- Kannada News Photo gallery Cricket photos Virat Kohli and KS Bharat headed straight to nets for India vs Bangladesh second Test Kannada Cricket News
Virat Kohli: ಕೊಹ್ಲಿ, ಕೆಎಸ್ ಭರತ್ ನೆಟ್ನಲ್ಲಿ ಭರ್ಜರಿ ಅಭ್ಯಾಸ: 2ನೇ ಟೆಸ್ಟ್ಗೆ ಬದಲಾವಣೆ ನಿರೀಕ್ಷೆ
India vs Bangladesh 2nd Test: ಎರಡನೇ ಟೆಸ್ಟ್ಗೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ. ಮುಖ್ಯವಗಿ ವಿರಾಟ್ ಕೊಹ್ಲಿ ಹಾಗೂ ಕೆಎಸ್ ಭರತ್ ನೆಟ್ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ಬೌಲರ್ಗಳು ಕೂಡ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.
Updated on: Dec 20, 2022 | 9:50 AM

ಚಟ್ಟೋಗ್ರಾಮ್‌ನ ಝಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 188 ರನ್ಗಳ ಅಮೋಘ ಜಯ ಸಾಧಿಸಿದ ಬಳಿಕ ಭಾರತ ತಂಡ ಇದೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳಬೇಕಾದರೆ ಎರಡನೇ ಟೆಸ್ಟ್ ಮ್ಯಾಚ್ ಗೆಲ್ಲಲೇ ಬೇಕು.

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಡಿಸೆಂಬರ್ 26ರ ವರೆಗೆ ನಡೆಯಲಿದೆ. ಇದನ್ನು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 9 ಗಂಟೆಗೆ ಶುರುವಾಗಲಿದೆ. 8:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಇದೀಗ ಎರಡನೇ ಟೆಸ್ಟ್ಗೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ. ಮುಖ್ಯವಗಿ ವಿರಾಟ್ ಕೊಹ್ಲಿ ಹಾಗೂ ಕೆಎಸ್ ಭರತ್ ನೆಟ್ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ಬೌಲರ್ಗಳು ಕೂಡ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.

ಇನ್ನು ಬಾಂಗ್ಲಾ ಪ್ರವಾಸದ ಎರಡನೇ ಏಕದಿನ ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಹೆಬ್ಬೆರಳು ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಹೀಗಾಗಿ ಮೊದಲ ಟೆಸ್ಟ್ ಬಳಿಕ ಇದೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂಬ ಸುದ್ದು ಹೊರಬಿದ್ದಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದ್ವಿತೀಯ ಟೆಸ್ಟ್ಗೆ ತಂಡವನ್ನು ಪ್ರಕಟ ಮಾಡಿದೆ. ಇಂಜುರಿ ಕಾರಣದಿಂದ ಮೊದಲ ಟೆಸ್ಟ್ಗೆ ಅಲಭ್ಯರಾಗಿದ್ದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಅಷ್ಟೆ ಅಲ್ಲ, ವೇಗಿ ಹುಸೈನ್ ಕೂಡ ಇಂಜುರಿಗೆ ಒಳಗಾಗಿದ್ದು ಢಾಕಾ ಟೆಸ್ಟ್ನಿಂದ ಔಟ್ ಆಗಿದ್ದಾರೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಬ್ ಕುಮಾರ್, ಜಯದೇವ್ ಉನಾದ್ಕಟ್.

ಬಾಂಗ್ಲಾದೇಶ ತಂಡ: ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ನಸುಮ್ ಅಹ್ಮದ್, ಮಹ್ಮುದುಲ್ ಹಸನ್ ಪ್ಲೆಷರ್, ಮೊಮಿನುಲ್ ಹಕ್, ರೆಹಮಾನ್ ರಾಜಾ, ತಸ್ಕಿನ್ ಅಹ್ಮದ್.



















