ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ ರಜನಿಕಾಂತ್
ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ರಿಲೀಸ್ಗೂ ಮೊದಲೇ ಹಿಮಾಲಯಕ್ಕೆ ತೆರಳಿದ್ದರು. ಆ ಬಳಿಕ ಅವರು ಆಗಮಿಸಿದ್ದು ಉತ್ತರ ಪ್ರದೇಶಕ್ಕೆ. ಅಲ್ಲಿ ಯೋಗಿ ಕಾಲಿಗೆ ಬಿದ್ದು ರಜನಿ ನಮಸ್ಕರಿಸಿದರು. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಈ ವಿಚಾರವಾಗಿ ರಜನಿಕಾಂತ್ ಮಾತನಾಡಿದ್ದಾರೆ.
ರಜನಿಕಾಂತ್ (Rajinikanth) ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದು ಅವರು ನಮಸ್ಕರಿಸಿದ್ದು. ರಜನಿಕಾಂತ್ ವಯಸ್ಸು 72. ಯೋಗಿ ಆದಿತ್ಯನಾಥ್ (Yogi Adityanath) ವಯಸ್ಸು 51. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ವಯಸ್ಸಿನಲ್ಲಿ ಚಿಕ್ಕವರಾಗಿದ್ದರೆ ಅಂಥವರಿಗೆ ನಮಸ್ಕರಿಸುವ ಪದ್ದತಿ ಇಲ್ಲ. ಆದರೆ, ರಜನಿಕಾಂತ್ ಆ ರೀತಿ ಮಾಡಿದ್ದರು. ಈ ಬಗ್ಗೆ ರಜನಿಕಾಂತ್ ಅವರು ಈಗ ಸ್ಪಷ್ಟನೆ ನೀಡಿದ್ದಾರೆ.
ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ರಿಲೀಸ್ಗೂ ಮೊದಲೇ ಹಿಮಾಲಯಕ್ಕೆ ತೆರಳಿದ್ದರು. ಅಲ್ಲಿ ಹಲವು ಸಾಧು ಸಂತರನ್ನು ಅವರು ಭೇಟಿ ಮಾಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬಳಿಕ ಅವರು ಆಗಮಿಸಿದ್ದು ಉತ್ತರ ಪ್ರದೇಶಕ್ಕೆ. ಅಲ್ಲಿ ಯೋಗಿ ಕಾಲಿಗೆ ಬಿದ್ದು ರಜನಿ ನಮಸ್ಕರಿಸಿದರು. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಈ ವಿಚಾರವಾಗಿ ರಜನಿಕಾಂತ್ ಮಾತನಾಡಿದ್ದಾರೆ.
‘ಸಾಧು-ಸಂತರನ್ನು ಕಂಡರೆ ಕಾಲಿಗೆ ಬೀಳುವುದು ನನ್ನ ಹವ್ಯಾಸ. ಅವರು ನನಗಿಂತ ಕಿರಿಯವರಾದರೂ ನಾನು ಹಾಗೆಯೇ ಮಾಡುತ್ತೇನೆ’ ಎಂದಿದ್ದಾರೆ ರಜನಿಕಾಂತ್. ಯೋಗಿ-ರಜನಿಕಾಂತ್ ಭೇಟಿಗೆ ಕೆಲವರು ರಾಜಕೀಯ ಬಣ್ಣ ಹಚ್ಚಲು ಪ್ರಯತ್ನಿಸಿದ್ದರು. ಈ ಬಗ್ಗೆಯೂ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ‘ನಾನು ಸಾಕಷ್ಟು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದೇನೆ. ಅದೊಂದು ಸಹಜ ಭೇಟಿ ಅಷ್ಟೇ. ಅದಕ್ಕಿಂತಲೂ ಹೆಚ್ಚಿನದ್ದೇನು ಇಲ್ಲ’ ಎಂದು ರಜನಿಕಾಂತ್ ಹೇಳಿದ್ದಾರೆ.
‘ಜೈಲರ್’ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ರೂಪಾಯಿ ದಾಟಿದೆ. ಇದು ರಜನಿಕಾಂತ್ ಖುಷಿ ಹೆಚ್ಚಿಸಿದೆ. ‘ಜೈಲರ್ಗೆ ದೊಡ್ಡ ಗೆಲುವು ತಂದುಕೊಟ್ಟ ತಮಿಳು ನಾಡು ಹಾಗೂ ವಿಶ್ವದ ಎಲ್ಲರಿಗೂ ಧನ್ಯವಾದ’ ಎಂದು ರಜನಿಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದ ರಜನಿಕಾಂತ್; ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟು?
‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಯಿತು. ಈ ಸಿನಿಮಾ ಎಲ್ಲ ಕಡೆಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೂರನೇ ವಾರವೂ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗಬಹುದು ಎನ್ನುವ ಕುತೂಹಲ ಮೂಡಿದೆ. ರಜನಿಕಾಂತ್ ಜೊತೆ, ಶಿವರಾಜ್ಕುಮಾರ್, ಮೋಹನ್ಲಾಲ್ ಮೊದಲಾದವರು ನಟಿಸಿದ್ದಾರೆ. ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಸದ್ದು ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ