ಬಾಲ್ಯದ ಗೆಳೆಯನಿಗೆ ಅನಾರೋಗ್ಯ, ಕೂಡಲೇ ಸಹಾಯಕ್ಕೆ ಧಾವಿಸಿದ ಮೆಗಾಸ್ಟಾರ್ ಚಿರಂಜೀವಿ

ಚಿತ್ರರಂಗದ ಹಿನ್ನೆಲೆಯಿಲ್ಲದೆ ಸ್ವಂತ ಪ್ರಯತ್ನದಿಂದ ಮೆಗಾಸ್ಟಾರ್ ಎನಿಸಿಕೊಂಡಿರುವ ನಾಯಕ ಚಿರಂಜೀವಿ. ತಮ್ಮ ಅಭಿನಯದಿಂದ ಕೋಟಿಗಟ್ಟಲೆ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಸಾಕಷ್ಟು ನಟರಿಗೆ ಚಿರಂಜೀವಿ ಸ್ಫೂರ್ತಿ ಕೂಡ. ಸಿನಿಮಾಗಳ ಹೊರತಾಗಿಯೂ ಚಿರಂಜೀವಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯಾರೇ ಕಷ್ಟದಲ್ಲಿದ್ದೇವೆ ಎಂದು ಕೇಳಿದರೂ ಕೂಡಲೇ ಅವರಿಗೆ ಸಹಾಯ ಮಾಡುವ ಮನೋಭಾವ ಅವರದ್ದು.

ಬಾಲ್ಯದ ಗೆಳೆಯನಿಗೆ ಅನಾರೋಗ್ಯ, ಕೂಡಲೇ ಸಹಾಯಕ್ಕೆ ಧಾವಿಸಿದ ಮೆಗಾಸ್ಟಾರ್ ಚಿರಂಜೀವಿ
ಚಿರಂಜೀವಿ
Follow us
ನಯನಾ ರಾಜೀವ್
|

Updated on: Oct 23, 2023 | 12:58 PM

ಚಿತ್ರರಂಗದ ಹಿನ್ನೆಲೆಯಿಲ್ಲದೆ ಸ್ವಂತ ಪ್ರಯತ್ನದಿಂದ ಮೆಗಾಸ್ಟಾರ್ ಎನಿಸಿಕೊಂಡಿರುವ ನಾಯಕ ಚಿರಂಜೀವಿ(Chiranjeevi). ತಮ್ಮ ಅಭಿನಯದಿಂದ ಕೋಟಿಗಟ್ಟಲೆ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಸಾಕಷ್ಟು ನಟರಿಗೆ ಚಿರಂಜೀವಿ ಸ್ಫೂರ್ತಿ ಕೂಡ. ಸಿನಿಮಾಗಳ ಹೊರತಾಗಿಯೂ ಚಿರಂಜೀವಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯಾರೇ ಕಷ್ಟದಲ್ಲಿದ್ದೇವೆ ಎಂದು ಕೇಳಿದರೂ ಕೂಡಲೇ ಅವರಿಗೆ ಸಹಾಯ ಮಾಡುವ ಮನೋಭಾವ ಅವರದ್ದು.

ಕೊರೊನಾ ಸಮಯದಲ್ಲಿ ಆಕ್ಸಿಜನ್ ಬ್ಯಾಂಕ್​ಗಳನ್ನು ಸ್ಥಾಪಿಸಿದ್ದರು. ಅಷ್ಟೇ ಅಲ್ಲ ಕಷ್ಟದಲ್ಲಿರುವ ಸಹ ನಟ ನಟರು, ಅಭಿಮಾನಿಗಳಿಗೆ ಸಾಕಷ್ಟು ಬಾರಿ ಸಹಾಯ ಮಾಡಿರುವ ನಿದರ್ಶನಗಳೂ ಇವೆ. ಇದೀಗ ಚಿರಂಜೀವಿಯವರು ತಮ್ಮ 157ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅದರ ನಡುವೆಯೇ ಹೈದರಾಬಾದ್​ನ ಅಪೋಲೊ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ದಂಪತಿಯೊಂದಿಗೆ ಚಿರಂಜೀವಿ ತೆಗೆಸಿಕೊಂಡಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ.

ಆದರೆ ಅವರು ಮತ್ಯಾರು ಅಲ್ಲ ಚಿರಂಜೀವಿ ಅವರ ಬಾಲ್ಯ ಸ್ನೇಹಿತ. ಮೊಗಲೂರಿನಲ್ಲಿ ಹುಟ್ಟಿ ಬೆಳೆದ ಚಿರಂಜೀವಿಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರಲ್ಲಿ ಓರ್ವರು ಪುವ್ವಾಡ ರಾಜ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಇದನ್ನು ತಿಳಿದ ಚಿರಂಜೀವಿ ತಕ್ಷಣವೇ ಆಸ್ಪತ್ರೆಗೆ ಧಾವಿಸಿ ಸ್ನೇಹಿತನಿಗೆ ಸಹಾಯ ಮಾಡಿದ್ದಾರೆ.

ಮತ್ತಷ್ಟು ಓದಿ: ಚಿರಂಜೀವಿಗೆ ಸಂಭಾವನೆ ಕೊಡಲು ಮನೆ ಮಾರಿಕೊಂಡ್ರಾ ನಿರ್ಮಾಪಕರು? ಕೊನೆಗೂ ಸಿಕ್ತು ಸ್ಪಷ್ಟನೆ

ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ತನ್ನ ಸ್ನೇಹಿತನಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಿದರು. ಮೇಲಾಗಿ ವೈದ್ಯರೊಂದಿಗೆ ಮಾತನಾಡಿ ಚಿಕಿತ್ಸೆಯ ವಿವರಗಳನ್ನು ಕೇಳಿದರು. ಸದ್ಯ ಚಿರಂಜೀವಿ ಅವರ ಈ ಫೋಟೋಗಳು ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ಅಭಿಮಾನಿಗಳು ಅಣ್ಣನ್ನ ಮನಸು ಬಂಗಾರ, ನೀವು ನಿಜವಾದ ಹೀರೋ ಎಂದು ಕಮೆಂಟ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ.

ಈ ಹಿಂದೆ ಸಹನಟ ಪೊನ್ನಂ ಬಾಲನ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ಅವರು ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ 40 ಲಕ್ಷ ರೂ ಕೊಟ್ಟು ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರು.

ಮನರಂಜನೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ