AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿ ಬಗ್ಗೆ ತಪ್ಪಾಗಿ ಹೇಳಿ ವಿವಾದ ಸೃಷ್ಟಿಸಿದ ವಿಜಯ್ ದೇವರಕೊಂಡ; ‘ನಿಮ್ಮ ಅಭಿಪ್ರಾಯ ಬೇಕಿಲ್ಲ’ ಎಂದ ಫ್ಯಾನ್ಸ್ 

ವಿಜಯ್​ಗೆ ಇನ್ನುಮುಂದೆ ಒಳ್ಳೆಯ ಆಫರ್​ಗಳು ಬರುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ವಿಜಯ್​ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ಉತ್ತರಿಸುವಾಗ ರಜನಿಕಾಂತ್ ಹಾಗೂ ಚಿರಂಜೀವಿ ಉದಾಹರಣೆ ನೀಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ರಜನಿ ಬಗ್ಗೆ ತಪ್ಪಾಗಿ ಹೇಳಿ ವಿವಾದ ಸೃಷ್ಟಿಸಿದ ವಿಜಯ್ ದೇವರಕೊಂಡ; ‘ನಿಮ್ಮ ಅಭಿಪ್ರಾಯ ಬೇಕಿಲ್ಲ’ ಎಂದ ಫ್ಯಾನ್ಸ್ 
ರಜನಿ-ವಿಜಯ್
ರಾಜೇಶ್ ದುಗ್ಗುಮನೆ
|

Updated on:Aug 22, 2023 | 2:55 PM

Share

ಸೆಲೆಬ್ರಿಟಿಗಳು ಮಾತನಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈಗ ವಿಜಯ್ ದೇವರಕೊಂಡ ಅವರು ಇದೇ ರೀತಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ರಜನಿ ಫ್ಯಾನ್ಸ್ ವಿಜಯ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಈ ವಿವಾದದ ಎಫೆಕ್ಟ್ ಅವರ ನಟನೆಯ ‘ಖುಷಿ’ (Kushi Movie) ಚಿತ್ರದ ಕಲೆಕ್ಷನ್  ಮೇಲೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಏನಿದು ವಿವಾದ? ವಿಜಯ್ ದೇವರಕೊಂಡ (Vijay Devarakonda) ನಿಜಕ್ಕೂ ಹೇಳಿದ್ದೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ವಿಜಯ್ ದೇವರಕೊಂಡ ಅವರ ನಟನೆಯ ‘ಲೈಗರ್’ ಸಿನಿಮಾ ಹೀನಾಯವಾಗಿ ಸೋತಿದೆ. ಈ ಚಿತ್ರದಿಂದ ವಿಜಯ್ ಅವರ ವೃತ್ತಿ ಜೀವನದ ವೇಗಕ್ಕೆ ತಡೆ ಬಿದ್ದಂತೆ ಆಗಿದೆ. ವಿಜಯ್​ಗೆ ಇನ್ನುಮುಂದೆ ಒಳ್ಳೆಯ ಆಫರ್​ಗಳು ಬರುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ವಿಜಯ್​ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ಉತ್ತರಿಸುವಾಗ ರಜನಿಕಾಂತ್ ಹಾಗೂ ಚಿರಂಜೀವಿ ಉದಾಹರಣೆ ನೀಡಿದ್ದಾರೆ.

‘ಸೂಪರ್​ಸ್ಟಾರ್​ಗಳು ಹಿಟ್-ಫ್ಲಾಪ್​ಗಳನ್ನೂ ಮೀರಿದವರು. ರಜನಿ ಅವರು ಬ್ಯಾಕ್​ ಟು ಬ್ಯಾಕ್ ಆರು ಫ್ಲಾಪ್ ಸಿನಿಮಾಗಳನ್ನು ನೀಡಬಹುದು. ಆದರೆ, ‘ಜೈಲರ್’ ಅಂಥ ಸಿನಿಮಾ ಮಾಡಿದರೆ 500 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತದೆ. ನಾವು ಬಾಯಿಮುಚ್ಚಿಕೊಂಡು ನೋಡಬೇಕು’ ಎಂದಿದ್ದಾರೆ ವಿಜಯ್ ದೇವರಕೊಂಡ. ಚಿರಂಜೀವಿ ಬಗ್ಗೆ ಮಾತನಾಡಿರುವ ಅವರು, ‘ಚಿರಂಜೀವಿ ಕೂಡ ಬ್ಯಾಕ್ ಟು ಬ್ಯಾಕ್ ಫ್ಲಾಪ್ ನೀಡಬಹುದು. ಆದರೆ, ಒಳ್ಳೆಯ ನಿರ್ದೇಶಕರು ಸಿಕ್ಕರೆ ಅವರು ಅದ್ಭುತ ಕಂಬ್ಯಾಕ್ ಮಾಡುತ್ತಾರೆ. ಚಿರಂಜೀವಿ ಅವರು ಇಂಡಸ್ಟ್ರಿಯನ್ನೇ ಬದಲಾಯಿಸಿದವರು. ಅವರು ಅನೇಕರಿಗೆ ಸ್ಫೂರ್ತಿ’ ಎಂದಿದ್ದಾರೆ ವಿಜಯ್.

ಇದನ್ನೂ ಓದಿ: ಯೋಗಿ ಆದಿತ್ಯನಾಥ್​ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ ರಜನಿಕಾಂತ್

ರಜನಿಕಾಂತ್ ಅಭಿಮಾನಿಗಳಿಗೆ ಈ ಉದಾಹರಣೆ ಇಷ್ಟವಾಗಿಲ್ಲ. ‘ರಜನಿಕಾಂತ್ ಅವರು ಬ್ಯಾಕ್ ಟು ಬ್ಯಾಕ್ ಆರು ಫ್ಲಾಪ್ ಸಿನಿಮಾಗಳನ್ನು ಎಲ್ಲಿ ನೀಡಿದ್ದಾರೆ? ದರ್ಬಾರ್ ಹಾಗೂ ಅಣ್ಣಾಥೆ ಸಾಮಾನ್ಯ ಹಿಟ್ ಸಿನಿಮಾಗಳು. ಅವು ಫ್ಲಾಪ್ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ವಿಜಯ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:42 pm, Tue, 22 August 23

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,