ಚಿರಂಜೀವಿ ಒಟ್ಟೂ ಆಸ್ತಿ​ ಎಷ್ಟು? ಅವರ ಬಳಿ ಇದೆ ದುಬಾರಿ ಕಾರು, ಪ್ರೈವೇಟ್ ಜೆಟ್

Chiranjeevi Net Worth And Car Collection: ಚಿರಂಜೀವಿ ಅವರು ಚಿತ್ರರಂಗದ ಬೇಡಿಕೆಯ ಹೀರೋ. ಅವರು ಪ್ರತಿ ಚಿತ್ರಕ್ಕೆ 45-50 ಕೋಟಿ ರೂಪಾಯಿ ಸಂಭಾವನೆ ಪಡೆಯತ್ತಾರೆ ಎನ್ನಲಾಗಿದೆ. ಇತ್ತೀಚೆಗೆ ಚಿರಂಜೀವಿ ಅವರ ಸಿನಿಮಾಗಳು ಅಷ್ಟಾಗಿ ಗೆಲ್ಲುತ್ತಿಲ್ಲ. ಆದರೂ ನಿರ್ಮಾಪಕರು ಭರವಸೆ ಕಳೆದುಕೊಂಡಿಲ್ಲ.

ಚಿರಂಜೀವಿ ಒಟ್ಟೂ ಆಸ್ತಿ​ ಎಷ್ಟು? ಅವರ ಬಳಿ ಇದೆ ದುಬಾರಿ ಕಾರು, ಪ್ರೈವೇಟ್ ಜೆಟ್
ಚಿರಂಜೀವಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 22, 2023 | 1:27 PM

ನಟ ಚಿರಂಜೀವಿ ಅವರಿಗೆ ಇಂದು (ಆಗಸ್ಟ್​ 12) ಜನ್ಮದಿನ (Chiranjeevi Birthday) . ಅವರಿಗೆ ಹಲವರು ಶುಭಾಶಯ ತಿಳಿಸುತ್ತಿದ್ದಾರೆ. ಅವರ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ ಸೋತಿದೆ. ಈ ಬಗ್ಗೆ ಅವರಿಗೆ ಹಾಗೂ ಅಭಿಮಾನಿಗಳಿಗೆ ಬೇಸರ ಇದೆ. ಆದರೆ, ಅದನ್ನು ಮರೆತು ಅಭಿಮಾನಿಗಳು ಚಿರಂಜೀವಿ (Chiranjeevi) ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಚಿರಂಜೀವಿ ಅವರು ಸಾವಿರಾರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸಂಭಾವನೆ- ಆಸ್ತಿ

ಚಿರಂಜೀವಿ ಅವರು ಚಿತ್ರರಂಗದ ಬೇಡಿಕೆಯ ಹೀರೋ. ಅವರು ಪ್ರತಿ ಚಿತ್ರಕ್ಕೆ 45-50 ಕೋಟಿ ರೂಪಾಯಿ ಸಂಭಾವನೆ ಪಡೆಯತ್ತಾರೆ ಎನ್ನಲಾಗಿದೆ. ಇತ್ತೀಚೆಗೆ ಚಿರಂಜೀವಿ ಅವರ ಸಿನಿಮಾಗಳು ಅಷ್ಟಾಗಿ ಗೆಲ್ಲುತ್ತಿಲ್ಲ. ಆದರೂ ನಿರ್ಮಾಪಕರು ಭರವಸೆ ಕಳೆದುಕೊಂಡಿಲ್ಲ. ಧೈರ್ಯ ಮಾಡಿ ಅವರ ಸಿನಿಮಾಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಚಿರಂಜೀವಿ ಆಸ್ತಿ

ಹಲವು ಕಡೆಗಳಲ್ಲಿ ಚಿರಂಜೀವಿ ಅವರು ಹೂಡಿಕೆ ಮಾಡಿದ್ದಾರೆ. ಪ್ರತಿ ವರ್ಷ ಅವರಿಗೆ ಇದರಿಂದ ಕೋಟಿ ಕೋಟಿ ಆದಾಯ ಬರುತ್ತದೆ. ಅವರ ಒಟ್ಟೂ ಆಸ್ತಿ 1,690 ಕೋಟಿ ರೂಪಾಯಿ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಐಷಾರಾಮಿ ಮನೆ

ಹೈದರಾಬಾದ್​ನ ದುಬಾರಿ ಜಾಗ ಎನಿಸಿಕೊಂಡಿರುವ ಜುಬ್ಲಿ ಹಿಲ್ಸ್​ನಲ್ಲಿ ಚಿರಂಜೀವಿ ಐಷಾರಾಮಿ ಮನೆ ಹೊಂದಿದ್ದಾರೆ. 25 ಸಾವಿರ ಚದರ ಅಡಿ ಸುತ್ತಳತೆಯನ್ನು ಇದು ಹೊಂದಿದೆ. ಈ ಬಂಗಲೆಯ ಬೆಲೆ 30 ಕೋಟಿ ರೂಪಾಯಿಗೂ ಮೀರಿದೆ. ಖ್ಯಾತ ಫ್ಯಾಷನ್ ಡಿಸೈನರ್ ತರುಣ್ ತಾಹಿಲಿಯಾನ್ ಅವರ ಒಡೆತನದ ಸಂಸ್ಥೆ ಈ ಮನೆಯ ಇಂಟೀರಿಯರ್ ಕೆಲಸ ಮಾಡಿದೆ. ಸ್ವಿಮ್ಮಿಂಗ್ ಪೂಲ್, ಜಿಮ್, ಟೆನಿಸ್ ಕೋರ್ಟ್ ಸೇರಿ ಅನೇಕ ವ್ಯವಸ್ಥೆಗಳು ಇದರಲ್ಲಿ ಲಭ್ಯವಿದೆ.

ದುಬಾರಿ ಕಾರು

ಸೆಲೆಬ್ರಿಟಿಗಳಿಗೆ ಕಾರಿನ ಮೇಲೆ ಹೆಚ್ಚಿನ ಮೋಹ ಇರುತ್ತದೆ. ಚಿರಂಜೀವಿ ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಇದೆ. ಇದರ ಬೆಲೆ 10 ಕೋಟಿ ರೂಪಾಯಿ. ರೇಂಜ್ ರೋವರ್ ಆಟೋಬಯೋಗ್ರಫಿ (4 ಕೋಟಿ ರೂಪಾಯಿ),  ರೇಂಜ್ ರೋವರ್ ವೋಗ್ (2.2 ಕೋಟಿ ರೂಪಾಯಿ), ಟೊಯಾಟೋ ಲ್ಯಾಂಡ್ ಕ್ರೂಸರ್ (2 ಕೋಟಿ ರೂಪಾಯಿ) ಪ್ರಮುಖವಾಗಿ ಇರುವ ಕಾರುಗಳು.

ಪ್ರೈವೇಟ್ ಜೆಟ್

ಚಿರಂಜೀವಿ ಬಳಿ ಖಾಸಗಿ ಜೆಟ್ ಇದೆ. ಸಿನಿಮಾ ಪ್ರಮೋಷನ್​ಗೆ ತೆರಳಲು ಅವರು ಈ ಜೆಟ್ ಬಳಕೆ ಮಾಡುತ್ತಾರೆ. ಇದರ ಬೆಲೆ ನೂರಾರು ಕೋಟಿ ರೂಪಾಯಿ ಇದೆ. ಅವರು ಪ್ರೈವೇಟ್ ಜೆಟ್​ನಲ್ಲಿ ಓಡಾಡಿದ ಫೋಟೋ ಈ ಮೊದಲು ವೈರಲ್ ಆಗಿತ್ತು.

ನಿರ್ಮಾಣ ಸಂಸ್ಥೆ

ಚಿರಂಜೀವಿ ಒಡೆತನದಲ್ಲಿ ನಿರ್ಮಾಣ ಸಂಸ್ಥೆ ಕೂಡ ಇದೆ. ಇದಕ್ಕೆ ‘ಅಂಜನಾ ಪ್ರೊಡಕ್ಷನ್ಸ್’ ಎಂದು ಹೆಸರು ಇಡಲಾಗಿದೆ. ಟಾಲಿವುಡ್​ನ ಫೇಮಸ್ ನಿರ್ಮಾಣ ಸಂಸ್ಥೆಗಳಲ್ಲಿ ಇದು ಕೂಡ ಒಂದು. ತಾಯಿ ಅಂಜನಾ ದೇವಿ ಹೆಸರಲ್ಲಿ ಇದನ್ನು ಆರಂಭಿಸಲಾಯಿತು.

ಇದನ್ನೂ ಓದಿ: ಚಿರಂಜೀವಿ ಜನ್ಮದಿನಕ್ಕೆ ಘೋಷಣೆ ಆಯ್ತು ಹೊಸ ಸಿನಿಮಾ; 157ನೇ ಚಿತ್ರಕ್ಕೆ ನಿರ್ದೇಶಕ ಯಾರು?

ಕಣ್ಣಿನ ಆಸ್ಪತ್ರೆ

ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ 1998ರಲ್ಲಿ ಆರಂಭ ಆಯಿತು. ರಕ್ತ ಹಾಗೂ ಕಣ್ಣಿನ ಬ್ಯಾಂಕ್​ನ ಇವರು ನಡೆಸುತ್ತಿದ್ದಾರೆ. ಇದನ್ನು ಅವರು ಲಾಭದ ದೃಷ್ಟಿಯಿಂದ ನಡೆಸುತ್ತಿಲ್ಲ. ಬಡವರಿಗೆ ಸಹಾಯ ಆಗಲಿ ಎಂಬುದು ಇದರ ಉದ್ದೇಶ.

ಸಾಲು ಸಾಲು ಆಫರ್

ಚಿರಂಜೀವಿ ಅವರ ನಟನೆಯ ಸಾಲು ಸಾಲು ಸಿನಿಮಾಗಳು ಸೋತರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಅವರ ಹೊಸ ಸಿನಿಮಾ ಘೋಷಣೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!