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.
ಸೀಸನ್ ಸೇಲ್ಗೆ ಈ ಮಾಸ್ಟರ್ ಪ್ಲಾನ್?
ಈಗ ಅನುಮತಿಯಿಲ್ಲದೆ ಸೀಸನ್ ಸೇಲ್ಗೆ ಅನುಷ್ಕಾ ಫೋಟೋ ಬಳಸಿಕೊಂಡ ಆರೋಪ ಪೂಮಾ ಇಂಡಿಯಾ ಮೇಲಿದೆ. ಆದರೆ ಇದು ಕಂಪನಿಯ ಮಾರ್ಕೆಟಿಂಗ್ ತಂತ್ರವೂ ಆಗಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಕಂಪನಿಯ ಹೆಸರನ್ನು ಮುನ್ನಲೆಗೆ ತರಲು ಉದ್ದೇಶಪೂರ್ವಕವಾಗಿ ಈ ರೀತಿಯ ವಿವಾದವನ್ನು ಸೃಷ್ಟಿಸಲಾಗಿದೆ ಎಂತಲೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಕ್ಯಾಚ್ ಕಿಂಗ್ ಕೊಹ್ಲಿ; ವಿರಾಟ್ ಹೆಸರಲ್ಲಿ ಮತ್ತೊಂದು ದಾಖಲೆ! ಟಾಪ್ 10ರಲ್ಲಿ ಇಬ್ಬರೇ ಭಾರತೀಯ ಆಟಗಾರರು
ವಿರಾಟ್ ಜೊತೆ ಪೂಮಾ 110 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ
ಅಂದಹಾಗೆ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಅವರು 2017 ರಿಂದ ಪೂಮಾ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕೊಹ್ಲಿಯೊಂದಿಗೆ 8 ವರ್ಷಗಳ ಕಾಲ 110 ಕೋಟಿ ರೂಪಾಯಿಗಳಿಗೆ ಪೂಮಾ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಅಂದರೆ ಪೂಮಾ ಇಂಡಿಯಾ ಪ್ರತಿ ವರ್ಷ ವಿರಾಟ್ ಕೊಹ್ಲಿಗೆ ತನ್ನ ಕಂಪನಿಯ ಜಾಹೀರಾತಿಗಾಗಿ 13.75 ಕೋಟಿ ನೀಡಲಿದೆ. ಈ ಒಪ್ಪಂದವು 2025 ರಲ್ಲಿ ಕೊನೆಗೊಳ್ಳಲಿದ್ದು, ಈಗ ಸೃಷ್ಟಿಯಾಗಿರುವ ಪೂಮಾ ಇಂಡಿಯಾ ಮತ್ತು ಅನುಷ್ಕಾ ನಡುವಿನ ಬಿಕ್ಕಟ್ಟು ಯಾವಾಗ ಬಗೆಹರಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Wed, 21 December 22